'ಮೆಜೆಸ್ಟಿಕ್' ‌ನಿರ್ಮಾಪಕರ ಜೊತೆ ದರ್ಶನ್ ಹ್ಯಾಟ್ರಿಕ್ ಸಿನಿಮಾ

ನಟ ದರ್ಶನ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರು ಆಗುತ್ತಿವೆ. ಇದೀಗ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಜೊತೆಗೆ ಮತ್ತೊಬ್ಬ ನಿರ್ಮಾಪಕರು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

ದರ್ಶನ್ ಮೊದಲ ಸಿನಿಮಾ 'ಮೆಜಸ್ಟಿಕ್'ಗೆ ಹಣ ಹಾಕಿದ್ದ ನಿರ್ಮಾಪಕ ರಾಮಮೂರ್ತಿ ಈಗ ದಶಕಗಳ ನಂತರ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಈ ಜೋಡಿಯ ಹ್ಯಾಟ್ರಿಕ್ ಚಿತ್ರ.

ಈ ಚಿತ್ರತಂಡ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದೆ. ದರ್ಶನ್ ಹುಟ್ಟುಹಬ್ಬದ ದಿನ ಈ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಲಿದೆ. ಅಂದಹಾಗೆ, ದರ್ಶನ್ ಹಾಗೂ ಎಮ್ ಜಿ ರಾಮಮೂರ್ತಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಆ ಸಿನಿಮಾದ ವಿವರ ಮುಂದಿದೆ ಓದಿ...

'ಡಿ 55' ಅನೌನ್ಸ್

'ಡಿ 55' ಅನೌನ್ಸ್

ದರ್ಶನ್ ಹಾಗೂ ಎಮ್ ಜಿ ರಾಮಮೂರ್ತಿ ಕಾಂಬಿನೇಶನ್ ಸಿನಿಮಾಗೆ ಸದ್ಯಕ್ಕೆ 'ಡಿ 55' ಎಂಬ ಹೆಸರಿನ್ನು ಇಡಲಾಗಿದೆ. ಇದು ದರ್ಶನ್ ನಟನೆಯ 55ನೇ ಸಿನಿಮಾವಾಗಿದೆ. ಈ ಸಿನಿಮಾದ ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಅನೌನ್ಸ್ ಆಗಿಲಿದೆ. ಈ ಮೂಲಕ ಬರ್ತ್ ಡೇ ದಿನ ಅಭಿಮಾನಿಗಳಿಗೆ ಈ ತಂಡ ಗಿಫ್ಟ್ ನೀಡುತ್ತಿದೆ.

ಹ್ಯಾಟಿಕ್ ಸಿನಿಮಾ

ಹ್ಯಾಟಿಕ್ ಸಿನಿಮಾ

ದರ್ಶನ್ ಗಾಗಿ ಎಮ್ ಜಿ ರಾಮಮೂರ್ತಿ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. 'ಮೆಜೆಸ್ಟಿಕ್' ಬಳಿಕ 'ಧರ್ಮ' ಕೂಡ ಎಮ್ ಜಿ ರಾಮಮೂರ್ತಿ ನಿರ್ಮಾಣದ ಸಿನಿಮಾವಾಗಿತ್ತು. ಇದೀಗ 15 ವರ್ಷಗಳ ನಂತರ ಮತ್ತೆ ರಾಮಮೂರ್ತಿ ಬ್ಯಾನರ್ ನಲ್ಲಿ ದರ್ಶನ್ ಸಿನಿಮಾ ಮಾಡುತ್ತಿದ್ದಾರೆ.

ನಿರ್ದೇಶಕರು ಯಾರು ?

ನಿರ್ದೇಶಕರು ಯಾರು ?

ದರ್ಶನ್ ಅವರ ಈ ಹೊಸ ಸಿನಿಮಾದ ನಿರ್ದೇಶಕರು ಯಾರು? ಎನ್ನುವುದು ಇನ್ನು ರಿವೀಲ್ ಆಗಿಲ್ಲ. ರಾಮಮೂರ್ತಿ ಹಾಗೂ ದರ್ಶನ್ ಚಿತ್ರದ ಟೈಟಲ್ 'ಮದಗಜ' ಆಗಬೇಕಾಗಿತ್ತು. ಆದರೆ, ಆ ಟೈಟಲ್ ಅನ್ನು ಶ್ರೀಮುರಳಿ ಸಿನಿಮಾಗೆ ದರ್ಶನ್ ಬಿಟ್ಟು ಕೊಟ್ಟರು.

ದರ್ಶನ್ ಮುಂದಿನ ಸಿನಿಮಾಗಳು

ದರ್ಶನ್ ಮುಂದಿನ ಸಿನಿಮಾಗಳು

ಮಾರ್ಚ್ 1 ರಂದು 'ಯಜಮಾನ' ಸಿನಿಮಾ ಬಿಡುಗಡೆಯಾಗುತ್ತಿದೆ. 'ಕುರುಕ್ಷೇತ್ರ' ರಿಲೀಸ್ ಗೆ ರೆಡಿ ಇದೆ. ಇದರ ನಂತರ ನಟ ದರ್ಶನ್ 'ಒಡೆಯ', 'ರಾಬರ್ಟ್', 'ಮದಕರಿ ನಾಯಕ' ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದಾರೆ.

More from Filmibeat

English summary
D55 kannada movie will be announcing on Darshan's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X