'ಬಡವ ರಾಸ್ಕಲ್', 'ಹೆಡ್ ಬುಷ್', 'ಟಗರು ಪಲ್ಯ': ನಿರ್ಮಾಪಕನಾಗಿ ಡಾಲಿಗೆ ಹ್ಯಾಟ್ರಿಕ್ ಸಕ್ಸಸ್

By ಫಿಲ್ಮಿಬೀಟ್ ಡೆಸ್ಕ್

ಡಾಲಿ ಧನಂಜಯ್ ದೊಡ್ಡ ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಡಾಲಿ ಆರಂಭದ ದಿನಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ಸತತ ಸೋಲುಗಳ ಬಳಿಕ ಮತ್ತೆ ಯಶಸ್ಸಿನ ರುಚಿ ನೋಡುತ್ತಿರುವ ಡಾಲಿ ಧನಂಜಯ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಈಗಾಗಲೇ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಇನ್ನೊಂದು ಕಡೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಕೇವಲ ನಟನಾಗಿ ಅಷ್ಟೇ ಅಲ್ಲದೆ, ನಿರ್ಮಾಪಕನಾಗಿಯೂ ಗೆದ್ದು ಬೀಗಿದ್ದಾರೆ.

daali-dhananjay-hat-trick-success

ಇತ್ತೀಚೆಗಷ್ಟೇ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಿರ್ಮಿಸಿದ್ದ 'ಟಗರು ಪಲ್ಯ' ರಿಲೀಸ್ ಆಗಿದ್ದು, ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ವಾರದಲ್ಲಿ ಸಿನಿಮಾ ತಂಡ ಯಶಸ್ಸಿನ ಸಂಭ್ರಮದಲ್ಲಿ ತೇಲಾಡುತ್ತಿದೆ. ಈ ಮೂಲಕ ನಿರ್ಮಾಪಕನಾಗಿಯೂ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.

'ಟಗರು ಪಲ್ಯ' ಸಿನಿಮಾಗೂ ಮುನ್ನ ಡಾಲಿ ಧನಂಜಯ್ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಎರಡೂ ಸಿನಿಮಾಗಳಿಗೂ ಪ್ರೇಕ್ಷಕರಿಂದ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಮೂರನೇ ಸಿನಿಮಾ 'ಟಗರು ಪಲ್ಯ' ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಅಂದ್ಹಾಗೆ ಡಾಲಿ ಧನಂಜಯ್ ನಿರ್ಮಿಸಿದ್ದ ಮೊದಲ ಸಿನಿಮಾ 'ಬಡವ ರಾಸ್ಕಲ್'. ಈ ಸಿನಿಮಾದಲ್ಲಿ ಸ್ವತ: ಧನಂಜಯ್ ನಟಿಸಿದ್ದರು. ಮೊದಲ ಸಿನಿಮಾ ಮೂಲಕವೇ ನಿರ್ಮಾಪಕನಾಗಿ ಯಶಸ್ಸಿನ ರುಚಿ ಕಂಡಿದ್ದರು. ಮೊದಲ ಗೆಲುವಿನ ಬಳಿಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದರು.

daali-dhananjay-hat-trick-success

'ಬಡವ ರಾಸ್ಕಲ್' ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಯಶಸ್ಸು ಕಂಡಿದ್ದರು. ಇದೇ ಜೋಷನ್‌ನಲ್ಲಿ ಎರಡನೇ ಸಿನಿಮಾ 'ಹೆಡ್‌ ಬುಷ್‌'ಗೆ ಕೈ ಹಾಕಿದ್ದರು. ಬೆಂಗಳೂರಿನ ಭೂಗತ ಪಾತಾಕಿ ಡಾನ್ ಜಯರಾಜ್ ಜೀವನ ಕುರಿತು ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸ್ವತ: ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದರು.

'ಹೆಡ್ ಬುಷ್' ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಮೂಲಕ ಡಾಲಿ ಪಿಚ್ಚರ್‌ನ ಸಕ್ಸಸ್ ಲಿಸ್ಟ್‌ಗೆ ಎರಡನೇ ಸಿನಿಮಾ ಕೂಡ ಸೇರಿತ್ತು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ ಖುಷಿಯಲ್ಲಿ ಡಾಲಿ ಧನಂಜಯ್ 'ಟಗರು ಪಲ್ಯ' ಸಿನಿಮಾ ಕೈ ಹಾಕಿದ್ದರು. ಈ ಸಿನಿಮಾ ಧನಂಜಯ್ ಕೇವಲ ನಿರ್ಮಾಪಕರಷ್ಟೇ ಆಗಿದ್ದರು.

'ಟಗರು ಪಲ್ಯ' ಸಿನಿಮಾದಲ್ಲಿ ನಟ ನಾಗಭೂಷಣ್ ನಾಯಕನಾಗಿ ನಟಿಸಿದ್ದರೆ, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ 'ಟಗರು ಪಲ್ಯ'ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಕ್ಟೋಬರ್ 27ರಂದು ರಾಜ್ಯದ್ಯಂತ ರಿಲೀಸ್ ಆಗಿರೋ 'ಟಗರು ಪಲ್ಯ' ಸಿನಿಮಾ ಮೂರು ದಿನಗಳಲ್ಲಿ ಯಶಸ್ಸಿನ ರುಚಿ ಕಂಡಿದೆ.

'ಟಗರು ಪಲ್ಯ' ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಬಿಡುಗಡೆ ಆದ ಎರಡೇ ದಿನಕ್ಕೆ ಪ್ರೇಕ್ಷಕರ ಬೇಡಿಕೆ ಮೇರೆಗೆ ಥಿಯೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಡಾಲಿ ಪಿಚ್ಚರ್ ಸಂಸ್ಥೆಯಿಂದ ಮುಂದಿನ ಸಿನಿಮಾ ಯಾವುದು ಅನ್ನೋ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

More from Filmibeat

English summary
Daali Dhananjay Production House got hatrick success with Tagaru Palya Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X