»   » ದರ್ಶನ್ ಬಾಂಬ್ ಸಿಡಿಸುವ ಮೊದಲೇ ಮುನ್ಸೂಚನೆ ಕೊಟ್ಟಿದ್ದ 'ಡಿ ಕಂಪನಿ'!

ದರ್ಶನ್ ಬಾಂಬ್ ಸಿಡಿಸುವ ಮೊದಲೇ ಮುನ್ಸೂಚನೆ ಕೊಟ್ಟಿದ್ದ 'ಡಿ ಕಂಪನಿ'!

By: BK
Subscribe to Filmibeat Kannada

ನಾಲ್ಕು ವರ್ಷದ ಹಿಂದಿನ ವಿಡಿಯೋ ಸಂದರ್ಶನವನ್ನಿಟ್ಟುಕೊಂಡು ಧಿಡೀರ್ ಅಂತ ದರ್ಶನ್ ಅವರು ಸುದೀಪ್ ವಿರುದ್ಧ ಯಾಕೆ ಬಹಿರಂಗವಾಗಿ ಮಾತನಾಡಿದರು ಎಂಬುದು ಸಾಕಷ್ಟು ಕುತೂಹಲ, ಚರ್ಚೆಗೆ ಕಾರಣವಾಗಿದೆ. ಆದ್ರೆ, ಎಲ್ಲರೂ ತಿಳಿಯಬೇಕಾದ ಸಂಗತಿ ಏನಪ್ಪಾ ಅಂದ್ರೆ, ದರ್ಶನ್ ಅವರ ಸರಣಿ ಟ್ವೀಟ್ ಬಗ್ಗೆ ಒಂದು ವಾರದ ಹಿಂದೆಯೇ 'ಡಿ-ಬಾಸ್' ಅಭಿಮಾನಿಗಳು ಮುನ್ಸೂಚನೆ ಕೊಟ್ಟಿದ್ರು.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಹೌದು, ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹ ಸಮರ ಇಂದು-ನಿನ್ನೆಯದಲ್ಲ. ಇಬ್ಬರ ನಡುವೆ ಹಲವು ವರ್ಷಗಳಿಂದನೂ ಮುನಿಸಿದೆ. ಅದರ ಪರಿಣಾಮ ಈಗ ದರ್ಶನ್ ಅವರು ಸ್ಪೋಟಿಸಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ದರ್ಶನ್ ಟ್ವೀಟ್ ಮಾಡೋದಕ್ಕೆ ಮುಂಚನೇ ಪರೋಕ್ಷವಾಗಿ ಹೇಳಿದ್ದರು.

ನಿಮಗೆ ನೆನಪಿದಿಯಾ?

ಫೆಬ್ರವರಿ 16 ರಂದು ನಟ ದರ್ಶನ್ ಅವರ ಹುಟ್ಟುಹಬ್ಬಕ್ಕೆ, ಸುದೀಪ್ ಒಂದು ದಿನ ಮುಂಚೆಯೇ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದರು.[ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್]

ದರ್ಶನ್ ಕಡೆಯಿಂದ ಒಂದು 'ಥ್ಯಾಂಕ್ಸ್' ಕೂಡ ಇಲ್ಲ!

ಹುಟ್ಟುಹಬ್ಬದ ದಿನ ಟ್ವಿಟ್ಟರ್ ನಲ್ಲಿ ಕನ್ನಡ ಚಿತ್ರರಂಗದ ಹಲವರು ನಟ-ನಟಿಯರು ದರ್ಶನ್ ಗೆ ವಿಶ್ ಮಾಡಿದ್ರು. ಅವರಿಗೆಲ್ಲ ದರ್ಶನ್ ಥ್ಯಾಂಕ್ಸ್ ಎಂದು ತಮ್ಮ ಟ್ವಿಟ್ಟರ್ ನಲ್ಲೇ ರಿಪ್ಲೈ ಮಾಡಿದ್ದರು. ಆದ್ರೆ, ಸುದೀಪ್ ಮಾಡಿದ್ದ ವಿಶ್ ಗೆ ಮಾತ್ರ ಒಂದು 'ಥ್ಯಾಂಕ್ಸ್' ಕೂಡ ಹೇಳಿರಲಿಲ್ಲ.[ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.? ]

ಆಗಲೇ ಅನುಮಾನ ಮೂಡಿತ್ತು!

ಯುವ ನಟ-ಯುವ ನಟಿಯರಿಗೆಲ್ಲ ರಿಪ್ಲೈ ಕೊಟ್ಟ ದಾಸ, ತಮ್ಮ ಗೆಳಯ ಸುದೀಪ್ ಗೆ ಮಾತ್ರ ಯಾಕೆ ರಿಪ್ಲೈ ಕೊಟ್ಟಿಲ್ಲ ಎಂಬುವುದು ಅಭಿಮಾನಿ ಬಳಗದಲ್ಲಿ ಕಾಡಿತ್ತು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

'ಡಿ-ಕಂಪನಿ' ಮೊದಲೇ ಸುಳಿವು ಕೊಟ್ಟಿದ್ದರು!

ದರ್ಶನ್ ಅವರು, ಸುದೀಪ್ ಅವರ ಮೇಲೆ ತಮ್ಮ ಬೇಸರವನ್ನ ವ್ಯಕ್ತಪಡಿಸುವುದಕ್ಕೂ ಕೆಲ ದಿನಗಳ ಹಿಂದೆಯೇ, ದರ್ಶನ್ ಅವರ ಅಫೀಶಿಯಲ್ ಅಭಿಮಾನಿ ಬಳಗ 'ಡಿ-ಕಂಪನಿ', ತಮ್ಮ ಫೇಸ್ ಬುಕ್ ನಲ್ಲಿ ಪರೋಕ್ಷವಾಗಿ ಸುದೀಪ್ ಮತ್ತು ದರ್ಶನ್ ಅವರ ಸ್ನೇಹ ಬಿರುಕಾಗಿದೆ ಎಂಬುದನ್ನ ಹೇಳಿದ್ದರು.

'ಡಿ-ಕಂಪನಿ' ಬರೆದಿದ್ದ ಸ್ಟೇಟಸ್!

''ಎಲ್ಲಾ ಡಿ ಬಾಸ್ ಅಭಿಮಾನಿಗಳಲ್ಲಿ ಒಂದು ವಿಷಯ ಸೂಚಿಸಲು ಇಚ್ಛಿಸುತ್ತೇವೆ. ಎಲ್ಲರಿಗೂ ತಿಳಿದಂತೆ ದರ್ಶನ್ ಸರ್ ವ್ಯಕ್ತಿತ್ವ ನೇರ, ದಿಟ್ಟ ಮತ್ತು ನಿಷ್ಕಲ್ಮಶವಾದ ಸ್ನೇಹಕ್ಕೆ ಬದ್ಧವಾಗಿರುತ್ತದೆ. ಮೊದಲಿನಿಂದಲೂ ಅವರ ಸ್ನೇಹವನ್ನು ದುರುಪಯೋಗ ಮಾಡಿಕೊಂಡ ವ್ಯಕ್ತಿಗಳೇ ಜಾಸ್ತಿ. ನಂಬಿಕೆಗೆ ಅರ್ಹವಲ್ಲದ ಕೆಲ ನಟರಿಂದ ದೂರ ಸರಿದು ಸುಮಾರು ವರ್ಷಗಳೇ ಕಳೆದಿವೆ. ಸಾಮಾಜಿಕ ತಾಣದಲ್ಲಿ ತೋರಿಕೆಯ ಸ್ನೇಹ ಬಾಸ್ ಗೆ ಬೇಕಿಲ್ಲ. ಈ ಸತ್ಯವನ್ನು ಎಲ್ಲರೂ ಅರಿತರೆ ಒಳಿತು'' ಎಂದು ಹಾಕಿದ್ದರು.

ಇದು ಯಾರಿಗೆ ಹೇಳಿದ್ದು?

ಈ ಸ್ಟೇಟಸ್ ನಲ್ಲಿ ಯಾರ ಹೆಸರು ಹೇಳದೆ, ದರ್ಶನ್ ಅಭಿಮಾನಿಗಳು ಕೊಟ್ಟ ಸಂದೇಶ ಯಾರಿಗೆ ಎಂಬುದು ಅಂದು ಗೊತ್ತಾಗಲಿಲ್ಲ. ಆದ್ರೆ, ಅಂದು ಹಾಕಲಾಗಿದ್ದ ಸ್ಟೇಟಸ್ ಯಾಕೆ ಎಂಬುದಕ್ಕೆ ಇಂದಿನ ಬೆಳವಣಿಗೆಗಳು ಪೂರಕವಾಗಿವೆ.

ಒಂದು ವಾರದ ಮುಂದೆಯೇ ಹೇಳಬೇಕಿತ್ತಂತೆ!

'ಕನ್ನಡ ಪ್ರಭ' ಸುದ್ದಿ ಪತ್ರಿಕೆಗೆ ದರ್ಶನ್ ನೀಡಿರುವ ಹೇಳಿಕೆಯ ಪ್ರಕಾರ, ಒಂದು ವಾರದ ಮುಂಚೆಯೇ ಈ ಬಗ್ಗೆ ಹೇಳಲು ದರ್ಶನ್ ನಿರ್ಧರಿಸಿದ್ದರಂತೆ. ಆದ್ರೆ, ಸುದೀಪ್ ಅವರ 'ಹೆಬ್ಬುಲಿ' ಚಿತ್ರ ಬಿಡುಗಡೆಯಾಗುತ್ತಿದ್ದ ಹಿನ್ನೆಲೆ ಸುಮ್ಮನಾಗಿದ್ದರಂತೆ.[ದರ್ಶನ್ ವಿಚಾರದಲ್ಲಿ 'ಡೆಡ್ಲಿ ಆದಿತ್ಯ' ಟಾಂಗ್ ಕೊಟ್ಟಿದ್ದು ಯಾರಿಗೆ?]

ಚಿತ್ರಕೃಪೆ-ಡಿ ಕಂಪನಿ

English summary
Challenging Star Darshan's Official Fans Followers Called D-Company Was Revealed Breakup Between Darshan and Sudeep Before 20 Days Back In Facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada