Don't Miss!
- Finance
ಅಂತಾರಾಷ್ಟ್ರೀಯ ಪಾವತಿ ಕ್ರಿಪ್ಟೋ ಬಳಕೆಗೆ ಮುಂದಾಗುತ್ತಾ ರಷ್ಯಾ?
- Sports
44ನೇ ಚೆಸ್ ಒಲಿಂಪಿಯಾಡ್: 189 ತಂಡಗಳು ಮುಕ್ತ ವಿಭಾಗದಲ್ಲಿ, 154 ಮಹಿಳಾ ವಿಭಾಗದಲ್ಲಿ ನೋಂದಣಿ
- News
ಮಂಕಿಪಾಕ್ಸ್ ನಿರ್ಲಕ್ಷ್ಯ ಬೇಡ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ಹುಷಾರ್ ಎಂದ ಡಬ್ಲ್ಯೂಎಚ್ಒ
- Automobiles
ಕಾರಿನ ಡ್ಯಾಶ್ಬೋರ್ಡ್ ಲೈಟ್ಗಳನ್ನು ಸರಿಪಡಿಸುವುದು ಹೇಗೆ?: ಇಲ್ಲಿವೆ ಕೆಲವು ಟಿಪ್ಸ್
- Technology
ಜೂಮ್ ಅಪ್ಲಿಕೇಶನ್ ಬಳಸುವವರು ಕೂಡಲೇ ಅಪ್ಡೇಟ್ ಮಾಡಿ!
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Lifestyle
ಮಳೆಗಾಲದಲ್ಲಿ ಕೂದಲು ದುರ್ವಾಸನೆ ಬೀರುವುದನ್ನು ತಡೆಗಟ್ಟುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಂಡಲ್ವುಡ್ನಲ್ಲಿ ಸಂಕ್ರಾಂತಿಗೆ ಏನೆಲ್ಲಾ ಸ್ಪೆಷನ್ ಗೊತ್ತಾ?
ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಹಬ್ಬಗಳು ಬಂತು ಅಂದರೆ ಸಾಕು ಸಿನಿಮಾ ಮಂದಿಗೆ ಒಂದು ರೀತಿಯ ವಿಶೇಷ ಸಂಭ್ರಮ, ಸಡಗರ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಿನಿಮಾಗಳ ಪೋಸ್ಟರ್, ಟೀಸರ್, ಹಾಡುಗಳು ರಿಲೀಸ್ ಆಗುತ್ತವೆ. ಈ ಬಾರಿ ಸಿನಿಮಾ ರಿಲೀಸ್ ಮಾಡುವ ಭಾಗ್ಯ ಇಲ್ಲದಂತಾಗಿದೆ. ಯಾಕೆಂದರೆ ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದ ಹಾಗೆ, ಈ ಚಿತ್ರ ಮಂದಿಗಳಿಗೆ ಬೀಗ ಹಾಕಾಗುತ್ತಿದೆ.
ಆದರೂ ಕೂಡ ಸ್ಯಾಂಡ್ವುಡ್ನಲ್ಲಿ ಸಂಕ್ರಾಂತಿ ಸಂಭ್ರದ ಕಳೆ ಕಡಿಮೆ ಆಗಿಲ್ಲ. ಸಿನಿಮಾ ಮಂದಿ ತಮ್ಮದೇ ಶೈಲಿಯಲ್ಲಿ ಹಬ್ಬದ ರಂಗು ಹೆಚ್ಚಿಸಲು ಮುಂದಾಗಿದ್ದಾರೆ. ಈ ಬಾರಿ ಹಬ್ಬದ ಮೆರುಗು ಹೆಚ್ಚಿಸಲು ವಿಶೇಷ ಪ್ರಕಟಣೆಗಳೊಂದಿಗೆ ಚಿತ್ರ ತಂಡಗಳು ಸಜ್ಜಾಗಿವೆ.
ಸಂಕ್ರಾಂತಿ ವಿಶೇಷ: ನಟ ಧನಂಜಯ್ ಹೊಸ ಚಿತ್ರ ಪ್ರಕಟ!
ಈ ಸಂಕ್ರಾಂತಿ ಹಬ್ಬಕ್ಕೆ ನಟ ಧನಂಜಯ್ ಹೊಸ ಚಿತ್ರ ಪ್ರಕಟ ಆಗಲಿದೆ. ಈ ಬಗ್ಗೆ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಕೆಆರ್ಜಿ ಕನೆಕ್ಷನ್ ನಿರ್ಮಾಣ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಪೋಸ್ಟರ್ನಲ್ಲಿ ಪೊಲೀಸ್ ವಾಹನ ಮತ್ತು ಹೈವೆ ಇರುವ ಚಿತ್ರಣ ಇದೆ. ಜೊತೆಗೆ ಜನವರಿ 14ರಂದು, 12.34ಕ್ಕೆ ಟೈಟಲ್ ಲಾಂಚ್ ಆಗಲಿದೆ. ಎಂದು ಬರೆಯಲಾಗಿದೆ. ಇನ್ನು ಈ ಪೋಸ್ಟರ್ ಹಂಚಿಕೊಂಡು, ರಾಕ್ಷಸ, ರಾಕ್ಷಸ "ಆರಕ್ಷಕ" ಎನ್ನುವ ಸಾಲು ಬರೆಯಲಾಗಿದೆ. ಹಾಗಾಗಿ ಇದು ಧನಂಜಯ್ ಅವರ ಸಿನಿಮಾ ಎನ್ನುವುದು ಪಕ್ಕಾ ಆಗಿದೆ.
'ಅಬ ಜಬ ದಬ' ಚಿತ್ರದ ನಾಯಕ, ನಾಯಕಿ ಪರಿಚಯ!
ಸಂಕ್ರಾಂತಿ ಹಬ್ಬಕ್ಕೆ ಕನ್ನಡದ 'ಅಬ ಜಬ ದಬ' ಚಿತ್ರ ಕೂಡ ವಿಶೇಷ ಪ್ರಕಟಣೆ ಮಾಡಿದೆ. ಈ ಚಿತ್ರದ ನಾಯಕ ಮತ್ತು ನಾಯಕಿ ಯಾರು ಎನ್ನುವುದನ್ನು ಪ್ರಕಟ ಮಾಡಲಿದೆ ಚಿತ್ರ ತಂಡ. ಜನವರಿ 15ರ ಬೆಳಿಗ್ಗೆ ನಾಯಕನ ಪರಿಚಯ ಮಾಡಿದರೆ, ಸಂಜೆ ನಾಯಕಿಯ ಪರಿಚಯ ಮಾಡಲಿದೆ ಚಿತ್ರ ತಂಡ. ಈ ಬಗ್ಗೆ ನಿರ್ದೇಶಕ ಮಯೂರ್ ರಾಘವೇಂದ್ರ ಮಾಹಿತಿ ಹಂಚಿ ಕೊಂಡಿದ್ದಾರೆ.

ಇದರ ಜೊತೆಗೆ ಮತ್ತಷ್ಟು ಚಿತ್ರಗಳು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡು ಸಜ್ಜಾಗಿವೆ. ಸಿನಿಮಾ ರಿಲೀಸ್ ಇಲ್ಲವಾದರು, ಚಿತ್ರದ ಅಪ್ಡೇಟ್ ನೀಡಿ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚು ಮಾಡಲು ಹಲವು, ಚಿತ್ರ ತಂಡಗಳು ಸಿದ್ದವಾಗಿವೆ.