Gurudev Hoysala: ಡಾಲಿ ಪ್ರಾಮಾಣಿಕನಾ? ಖಡಕ್ ಅಧಿಕಾರಿನಾ? ಎನ್‌ಕೌಂಟರ್‌ ಸ್ಪೆಷಲಿಸ್‌? ಮಾರ್ಚ್ 20ಕ್ಕೆ ರಿವೀಲ್

By ಫಿಲ್ಮಿಬೀಟ್ ಡೆಸ್ಕ್

ಮಾಸ್ ಅಂದ್ರೆ ಮಾಸ್, ಕ್ಲಾಸ್ ಅಂದ್ರೆ ಕ್ಲಾಸ್.. ಎಲ್ಲಾ ಪಾತ್ರಗಳಲ್ಲಿ ಒಗ್ಗಿಕೊಳ್ಳುವ ನಟ ಧನಂಜಯ್. ಸ್ಯಾಂಡಲ್‌ವುಡ್‌ನಲ್ಲಿ ವೇಗವಾಗಿ 25 ಸಿನಿಮಾಗಳಲ್ಲಿ ನಟಿಸಿ ಡಾಲಿ ಧನಂಜಯ್ ಸಂಭ್ರಮದಲ್ಲಿದ್ದಾರೆ. 'ಗುರುದೇವ್ ಹೊಯ್ಸಳ' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

ಡಾಲಿ ಧನಂಜಯ ಕನ್ನಡ ಚಿತ್ರರಂಗದ ಬ್ಯುಸಿ ನಟ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆ ನಿರ್ಮಾಣ, ಹಾಡು ಅಂತೆಲ್ಲಾನೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಸದಾ ವಿಭಿನ್ನ ಪಾತ್ರಗಳಿಗೆ ಹುಡುಕಾಡುವ ಡಾಲಿ ಧನಂಜಯ್ ತಮ್ಮ ಸಿನಿ ಜರ್ನಿಯ ಸಿಲ್ವರ್ ಜೂಬ್ಲಿ ಸಂಭ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಅಂದ್ಹಾಗೆ ಧನಂಜಯ ಅಭಿನಯದ 25ನೇ ಸಿನಿಮಾ 'ಗುರುದೇವ್ ಹೊಯ್ಸಳ'. ಇದೇ ಸಿನಿಮಾ ಮಾರ್ಚ್ 30ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭರವಸೆ ಹೆಚ್ಚಿಸಿದ್ದು, ಡಾಲಿ ಖಡಕ್ ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಡಾಲಿ ಕಂಡಿರದ ಮ್ಯಾನರಿಸಂನಲ್ಲಿ 'ಗುರುದೇವ್ ಹೊಯ್ಸಳ' ಅವತಾರವೆತ್ತಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಲಿದ್ದಾರೆ.

Daali Dhananjay Starrer Gurudev Hoysala Movie Trailer Will Be Releasing On March 20th

ಈಗಾಗಲೇ 'ಗುರುದೇವ್ ಹೊಯ್ಸಳ' ಸಿನಿಮಾದ ಹಾಡುಗಳು ಹಾಗೂ ಟೀಸರ್ ರಿಲೀಸ್ ಆಗಿವೆ. ಇವು ಪ್ರೇಕ್ಷಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿವೆ. ಈಗ ಎಲ್ಲರ ಕಣ್ಣು 'ಗುರುದೇವ್ ಹೊಯ್ಸಳ' ಸಿನಿಮಾದ ಟ್ರೈಲರ್ ಮೇಲೆ ಬಿದ್ದಿದೆ. ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇರುವಾಗಲೇ ಅಭಿಮಾನಿಗಳು ಕಾತುರ ತಣಿಸಲು ಚಿತ್ರತಂಡ ಸಜ್ಜಾಗಿದೆ.

'ಗುರುದೇವ್ ಹೊಯ್ಸಳ' ಸಿನಿಮಾ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಮಾರ್ಚ್ 20ರ ಸಂಜೆ 7.29ಕ್ಕೆ 'ಗುರುದೇವ್ ಹೊಯ್ಸಳ' ಸಿನಿಮಾದ ಟ್ರೈಲರ್ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. 'ಗುರುದೇವ್ ಹೊಯ್ಸಳ' ಸಿನಿಮಾದ ಟ್ರೈಲರ್‌ನಲ್ಲಿ ನಾಯಕ ನಟ ಪ್ರಾಮಾಣಿಕ ಅಧಿಕಾರಿನಾ? ನಟರಾಕ್ಷಸನ ರೀತಿ ಭಯಂಕರ ಖಡಕ್ ಅಧಿಕಾರಿನಾ? ಇಲ್ಲಾ ಎನ್‌ಕೌಂಟರ್‌ ಸ್ಪೆಷಲಿಸ್‌? ಈ ಎಲ್ಲ ಪ್ರಶ್ನೆಗಳಿಗೂ ಟ್ರೈಲರ್‌ನಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.

ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸದ್ದು ಮಾಡುತ್ತಿರುವ ಈ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ.

Daali Dhananjay Starrer Gurudev Hoysala Movie Trailer Will Be Releasing On March 20th

'ಗುರುದೇವ್ ಹೊಯ್ಸಳ' ಒಂದು ಸೋಶಿಯಲ್ ಮೆಸೇಜ್ ಜೊತೆ ಪಕ್ಕಾ ಕಮರ್ಷಿಯಲ್ ಎಲಿಮೆಂಟ್‌ಗಳನ್ನು ಇಟ್ಟುಕೊಂಡು ನಿರ್ಮಿಸಿರೋ ಸಿನಿಮಾ. ವಿಜಯ್. ಎನ್ 'ಗುರುದೇವ್ ಹೊಯ್ಸಳ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇನ್ನು ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Daali Dhananjay Starrer Gurudev Hoysala Movie Trailer Will Be Releasing On March 20th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X