For Quick Alerts
  ALLOW NOTIFICATIONS  
  For Daily Alerts

  ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!

  |

  ಶೀರ್ಷಿಕೆ ಓದಿದ ಕೂಡಲೆ ಸಲ್ಮಾನ್ ಖಾನ್ ಸಿನಿಮಾದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು ಅಭಿನಯಿಸಿರಬಹುದಾ ಅಂತ ಕಣ್ಣರಳಿಸಬೇಡಿ. ಸಲ್ಮಾನ್ ಖಾನ್ ನಟನೆಯ 'ದಬ್ಬಂಗ್-3' ಚಿತ್ರದ ಕನ್ನಡ ವರ್ಷನ್ ಗೆ ಕಾಮಿಡಿ ಕಿಲಾಡಿಗಳು ಡಬ್ ಮಾಡಿದ್ದಾರೆ.

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದಬ್ಬಂಗ್-3' ಸದ್ಯದಲ್ಲೇ ಗ್ರ್ಯಾಂಡ್ ರಿಲೀಸ್ ಆಗಲಿದೆ. ಕಿಚ್ಚ ಸುದೀಪ್ ಕೂಡ ಅಭಿನಯಿಸಿರುವ 'ದಬ್ಬಂಗ್-3' ಚಿತ್ರ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರಲಿದೆ.

  ಇದೀಗ 'ದಬ್ಬಂಗ್-3' ಚಿತ್ರದ ಕನ್ನಡ ವರ್ಷನ್ ಗಾಗಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಕನ್ನಡದ ಕಾಮಿಡಿ ಕಿಲಾಡಿಗಳು ಧ್ವನಿ ನೀಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಶಿವರಾಜ್.ಕೆ.ಆರ್.ಪೇಟೆ, ಗೋವಿಂದೇ ಗೌಡ, ದಿವ್ಯ 'ದಬ್ಬಂಗ್-3' ಚಿತ್ರದ ಪ್ರಮುಖ ಪಾತ್ರಗಳಿಗೆ ವಾಯ್ಸ್ ಕೊಟ್ಟಿದ್ದಾರೆ.

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  ಇವರಿಷ್ಟೇ ಅಲ್ಲ.. ಕನ್ನಡ ಕಿರುತೆರೆ ಕಲಾವಿದರಾದ ವೀಣಾ ಸುಂದರ್, ಸುಂದರ್, ಧರ್ಮ ಚಂದ್ರಕಲಾ, ರವಿಶಂಕರ್ ಗೌಡ ಸೇರಿದಂತೆ ಹಲವರು 'ದಬ್ಬಂಗ್-3' ಚಿತ್ರದ ಕನ್ನಡ ವರ್ಷನ್ ಗೆ ದನಿಯಾಗಿದ್ದಾರೆ.

  'ದಬ್ಬಂಗ್-3' ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಪಾತ್ರಗಳಿಗೆ ಕನ್ನಡದಲ್ಲಿ ಯಾರು ಸೂಟ್ ಆಗುತ್ತಾರೆ ಎಂಬುದನ್ನು ಆಲೋಚಿಸಿ ಬಹಳ ಎಚ್ಚರಿಕೆಯಿಂದ ಡಬ್ಬಿಂಗ್ ಮಾಡಲಾಗಿದೆ. ಇಪ್ಪತ್ತು ದಿನಗಳ ಕಾಲ ಡಬ್ಬಿಂಗ್ ಕಾರ್ಯ ನಡೆದಿದ್ದು, ಚಿತ್ರದ ಕನ್ನಡ ಸಂಭಾಷಣೆಯನ್ನ ಗುರುದತ್ ಗಾಣಿಗ ಬರೆದಿದ್ದಾರೆ.

  ಇನ್ನೂ 'ದಬ್ಬಂಗ್-3' ಚಿತ್ರದ ವಿಲನ್ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹ ಕಾಂಬಿನೇಶನ್ ಇರುವ ಪ್ರಭುದೇವ ನಿರ್ದೇಶನ ಮಾಡಿರುವ 'ದಬ್ಬಂಗ್-3' ಮುಂದಿನ ತಿಂಗಳು ನಿಮ್ಮ ಮುಂದೆ ಬರಲಿದೆ.

  English summary
  Comedy Khiladigalu fame Shivaraj KR Pete, Govinde Gowda, Divya dubs for Dabangg 3 Kannada Version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X