ಹುಟ್ಟುಹಬ್ಬದಂದು ಸಿನಿ ಪ್ರೇಮಿಗಳು ಮೆಚ್ಚುವ ಘೋಷಣೆ ಮಾಡಿದ ಡಾಲಿ ಧನಂಜಯ್

ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಮುಖ್ಯ ನಟ. ಒಂದೇ ಮಾದರಿಯ ನಾಯಕ ಪಾತ್ರಗಳಿಗೆ ಜೋತು ಬೀಳದೆ ಪ್ರಯೋಗಗಳಿಗೆ ತೊಡಿಗಿಸಿಕೊಳ್ಳುತ್ತಾ, ಉತ್ತಮವಾದ ಪಾತ್ರಗಳಿಗೆ ಸದಾ ತುಡಿಯುವ ಧನಂಜಯ್ ಕನ್ನಡ ಚಿತ್ರ ಪ್ರೇಮಿಗಳು ನಿರೀಕ್ಷೆ ಇಟ್ಟಿರುವ ನಟನೂ ಹೌದು.

ಇಂದು (ಆಗಸ್ಟ್ 23) ಧನಂಜಯ್ ಹುಟ್ಟುಹಬ್ಬ. ಅಭಿಮಾನಿಗಳನ್ನು ಸೇರಿಸಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುವ ಬದಲಿಗೆ ಸರಳವಾಗಿ, ಅರ್ಥಪೂರ್ಣವಾಗಿ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಧನಂಜಯ್ ಹುಟ್ಟುಹಬ್ಬದಂದು ಅವರ ಕೆಲವು ಸಿನಿಮಾಗಳ ಪೋಸ್ಟರ್‌ಗಳು, ಹಾಡು ಎಲ್ಲವೂ ಬಿಡುಗಡೆ ಆಗಿದೆ. ವಿಶೇಷವೆಂದರೆ ಸ್ವತಃ ಧನಂಜಯ್ ಅವರು ಒಂದು ಅರ್ಥಪೂರ್ಣವಾದ, ಚಿತ್ರರಂಗಕ್ಕೆ ಅಗತ್ಯವೂ ಆದ ನಿರ್ಣಯವೊಂದನ್ನು ಇಂದು ತಳೆದಿದ್ದು, ಆ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಹೊಸ ಪ್ರಯತ್ನಕ್ಕೆ ಕೈ ಹಾಕಿದ ಡಾಲಿ

ಹೊಸ ಪ್ರಯತ್ನಕ್ಕೆ ಕೈ ಹಾಕಿದ ಡಾಲಿ

ಡಾಲಿ ಧನಂಜಯ್ ನಟನೆಯ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ವತಿಯಿಂದ ಈಗಾಗಲೇ 'ಬಡವ ರಾಸ್ಕಲ್' ಸಿನಿಮಾ ನಿರ್ಮಿಸಿರುವ ಧನಂಜಯ್, 'ಹೆಡ್ಡು ಬುಶ್' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಸಾಹಸವೊಂದನ್ನು ಕೈ ಹಾಕಿದ್ದು, ಆ ಬಗ್ಗೆ ಇಂದು ಘೋಷಣೆ ಹೊರಡಿಸಿದ್ದಾರೆ.

ಡಾಲಿ ಪಿಕ್ಚರ್ಸ್ ಪ್ರಕಟಣೆ

ಡಾಲಿ ಪಿಕ್ಚರ್ಸ್ ಪ್ರಕಟಣೆ

ಡಾಲಿ ಪಿಕ್ಚರ್ಸ್ ಸಿನಿಮಾ ನಿರ್ಮಾಣ ಸಂಸ್ಥೆಯು ಪತ್ರವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು, ''ಡಾಲಿ ಪಿಕ್ಚರ್ಸ್ ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯ ಅವರ ಹುಟ್ಟುಹಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ. ಧನಂಜಯ್ ಅವರು ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಒಂದು ಹಿಡಿಯಷ್ಟು ಆಸೆ, ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟರು. ಒಂದೇ ಒಂದು ಪಾತ್ರ ಧಕ್ಕಿಸಿಕೊಳ್ಳಲು ಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು, ಅನೇಕ ತಡೆಗೋಡೆಗಳನ್ನು ದಾಟಿ ಸಾಗಿದ ಅವರ ಪಯಣ ಕರುನಾಡಿಗೆ ತಿಳಿಯದ ಕತೆಯೇನಲ್ಲ''.

ಹೊಸ ಘೋಷಣೆ ಮಾಡಿದ ಡಾಲಿ ಪಿಕ್ಚರ್ಸ್

ಹೊಸ ಘೋಷಣೆ ಮಾಡಿದ ಡಾಲಿ ಪಿಕ್ಚರ್ಸ್

''ಅವರ ಅಷ್ಟೂ ಪ್ರಯತ್ನಗಳ ಸಾರ್ಥಕತೆ ದೊರಕಿದ್ದು 'ಡಾಲಿ' ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ 'ನಟರಾಕ್ಷಸ' ಎಂಬ ಬಿರುದಿನಲ್ಲಿ. ಹೀಗಾಗಿ ಹೊಸಬರ ಆರಂಭ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದು ಬಂದಿರುವ ಡಾಲಿ ಧನಂಜಯ ಅವರ ಆಲೋಚನೆಯೇ ಈ ಘೋಷಣೆಯ ಹಿನ್ನೆಲೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಟ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ. ನಮ್ಮನ್ನು ಇಷ್ಟು ವರ್ಷ ಕೈ ಹಿಡಿದು ನಡೆಸಿದ ಆಗೆ ಇನ್ನು ಮುಂದೆ ಕೂಡ ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿ ವಿಶ್ವಾಸ ಹಾರೈಕೆಗಳಿರಲಿ ಎಂದು ಬಯಸುತ್ತೇವೆ'' ಎಂದು ಪ್ರಕಟಣೆ ತಿಳಿಸಿದೆ.

ಬ್ಯುಸಿ ನಟ ಧನಂಜಯ್

ಬ್ಯುಸಿ ನಟ ಧನಂಜಯ್

ಡಾಲಿ ಧನಂಜಯ್ ಹುಟ್ಟುಹಬ್ಬವಾದ ಇಂದು ಅವರ ನಟನೆಯ 'ಹೆಡ್ಡು ಬುಶ್' ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ಅವರ ಹೊಸ ಸಿನಿಮಾ 'ಉತ್ತರಕಾಂಡ' ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. 'ಹೊಯ್ಸಳ' ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಧನಂಜಯ್ ಪ್ರಸ್ತುತ ಕನ್ನಡದ ಬ್ಯುಸಿ ನಟ. ಅವರ ನಟನೆಯ 'ಮಾನ್ಸೂರ್ ರಾಗ' ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. 'ಹೆಡ್ಡು ಬುಶ್' ಸಿನಿಮಾ ಸಹ ತಯಾರಾಗಿದೆ. 'ಹೊಯ್ಸಳ' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Daali Pictures production house of actor Daali Dhananjay make new announcement. Daali Pictures said they will make one movie yearly only with new comers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X