"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್‌ಮೆಂಟ್‌ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್

ಡಾಲಿ ಧನಂಜಯ ನಟನೆಯ 'ಹೊಯ್ಸಳ' ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಧನು ಒನ್ಸ್ ಅಗೇನ್ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಖಾಕಿ ಖದರ್ ತೋರ್ಸಿದ್ದಾರೆ. ಒಳ್ಳೆವ್ನಾ ಕೆಟ್ಟವ್ನಾ ಎನ್ನುವ ಅನುಮಾನ ಮೂಡುವಷ್ಟು ರಫ್‌ ಅಂಡ್ ಟಫ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ.

ಗುರುದೇವ್ 'ಹೊಯ್ಸಳ' ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರಕ್ಕೆ ಡಾಲಿ ಧನಂಜಯ ಜೀವ ತುಂಬಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾ ನಿರ್ದೇಶಿಸಿದ್ದ ವಿಜಯ್ .ಎನ್‌ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದರೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀಶ್ ಶಂಕರ್, ರಾಘು ಶಿವಮೊಗ್ಗ ಪ್ರಧಾನ ಪಾತ್ರ ವರ್ಗದಲ್ಲಿದ್ದಾರೆ.

ಮಾರ್ಚ್ 30ಕ್ಕೆ 'ಹೊಯ್ಸಳ' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಕಾರ್ತಿಕ್ ಸಿನಿಮಾಟೋಗ್ರಫಿ ಹಾಗೂ ಅಜನೀಶ್ ಲೋಕನಾಥ್ ಮ್ಯೂಸಿಕ್ ಈ ಪೊಲೀಸ್ ಡ್ರಾಮಾ ಸಿನಿಮಾದ ಮತ್ತೊಂದು ಹೈಲೆಟ್.

ಅಸಿಸ್ಟೆಂಟ್ ಕಮೀಷನರ್ ಗುರುದೇವ್

ಅಸಿಸ್ಟೆಂಟ್ ಕಮೀಷನರ್ ಗುರುದೇವ್

ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಅಸಿಸ್ಟೆಂಟ್ ಕಮೀಷನರ್ ಗುರುದೇವ್ 'ಹೊಯ್ಸಳ' ಆಗಿ ಧನು ಕಾಣಿಸಿಕೊಂಡಿದ್ದಾರೆ. ಗಡಿ ನಾಡಿನಲ್ಲಿ ಬಹುತೇಕ ಸಿನಿಮಾ ಕಥೆ ನಡೆಯುತ್ತದೆ. ಅಲ್ಲಿ ನಡೆಯುವ ಪ್ರತಿಭಟನೆ ಗಲಾಟೆಯನ್ನು ತಡೆಯುವ ನಿಟ್ಟಿನಲ್ಲಿ ಗುರುದೇವ್ ಮತ್ತವರ ಪೊಲೀಸ್ ಪಡೆ ಕೆಲಸ ಮಾಡುತ್ತದೆ ಎನ್ನುವ ಸನ್ನಿವೇಶದ ಝಲಕ್ ಅನ್ನು ಟೀಸರ್‌ನಲ್ಲಿ ನೋಡ್ಬೋದು. ಇನ್ನು ಸಾಕಷ್ಟು ಆಕ್ಷನ್ ಸನ್ನಿವೇಶಗಳನ್ನು ಸೇರಿಸಿ ಜಬರ್ದಸ್ತ್‌ ಟೀಸರ್ ಕಟ್ ಮಾಡಿದ್ದಾರೆ.

ಅಚ್ಯುತ್ ಕುಮಾರ್ ಡೈಲಾಗ್ ಸೂಪರ್

ಅಚ್ಯುತ್ ಕುಮಾರ್ ಡೈಲಾಗ್ ಸೂಪರ್

ಬೆಳಗಾವಿ ಹಾಗೂ ಅಥಣಿ ಭಾಗದಲ್ಲಿ ನಡೆಯುವ ಕಥೆ ಇದು. ಸಮಾಜದ ಒಂದು ಪ್ರಮುಖ ಸಮಸ್ಯೆಯೊಂದರ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಅದೇನು ಎನ್ನುವುದನ್ನು ತೆರೆಮೇಲೆ ನೋಡಬೇಕು. ಹೆಸರಿಗೆ ತಕ್ಕಂತೆ ರುತ್‌ಲೆಸ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳ ಆಗಿ ಡಾಲಿ ಅಬ್ಬರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ಬಹುತೇಕ ಸಿನಿಮಾ ಮೂಡಿ ಬಂದಿರುವಂತೆ ಕಾಣುತ್ತಿದೆ. ಹೊಯ್ಸಳನ ಪಾತ್ರ ಎಂಥದ್ದು ಎಂದು ಹೇಳುವ ಅಚ್ಯುತ್‌ ಕುಮಾರ್ ಡೈಲಾಗ್‌ವೊಂದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಧನು 25ನೇ ಸಿನಿಮಾ 'ಹೊಯ್ಸಳ'

ಧನು 25ನೇ ಸಿನಿಮಾ 'ಹೊಯ್ಸಳ'

ಟೈಟಲ್‌ನಿಂದಲೇ 'ಹೊಯ್ಸಳ' ಸಿನಿಮಾ ಕುತೂಹಲ ಕೆರಳಿಸಿದೆ. 'ಸಲಗ' ಚಿತ್ರದಲ್ಲಿ ಬೆಂಗಳೂರಿನ ಸಮಸ್ಯೆ ವಿರುದ್ಧ ಹೋರಾಡುವ ಪೊಲೀಸ್ ಆಫೀಸರ್ ಸಾಮ್ರಾಟ್ ಪಾತ್ರದಲ್ಲಿ ಧನಂಜಯ ಮಿಂಚಿದ್ದರು. ಆದರೆ ಈ ಚಿತ್ರದಲ್ಲಿ ಅದಕ್ಕಿಂತ ಭಿನ್ನವಾದ ದೊಡ್ಡದಾದ ಸಮಸ್ಯೆ ವಿರುದ್ಧ ಹೋರಾಟ ನಡೀತಿದೆ. ಅಂದಹಾಗೆ ಇದು ಧನು ನಟನೆಯ 25ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಮೈಲಿಗಲ್ಲು ಚಿತ್ರದಲ್ಲಿ ಒಂದು ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸುದೀಪ್ ಟೀಸರ್ ಲಾಂಚ್

ಸುದೀಪ್ ಟೀಸರ್ ಲಾಂಚ್

ಹೊಸ ರೀತಿಯ ನಿರೂಪಣೆ ಹಾಗೂ ಧನು ಪಾತ್ರ ಪೋಷಣೆ 'ಹೊಯ್ಸಳ' ಚಿತ್ರದಲ್ಲಿದೆ ಎನ್ನುವುದು ಟೀಸರ್‌ನಲ್ಲಿ ಗೊತ್ತಾಗ್ತಿದೆ. ಮಾರ್ಚ್ 30ಕ್ಕೆ ಚಿತ್ರವನ್ನು ದೊಡ್ಡದಾಗಿ ರಿಲೀಸ್ ಮಾಡಲಾಗುತ್ತಿದೆ.ಅದಕ್ಕೆ ತಕ್ಕಂತೆ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರಕ್ಕೆ ಮಾಸ್ತಿ ಸಂಭಾಷಣ್ ಬರೆದಿದ್ದಾರೆ. ಪಾತ್ರಕ್ಕಾಗಿ 8 ಕೆಜಿ ತೂಕ ಇಳಿಸಿಕೊಂಡು ಧನಂಜಯ ನಟಿಸಿದ್ದಾರೆ. ಕಿಚ್ಚ ಸುದೀಪ್ 'ಹೊಯ್ಸಳ' ಟೀಸರ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ.

More from Filmibeat

English summary
Daali Dhananjaya Starrer Hoysala Teaser Released. Vijay .N Directed Hoysala Movie To Release on March 30. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X