For Quick Alerts
  ALLOW NOTIFICATIONS  
  For Daily Alerts

  ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ'

  By Naveen
  |

  'ಟಗರು' ಸಿನಿಮಾ ಹೊರತು ಪಡಿಸಿ ಕನ್ನಡದಲ್ಲಿ ಈಗ ಬರುತ್ತಿರುವ ಯಾವ ಸಿನಿಮಾವೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಒಂದು ವಾರಕ್ಕೆ ಎಲ್ಲ ಸಿನಿಮಾಗಳು ಸುಸ್ತಾಗುತ್ತಿವೆ. ಅದೇ ರೀತಿ ಕಳೆದ ವಾರ ಬಿಡುಗಡೆಯಾಗಿದ್ದ 'ಕಿಚ್ಚು' ಸಿನಿಮಾ ಒಂದೇ ವಾರಕ್ಕೆ ತ್ರಿವೇಣಿ ಚಿತ್ರಮಂದಿರದಿಂದ ಆಚೆ ಬಂದಿದೆ. ವಿಶೇಷ ಅಂದರೆ ಆ ಜಾಗಕ್ಕೆ 'ದಾರಿ ತಪ್ಪಿದ ಮಗ' ಆಗಮನ ಆಗಿದೆ.

  ಡಾ.ರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ 'ದಾರಿ ತಪ್ಪಿದ ಮಗ' ಕೂಡ ಒಂದು. 1975 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಆಗ 25 ವಾರಗಳ ಕಾಲ ಅಮೋಘ ಪ್ರದರ್ಶನ ಕಂಡಿತ್ತು. ಈಗಾಗಲೇ ಅನೇಕ ಬಾರಿ ಮರು ಬಿಡುಗಡೆಯಾಗಿರುವ ಈ ಸಿನಿಮಾ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ರಿ ರಿಲೀಸ್ ಆಗಿತ್ತು.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ' ಸಿನಿಮಾ ಬಂದಿದೆ. ಬೆಂಗಳೂರಿನ ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ನಾಳೆಯಿಂದ ಚಿತ್ರದ ಪ್ರದರ್ಶನ ಶುರು ಆಗಲಿದೆ. ಪ್ರತಿ ದಿನ ನಾಲ್ಕು ಪ್ರದರ್ಶನಗಳು ನಡೆಯಲಿದೆ.

  ಅಂದಹಾಗೆ, 'ದಾರಿ ತಪ್ಪಿದ ಮಗ' ಸಿನಿಮಾದಲ್ಲಿ ರಾಜ್ ಕುಮಾರ್ ಜೊತೆಗೆ ಕಲ್ಪನಾ, ಆರತಿ, ಮಂಜುಳಾ ಹಾಗೂ ಜಯಮಾಲ ನಟಿಸಿದ್ದರು. ಪ್ರಶಾಂತ್ ಮತ್ತು ಪ್ರಕಾಶ್ ಎಂಬ ದ್ವಿಪಾತ್ರದಲ್ಲಿ ರಾಜ್ ಮಿಂಚಿದ್ದರು. ಪಿಕೆಟಿ ಶಿವರಾಂ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿತ್ತು.

  English summary
  Kannada actor Rajkumar's 'Daari Tappida Maga' movie will re release tomorrow (may11th) in Triveni theatre Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X