Dhananjaya | 'ಪುಷ್ಪ 2'ನಲ್ಲಿ ನನ್ನ ಪಾತ್ರ ಹೇಗಿರುತ್ತೆ ಅಂತ ಇನ್ನು ಗೊತ್ತಿಲ್ಲ -ಧನಂಜಯ್
ನಟ ಡಾಲಿ ಧನಂಜಯ್ ಕನ್ನಡದ ಹಲವಾರು ಸಿನಿಮಾಗಳ ಜೊತೆಗೆ ತೆಲುಗಿನ 'ಪುಷ್ಪ' ಚಿತ್ರದ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಡಾಲಿ ಧನಂಜಯ್, 'ಪುಷ್ಪ' ಸಿನಿಮಾದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿದ್ದಾರೆ. ಡಾಲಿ ನಟಿಸಿದ್ದ ತೆಲುಗು ಸಿನಿಮಾ 'ಭೈರವಗೀತ' ನೋಡಿದ್ದ ಸುಕುಮಾರ್, ಡಾಲಿಯ ನಟನೆ ಇಷ್ಟವಾಗಿ ಅವರನ್ನು ಜಾಲಿ ರೆಡ್ಡಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಇದೀಗ 'ಪುಷ್ಪ 2' ಮೇಲೆ ಎಲ್ಲರ ನಿರೀಕ್ಷೆ ಇದ್ದು, ಧನಂಜಯ್ ಪಾತ್ರ ಹೇಗೆ ಸಾಗುತ್ತೆ? ಎಷ್ಟು ಹೊತ್ತು ಸಿನಿಮಾದಲ್ಲಿ ಇರಲಿದ್ದಾರೆ ಎಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಬಗ್ಗೆ ಸ್ವತಃ ಡಾಲಿ ಧನಂಜಯ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿ ತನ್ನ ಪಾತ್ರ ಹೇಗಿರುತ್ತೆ? ಅನ್ನೋದೆ ನನಗೆ ಗೊತ್ತಿಲ್ಲ, ಇನ್ನು ಶೂಟಿಂಗ್ ಆರಂಭ ಆಗಿಲ್ಲ. ಪಾತ್ರ ಹೇಗೆ ಇದ್ದರೂ, ನಟಿಸೋದಕ್ಕೆ ಖುಷಿ ಇದೆ ಎಂದು ತನ್ನ ಮಾತು ಹಂಚಿಕೊಂಡಿದ್ದಾರೆ.

ಧನಂಜಯ್ 'ಟ್ವೆಂಟಿ ಒನ್ ಅವರ್ಸ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಶಂಕರ್ ಪಂಡಿತ್ ನಿರ್ದೇಶಿಸಿರುವ ಈ ಚಿತ್ರ ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ಕೆ.ಆರ್.ಜಿ ಸ್ಟೂಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ್ ಫಿಲ್ಮಿಬೀಟ್ ವಿಶೇಷ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೇ 'ಪುಷ್ಪ 2' ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ ಧನಂಜಯ್.


Click it and Unblock the Notifications











