ಟ್ವಿಟ್ಟರ್ ನಲ್ಲಿ ಮೈಲಿಗಲ್ಲು ನಿರ್ಮಿಸಿದ 'ಡಿ ಕಂಪನಿ'
Recommended Video
ಸೋಷಿಯಲ್ ಮೀಡಿಯಾದಲ್ಲಿ ಕನ್ನಡದ ಅನೇಕ ಸ್ಟಾರ್ ಗಳ ಅಭಿಮಾನಿಗಳು ಪೇಜ್ ಗಳನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಮೆಚ್ಚಿನ ನಟನ ಸಿನಿಮಾಗಳ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಆ ರೀತಿ ನಟ ದರ್ಶನ್ ಬಗ್ಗೆ ಇರುವ 'ಡಿ ಕಂಪನಿ' ಇದೀಗ ಮೈಲಿಗಲ್ಲು ನಿರ್ಮಿಸಿದೆ.
ಟ್ವಿಟ್ಟರ್ ನಲ್ಲಿ 'ಡಿ ಕಂಪನಿ 1 ಲಕ್ಷಕ್ಕೂ ಫಾಲೋವರ್ಸ್ ಪಡೆದುಕೊಂಡಿದೆ. ಟ್ವಿಟ್ಟರ್ ನಲ್ಲಿ ಈ ಮಟ್ಟಿಗೆ ಹಿಂಬಾಲಕರನ್ನು ಹೊಂದಿರುವ ಮೊದಲ ಫ್ಯಾನ್ ಪೇಜ್ ಇದಾಗಿದೆ. ಸತತ 9 ವರ್ಷಗಳಿಂದ ಪ್ರತಿ ದಿನವೂ ಈ ಪೇಜ್ ಮೂಲಕ ದರ್ಶನ್ ಕುರಿತಾದ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ.

'ಡಿ ಕಂಪನಿ'ಗೆ ನಟ ದರ್ಶನ್ ಸಹ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ಎಂದಿದ್ದಾರೆ. 'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ಕೂಡ ವಿಶ್ ಮಾಡಿದ್ದಾರೆ. ದರ್ಶನ್ ಅವರ ಇತರ ಅಭಿಮಾನಿಗಳು ಕೂಡ ಡಿ ಕಂಪನಿಗೆ ಶುಭ ಹಾರೈಸುತ್ತಿದ್ದಾರೆ.

ಸ್ಟಾರ್ ನಟರ ಹೆಸರಿನಲ್ಲಿ ಅನೇಕ ಪೇಜ್ ಗಳು ಸೋಷಿಯಲ್ ಮೀಡಿಯಾದಲ್ಲಿ ಇದ್ದು, ಸುಳ್ಳು ಸುದ್ದಿಗಳು, ಕೆಟ್ಟು ಸುದ್ದಿಗಳು, ಸ್ಟಾರ್ ವಾರ್ ಇವುಗಳನ್ನು ಮಾಡುವುದು ಹೆಚ್ಚಾಗುತ್ತಿದೆ. ಆದರೆ, ಡಿ ಕಂಪನಿ ತಂಡ ಇಂದಿಗೂ ತನ್ನ ಗೌರವವನ್ನು ಕಳೆದುಕೊಂಡಿಲ್ಲ. ದರ್ಶನ್ ಸಿನಿಮಾ, ವೈಯಕ್ತಿಕ ವಿಷಯಗಳನ್ನು ಬಿಟ್ಟರೆ ಬೇಡದ ವಿವಾದಕ್ಕೆ ಕೈ ಹಾಕಿಲ್ಲ. ಇದೇ ಇವರ ಮೈಲಿಗಲ್ಲಿಗೆ ಪ್ರಮುಖ ಕಾರಣ ಆಗಿರಬಹುದು.


Click it and Unblock the Notifications











