For Quick Alerts
  ALLOW NOTIFICATIONS  
  For Daily Alerts

  'ತಪ್ಪು ದಾರಿ'ಯಲ್ಲಿ ಹೊರಟ ರಾಮ್ ಕುಮಾರ್ ಮಗ

  |
  ತಪ್ಪು ದಾರಿ'ಯಲ್ಲಿ ಹೊರಟ ರಾಜ್ ಕುಮಾರ್ ಮೊಮ್ಮಗ..! | FILMIBEAT KANNADA

  ನಟ ರಾಮ್ ಕುಮಾರ್ ಅವರ ಮಗ ಚಿತ್ರರಂಗಕ್ಕೆ ಬಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ 'ದಾರಿ ತಪ್ಪಿದ ಮಗ'ನಾಗಿ ತಪ್ಪು ದಾರಿ ಹಿಡಿದು ಹೋಗುತ್ತಿದ್ದಾರೆ. ಈ ಮೂಲಕ ತಾತ ರಾಜ್ ಕುಮಾರ್ ಅವರ ಸಿನಿಮಾದ ಹೆಸರಿನ ಮೂಲಕ ಧೀರನ್ ರಾಮ್ ಕುಮಾರ್ ತಮ್ಮ ಸಿನಿಮಾ ಪಯಣ ಶುರು ಮಾಡಿದ್ದಾರೆ.

  ತಾತ ಡಾ.ರಾಜ್ ಅಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ ಧೀರೇನ್.!

  'ದಾರಿ ತಪ್ಪಿದ ಮಗ' ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ಸರಳವಾಗಿ ನೆರವೇರಿದೆ. ನಟ ಧೀರನ್ ರಾಮ್ ಕುಮಾರ್, ನಿರ್ದೇಶಕ ಅನಿಲ್ ಕುಮಾರ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಚಿರು ಸೇರಿದಂತೆ ಚಿತ್ರತಂಡ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

  ಅಂದಹಾಗೆ, ಈ ಸಿನಿಮಾ ತೆಲುಗಿನ 'ಆರ್ ಎಕ್ಸ್ 100' ಸಿನಿಮಾದ ರಿಮೇಕ್ ಆಗಿದೆ. ಸಿನಿಮಾದ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ದೃಶ್ಯಗಳು ಇರುವ ಕಾರಣ, ಗ್ಲಾಮರ್ ಲುಕ್ ನಲ್ಲಿ ಮಾನ್ವಿತಾ ಕಾಣಿಸಿಕೊಳ್ಳುತ್ತಿದ್ದಾರೆ.

  ಜಯಣ್ಣ ಮತ್ತು ಭೋಗೇಂದ್ರ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. 'ರಾಂಬೋ 2' ಬಳಿಕ ಮತ್ತೆ ಅನಿಲ್ ಮೋಡಿ ಮಾಡಲು ಬಂದಿದ್ದಾರೆ. ಈ ಚಿತ್ರದ ಜೊತೆಗೆ ಅವರು ಯಶ್ ನಟನೆಯ 'ಮೈ ನೆಮ್ ಇಸ್ ಕಿರಾತಕ' ಸಿನಿಮಾಗೆ ಸಹ ಡೈರೆಕ್ಷನ್ ಮಾಡುತ್ತಿದ್ದಾರೆ.

  English summary
  Actor Ramkumar son Dheeren Ramkumar's 'Daari Tappida Maga' film launched. The movie is directing by Anil Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X