Daredevil Musthafa: ಬದಲಾಯ್ತು ಡಾಲಿ ಡೈಲಾಗ್: "ಬಡವ್ರ ಮನೆ ಮಕ್ಳ್ ಕಿಡ್ನಿ ಉಳಿಬೇಕು" ಎಂದಿದ್ದೇಕೆ ಧನಂಜಯ?
'ಹೆಡ್‌ಬುಷ್' ಸಿನಿಮಾ ಪ್ರಮೋಷನ್ ವೇಳೆ ನಟ ಧನಂಜಯ್ 'ಬಡವರ ಮಕ್ಳು ಬೆಳಿಬೇಕ್ ಕಣ್ರಯ್ಯ' ಎನ್ನುವ ಡೈಲಾಗ್ ಹೇಳಿದ್ದರು. ಆ ಸಿನಿಮಾ ವಿವಾದ ಸೃಷ್ಟಿಸಿದಾಗ ಈ ಡೈಲಾಗ್ ಸಖತ್ ವೈರಲ್ ಆಗಿತ್ತು. 'ಬಡವರ ಮಕ್ಳು ಬೆಳಿಬೇಕ್ ಕಣ್ರಯ್ಯ' ಎನ್ನುತ್ತ ಸಾಕಷ್ಟು ಜನ ಧನು ಬೆಂಬಲಕ್ಕೆ ನಿಂತಿದ್ದರು. ಇದೀಗ ಈ ಡೈಲಾಗ್ ಕೊಂಚ ಬದಲಾಗಿದೆ. "ಬಡವ್ರ ಮನೆ ಮಕ್ಳ್ ಕಿಡ್ನಿ ಉಳಿಬೇಕು" ಧನಂಜಯ ಹೇಳಿದ್ದಾರೆ. ಅದು ಗಮನ ಸೆಳೆದಿದೆ.
ಇತ್ತೀಚಿಗೆ ನಟ ಡಾಲಿ ಧನಂಜಯ 'ಆರ್ಕೇಸ್ಟ್ರಾ ಮೈಸೂರು' ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಸ್ನೇಹಿತರ ಬಳಗ ಮಾಡಿದ್ದ ಚಿತ್ರವನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗಿದ್ದರು. ಇದೀಗ ಮತ್ತೊಂದು ಚಿತ್ರಕ್ಕೆ ಡಾಲಿ ಬಂಬೆಲವಾಗಿ ನಿಲ್ಲುತ್ತಿದ್ದಾರೆ. ಅದು ಕೂಡ ಪೂರ್ಣಚಂದ್ರ ತೇಜಸ್ವಿ ಅಭಿಮಾನಿ ಆಗಿ ಅನ್ನೋದು ವಿಶೇಷ. ಹೌದು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳೆಲ್ಲಾ ಸೇರಿ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಚಿತ್ರವನ್ನು ಡಾಲಿ ತಮ್ಮ ಬ್ಯಾನರ್ ಮೂಲಕ ರಿಲೀಸ್ ಮಾಡ್ತಿದ್ದಾರೆ.

ನಟ ಧನಂಜಯ ಸಾಕಷ್ಟು ಸಾಹಿತ್ಯ ಓದಿಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳ ದೊಡ್ಡ ಅಭಿಮಾನಿ ಕೂಡ. ಪೂರ್ಣಚಂದ್ರ ತೇಜಸ್ವಿ ಬರೆದ 'ಡೇರ್ಡೆವಿಲ್ ಮುಸ್ತಾಫಾ' ಸಣ್ಣ ಕಥೆ ಆಧರಿಸಿ ನಿರ್ದೇಶಕ ಶಶಾಂಕ್ ಸೊಗ್ಗಾಲ್ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದರೆ ತೇಜಸ್ವಿಯವರ 100 ಮಂದಿ ಅಭಿಮಾನಿಗಳು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಪ್ರಮೋಷನ್ ಭಾಗವಾಗಿ ಒಂದು ಸ್ಪೆಷಲ್ ಪ್ರೋಮೊ ರಿಲೀಸ್ ಆಗಿದೆ. ಚಿತ್ರವನ್ನು ತಮ್ಮ ಬ್ಯಾನರ್ ಮೂಲಕ ರಿಲೀಸ್ ಮಾಡೋದಾಗಿ ಧನಂಜಯ ಘೋಷಿಸಿದ್ದಾರೆ.
ಸದ್ಯ ಫನ್ನಿ ಪ್ರೋಮೊ ರಿಲೀಸ್ ಆಗಿ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ಸದ್ದು ಮಾಡ್ತಿದೆ. ಚಿತ್ರಕ್ಕಾಗಿ ಕಿಡ್ನಿ ಮಾರಿಕೊಂಡೆ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಾರೆ. ಸೂಟ್‌ಕೇಸ್ ಹಿಡಿದುಕೊಂಡು ಬಂದು ಸರ್‌ಪ್ರೈಸ್ ಕೊಡುವ ಧನಂಜಯ 'ಬಡವರ ಮಕ್ಳು ಬೆಳಿಬೇಕ್ ಕಣ್ರಯ್ಯ' ಎಂದು ಡೈಲಾಗ್ ಹೇಳಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಮುಸ್ತಾಫಾ ಆಗಿ ಯಾರು ನಟಿಸಿದ್ದಾರೆ ಎನ್ನುವುದನ್ನು ತೋರಿಸಿಲ್ಲ. ಶೀಘ್ರದಲ್ಲೇ ಸಿನಿಮಾ ಹೀರೊ ಯಾರು ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಲಿದೆ. ನವನೀತ್ ಶಾಮ್ ಸಂಗೀತ, ರಾಹುಲ್ ರಾಯ್ ಸಿನಿಮಾಟೋಗ್ರಫಿ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರಕ್ಕಿದೆ.

ಸಾಹಿತಿ ಒಬ್ಬರ 100 ಜನ ಅಭಿಮಾನಿಗಳು ಸೇರಿ ಒಂದು ಸಿನಿಮಾ ನಿರ್ಮಾಣ ಮಾಡುವ ಕಾನ್ಸೆಪ್ಟ್ ಇದೇ ಮೊದಲು. ಆ ಮೂಲಕ 'ಡೇರ್ಡೆವಿಲ್ ಮುಸ್ತಾಫಾ' ಹೊಸ ದಾಖಲೆ ಬರೆದಿದೆ. ಡೇರ್ಡೆವಿಲ್ ಸೆಲೆಬ್ರೆಟಿ ಪ್ರೋಮೊಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಡಾಲಿ ಎಂಟ್ರಿಯಿಂದ ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











