'ಕೆಜಿಎಫ್ 2' ಕನ್ನಡದ ಹೆಮ್ಮೆ: 'ಪುಷ್ಪ' ತೆಲುಗು ಹೆಮ್ಮೆ ಎಂದ ಧನಂಜಯ್

'ಟಗರು' ಮೂಲಕ ಡಾಲಿ ಎಂಬ ಹೆಸರಿನಿಂದ ಜನಪ್ರಿಯರಾದ ಧನಂಜಯ್, ತೆಲುಗಿನ 'ಪುಷ್ಪ' ಚಿತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಚಿರಪರಿಚಿತರಾದರು. 'ಬಡವ ರಾಸ್ಕಲ್' ಚಿತ್ರದಿಂದ ನಿರ್ಮಾಪಕರೂ ಆದರು. ಇಷ್ಟು ಕಾರ್ಯದೊತ್ತಡದ ನಡುವೆಯೂ ಧನಂಜಯ್ "ಟ್ವೆಂಟಿ ಒನ್ ಅವರ್ಸ್" ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಶಂಕರ್ ಪಂಡಿತ್ ನಿರ್ದೇಶಿಸಿರುವ ಈ ಚಿತ್ರ ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ್ ಫಿಲ್ಮಿಬೀಟ್ ವಿಶೇಷ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ಸಿನಿಮಾಗಳು ಮಾತ್ರ ಅಲ್ಲ ಸೌತ್ ಸಿನಿಮಾಗಳು ತಮ್ಮ ತಾಖತ್ತು ಏನು ಅನ್ನೋದನ್ನು ತೋರಿಸಿದೆ ಎಂದಿದ್ದಾರೆ. 'ಪುಷ್ಪ' ಮತ್ತು 'ಕೆಜಿಎಫ್ 2' ಸಿನಿಮಾದ ಬಗ್ಗೆ ಮಾತನಾಡಿರುವ ಡಾಲಿ, 'ಪುಷ್ಪ' ಸಿನಿಮಾ ತೆಲುಗಿನ ಹೆಮ್ಮೆ, 'ಕೆಜಿಎಫ್' ಕನ್ನಡದ ಹೆಮ್ಮೆ ಎಂದಿದ್ದಾರೆ. ಮಾತು ಮುಂದುವರೆಸಿ, ತನಗೆ ಒಳ್ಳೆ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಇಷ್ಟವಿದೆ ಎಂದಿದ್ದಾರೆ. ಈ ಮೂಲಕ ಯಾವ ಇಂಡಸ್ಟ್ರಿಯೂ ಮೇಲಲ್ಲ, ಮಾವ ಇಂಡಸ್ಟ್ರಿಯೂ ಕೀಳಲ್ಲ ಎಂದು ಮಾತನಾಡಿದ್ದಾರೆ.

Daali Dhananjaya talks about Pushpa and KGF movie In 21 hours Movie Interview

ಇನ್ನು ತಾನು 'ಟ್ವೆಂಟಿ ಒನ್ ಅವರ್ಸ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ? ಈ ಸಿನಿಮಾದಲ್ಲಿ ಡಾಲಿ ಏನು ಹೇಳಲು ಹೊರಟಿದ್ದಾರೆ? ತನ್ನ ಪಾತ್ರ, ಹೇಗೆ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಚಿತ್ರತಂಡದ ಬಗ್ಗೆ ಖುಷಿ ವ್ಯಕ್ತಪಡಿಸಿದ ಧನಂಜಯ್, ಲಾಕ್‌ಡೌನ್‌ನಲ್ಲಿ ನನಗೆ ಈ ಕತೆಯನ್ನು ನಿರ್ದೇಶಕ ಜೈ ಶಂಕರ್ ಬಂದು ಹೇಳಿದ್ರು. ನನಗೂ ಆಗ ಸಾಕಷ್ಟು ಜವಾಬ್ಧಾರಿಗಳು ಇತ್ತು. ಕತೆ ಕೇಳಿ ಇಷ್ಟ ಆಗಿದ್ದರಿಂದ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರವೂ ತುಂಬ ರಗಡ್ ಆಗಿದೆ. ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದು, ಖಂಡಿತಾ ನೋಡುಗರಿಗೆ ಇಷ್ಟ ಆಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Daali Dhananjaya talks about Pushpa and KGF movie In 21 hours Movie Interview. Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X