ಡಾಲಿ 26ನೇ ಸಿನಿಮಾ: "ಕ್ವಾಲಿಟಿ ಬೇಕು, ಕ್ವಾಂಟಿಟಿ ಅಲ್ಲ".. "ದೊಡ್ಡ ಸಿನಿಮಾ ಮಾಡಿ ಚಿಕ್ಕದು ಬೇಡ"

ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಶುಕ್ರವಾರವಷ್ಟೇ 'ಮಾನ್ಸೂನ್ ರಾಗ' ಸಿನಿಮಾ ರಿಲೀಸ್ ಆಗಿದೆ. ಇದೀಗ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ತಮಿಳಿನ 'ಪೆಂಗ್ವಿನ್' ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಮುಂದಿನ ಚಿತ್ರಕ್ಕೆ ಧನಂಜಯ್ ಆಯ್ಕೆ ಆಗಿದ್ದಾರೆ.

ಪ್ರೊಡಕ್ಷನ್‌ ನಂಬರ್ 1 ಹೆಸರಿನಲ್ಲಿ ಸಿನಿಮಾ ಅನೌನ್ಸ್ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಭಿನ್ನ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಧನುಗೆ ಬಿಟ್ಟಿ ಸಲಹೆಗಳನ್ನು ಕೊಡುತ್ತಿದ್ದಾರೆ. ನಟ ಧನಂಜಯ್ 'ಹೊಯ್ಸಳ' ಬಿಟ್ಟು ಉಳಿದಂತೆ ಕೈಲಿದ್ದ ಎಲ್ಲಾ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. 'ಪುಷ್ಪ- 2' ಶೂಟಿಂಗ್ ಇನ್ನಷ್ಟೆ ಶುರುವಾಗಬೇಕಿದೆ. ಇದರ ನಡುವೆಯೇ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗು, ತಮಿಳು, ಕನ್ನಡದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಇದೊಂದು ಮಲ್ಟಿಸ್ಟಾರರ್ ಸಿನಿಮಾ ಎನ್ನುವುದು ಗೊತ್ತಾಗ್ತಿದ್ದು, ತೆಲುಗುನ ನಟ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಬಾಲ ಸುಂದರಂ ಹಾಗೂ ದಿನೇಶ್ ಸುಂದರಂ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

 ದೊಡ್ಡ ಸಿನಿಮಾ ಮಾಡಿ ಚಿಕ್ಕದು ಬೇಡ

ದೊಡ್ಡ ಸಿನಿಮಾ ಮಾಡಿ ಚಿಕ್ಕದು ಬೇಡ

ನಟ ಧನಂಜಯ್ ಟ್ವೀಟ್ ಮಾಡಿ ತಮ್ಮ 26ನೇ ಸಿನಿಂಆ ಅನೌನ್ಸ್ ಮಾಡುತ್ತಿದ್ದಂತೆ ಸಾಕಷ್ಟು ಜನ ಕಾಮೆಂಟ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದರೆ ಕೆಲವರು ಸಲಹೆಗಳನ್ನು ಕೊಡುತ್ತಿದ್ದಾರೆ. "ದೊಡ್ಡ ಸಿನಿಮಾ ಮಾಡಿ. ಸಣ್ಣ ಚಿತ್ರಗಳಿಗೆ ಸಹಿ ಮಾಡುವುದುನ್ನು ನಿಲ್ಲಿಸಿ. 'ಹೆಡ್‌ಬುಷ್' ಹಾಗೂ 'ಹೊಯ್ಸಳ' ನೀವು ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಬೇಕು ಎಂದಿದ್ದಾರೆ". ಇದಕ್ಕೆ ಪ್ರತಿಕ್ರಿಯಿಸಿರುವ ಧನಂಜಯ್ "ಅನೌನ್ಸ್‌ಮೆಂಟ್ ನೋಡಿ ನೀವು ದೊಡ್ಡದು ಚಿಕ್ಕದು ಎಂದು ಹೇಗೆ ನಿರ್ಧರಿಸುತ್ತೀರಾ?" ನಿಮ್ಮ ಕಾಳಜಿಗೆ ಧನ್ಯವಾದ" ಎಂದಿದ್ದಾರೆ.

 ಕ್ವಾಲಿಟಿ ಸಿನಿಮಾ ಬೇಕು, ಕ್ವಾಂಟಿಟಿ ಅಲ್ಲ

ಕ್ವಾಲಿಟಿ ಸಿನಿಮಾ ಬೇಕು, ಕ್ವಾಂಟಿಟಿ ಅಲ್ಲ

ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿ "ಜಾಸ್ತಿ ಸಿನಿಮಾಗಳನ್ನು ಮಾಡ್ತಿದ್ದೀರಾ. ಕ್ವಾಲಿಟಿ ಇರುವ ಸಿನಿಮಾಗಳು ಬೇಕು. ಕ್ವಾಂಟಿಟಿ ಮುಖ್ಯ ಅಲ್ಲ" ಎಂದಿದ್ದಾರೆ. ಮತ್ತೊಬ್ಬರು ರೀಮೆಕ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗೆ ಧನಂಜಯ್ ಟ್ವೀಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿದೆ.

 ಸಖತ್ ಕಿಕ್ ಕೊಡಲಿದೆ ಸಿನಿಮಾ

ಸಖತ್ ಕಿಕ್ ಕೊಡಲಿದೆ ಸಿನಿಮಾ

ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾ ಇದು ಎನ್ನಲಾಗ್ತಿದೆ. ಮಣಿಕಂಠನ್ ಕೃಷ್ಣಮಾಚಾರಿ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. 'ಟಗರು' ಸಿನಿಮಾ ಖ್ಯಾತಿಯ ಸೆನ್ಸೇಷನಲ್ ಸಂಗೀತ ನಿರ್ದೇಶಕ ಚರಣ್‌ ರಾಜ್ ಈ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ವಿಶೇಷ ಅಂದರೆ ಧನಂಜಯ ಜೊತೆಗೆ ತೆಲುಗು ನಟ ಸತ್ಯದೇವ್ ಕೂಡ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ.

 ಡಾಲಿ- ಸತ್ಯದೇವ್ ಇಬ್ಬರಿಗೂ 26ನೇ ಸಿನಿಮಾ

ಡಾಲಿ- ಸತ್ಯದೇವ್ ಇಬ್ಬರಿಗೂ 26ನೇ ಸಿನಿಮಾ

ಅಂದಹಾಗೆ ಪ್ರೊಡಕ್ಷನ್‌ ನಂ.1 ಮಲ್ಟಿಸ್ಟಾರರ್ ಸಿನಿಮಾ. ಧನಂಜಯ್ ಜೊತೆ ತೆಲುಗು ನಟ ಸತ್ಯದೇವ್ ಕೂಡ ನಟಿಸ್ತಿದ್ದಾರೆ. ವಿಶೇಷ ಅಂದರೆ ಇಬ್ಬರಿಗೂ ಇದು ತಮ್ಮ ಕರಿಯರ್‌ನ 26ನೇ ಸಿನಿಮಾ. ಎರಡು ಬೇರೆ ಬೇರೆ ಥೀಮ್‌ನಲ್ಲಿ ಪೋಸ್ಟರ್ ರಿಲೀಸ್‌ ಆಗಿದೆ. ತೆಲುಗು ಪೋಸ್ಟರ್‌ ಕೆಂಪು ಬಣ್ಣದಲ್ಲಿದ್ದು, ಕುದುರೆಯ ಚಿತ್ರವಿದೆ. ಕನ್ನಡ ಪೋಸ್ಟರ್‌ನಲ್ಲಿ ಗ್ರೇ ಥೀಮ್ ಹೈಲೆಟ್ ಆಗಿದೆ. ವಿಭಿನ್ನ ಪೋಸ್ಟರ್‌ಗಳ ಮೂಲಕ ಇಬ್ಬರ ಪಾತ್ರಗಳ ಬಗ್ಗೆ ಹಿಂಟ್ ಕೊಟ್ಟಿದೆ ಚಿತ್ರತಂಡ.

More from Filmibeat

English summary
Daali Dhananjaya and Telugu Actor Satyadev join hands for a multi starrer Project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X