ಹೊಸಬರ 'ದೈವ' ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಡಾಲಿ ಧನಂಜಯ್
ಸ್ಯಾಂಡಲ್‌ವುಡ್‌ನಲ್ಲಿ ಒಂದ್ಕಡೆ ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೇರುತ್ತಿದ್ದರೆ, ಇನ್ನೊಂದ್ಕಡೆ ಪಕ್ಕಾ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಹೆಚ್ಚಾಗುತ್ತಿದೆ. ಸಿನಿಮಾರಂಗಕ್ಕೆ ಎಂಟ್ರಿಕೊಡಬೇಕು ಅಂತಿರೋ ಹೊಸ ಪ್ರತಿಭೆಗಳೆಲ್ಲರೂ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಹೊಸ ಕಥೆಯೊಂದಿಗೆ ಮತ್ತೊಂದು ತಂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದೆ. ಅಂದ್ಹಾಗೆ, ಆ ಸಿನಿಮಾದ ಹೆಸರೇ 'ದೈವ'. ಈ ಸಿನಿಮಾದ ಹೆಸರು ಕೇಳಿದ ಕೂಡಲೇ 'ಕಾಂತಾರ' ನೆನಪಿಗೆ ಬರೋದು ಸಹಜ. ಆದರೆ, ಈ ತಂಡ ಬೇರೆಯದ್ದೇ ಪ್ರಕಾರದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ.
ಅಂದ್ಹಾಗೆ ಕಂಟೆಂಟ್ ಸಿನಿಮಾ 'ದೈವ'ದ ಚಿತ್ರೀಕರಣ ಅತೀ ಶೀಘ್ರದಲ್ಲಿಯೇ ಆರಂಭವಾಗುತ್ತಿದೆ. ಆದರೆ, ಅದಕ್ಕೂ ಮುನ್ನ ತಂಡ ಸಿನಿಮಾದ ಮೊದಲ ಫೋಸ್ಟರ್ ರಿಲೀಸ್ ಮಾಡಲು ಮುಂದಾಗಿತ್ತು. ಈ ಸಿನಿಮಾದ ಮೊದಲ ಪೋಸ್ಟರ್ ಅನ್ನು ಗುರುದೇವ್ ಹೊಯ್ಸಳ ಅಲಿಯಾಸ್ ಡಾಲಿ ಧನಂಜಯ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿ ಸಿನಿಮಾತಂಡಕ್ಕೆ ಡಾಲಿ ಶುಭ ಹಾರೈಸಿದ್ದಾರೆ.
ಜಯಮ್ಮ ಪದ್ಮರಾಜ್ ಈ 'ದೈವ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಂ.ಜೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಕಥೆ, ಚಿತ್ರಕಥೆ ಎರಡನ್ನೂ ನಿರ್ದೇಶಕರೇ ಬರೆದಿದ್ದಾರೆ. ಮೇ ಎರಡನೇ ವಾರದಲ್ಲಿ ಮಲೆನಾಡಿನ ಸುಂದರ ತಾಣಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ನವೆಂಬರ್ ತಿಂಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಚಿಂತಿಸಿದೆ. 'ದೈವ'ಗೆ ಸೀಕ್ರೆಟ್ ಆಫ್ ಬರ್ತ್ ಎಂಬ ಸಬ್ ಟೈಟಲ್ ಇರೋದ್ರಿಂದ ಗಮನ ಸೆಳೆಯುತ್ತಿದೆ.

ಇನ್ನು 'ದೈವ' ಸಿನಿಮಾಗೆ ಈಶ್ವರ್ ಮಲ್ನಾಡ್ ಹಾಡುಗಳನ್ನು ಬರೆದಿದ್ದಾರೆ. ವಿಜೇತ್ ಮಂಜಯ್ಯ ಟ್ಯೂನ್ ಹಾಕುತ್ತಿದ್ದು, ರಾಜು ಶಿರಾ ಛಾಯಾಗ್ರಹಣ, ಚಂದ್ರ ಮೌರ್ಯ ಸಹ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಎಂ.ಜೆ, ಅರುಣ್ ಬಚ್ಚನ್, ಸತೀಶ್, ನೀತು ರಾಯ್ ಮುಂತಾದವರು 'ದೈವ' ಸಿನಿಮಾದಲ್ಲಿ ನಟಿಸುತ್ತಿದ್ದು, ಬಹುತೇಕ ಹೊಸಬರ ತಂಡವೇ ಸೇರಿಕೊಂಡಿದೆ.


Click it and Unblock the Notifications











