ಚರಣ್- ತಾರಾ ನಡುವೆ ತುಂಬಿಬಂದ ಚಂದ್ರಮ
'ಚಂದ್ರಮಾ- ಚಂದ್ರಮಾ ಚಂದ್ರಮನೆ, ಸಂಭ್ರಮ ತುಂಬಲಿ ನಮ್ಮ ಮನೆ"
- ಚರಣ್‌ರಾಜ್ ಕಣ್ಣುಗಳಲ್ಲಿ ಆಸೆ ಕುಣಿಯುತ್ತಿದ್ದರೆ, ತಾರಾ ಕೆನ್ನೆಗಳಲ್ಲಿ ಹೊಳಪು ಚಂದ್ರ. ಅವರು ಆಗಷ್ಟೇ ಮದುವೆಯಾಗಿದ್ದರು. ಆ ಕಾರಣ ಖುಷಿಯಾಗಿದ್ದರು.
ನೂತನ ವಧೂ ವರರ ಸಂಭ್ರಮಕ್ಕೆ ಸಾಕ್ಷಿಯಾಗಲು ಅಲ್ಲಿ ಹೂಗಳ ಸಂತೆ. ಮೊದಲ ರಾತ್ರಿಯೆಂದರೆ ಹೂಗಳಿಲ್ಲದಿದ್ದರೆ ಹೇಗೆ? ಮಂಚಕ್ಕೆ ಮಲ್ಲಿಗೆಯೇ ಹಾಸುಗೆ. ಆ ಬಿಳುಪಿನ ಹಾಸುಗೆಗೆ ಕನಕಾಂಬರದ ಅಂಚು. ಗೋಡೆಗಳು ಗುಲಾಬಿ ಅರಳಿಸಿದ್ದವು. ದಂಪತಿಗಳು ಮಾತ್ರ ಇದು ಹೂವಿನ ಲೋಕವೋ ಎಂದು ಹಾಡುವ ಬದಲು'ಚಂದ್ರಮಾ- ಚಂದ್ರಮಾ" ಎಂದು ಹಾಡಲಿಕ್ಕೆ ಶುರುವಿಟ್ಟುಕೊಂಡರು. ಆಗ ಸೃಷ್ಟಿಯಾದದ್ದು ಪ್ರೇಮಿಗಳ ಲೋಕ.
ಅರೆರೆ, ನೂತನ ವಧೂವರರು ಮುದ್ದಾಡುವುದನ್ನು ಮೂರನೆಯ ಕಣ್ಣೊಂದು ಕದ್ದು ನೋಡುತ್ತಿದೆಯಲ್ಲ ! ಆ್ಞ , ಅದು ಕೆಮರಾ ಕಣ್ಣು - ಎ.ಸಿ.ಮಹೇಂದ್ರನ್ ಅವರದ್ದು . ಅಂದಹಾಗೆ, ತಾರಾ- ಚರಣ್‌ರಾಜ್ ಹಾಡಿ ಕುಣಿದಿದ್ದು ಡ್ಯಾಡಿ ನಂ.1 ಚಿತ್ರಕ್ಕಾಗಿ.
ನೃತ್ಯ ನಿರ್ದೇಶಕ ತ್ರಿಭುವನ್ ಹೆಜ್ಜೆ ಹೇಳಿಕೊಟ್ಟರು. ಆಕಾಶ್ ಬಾಬು (ಬಾವಳೆ) ನಿರ್ದೇಶನ. ಮಾಡ್ರನ್ ನಾಗರಾಜ್ ನಿರ್ಮಾಣದ ಈ ಚಿತ್ರದಲ್ಲಿ ವಿಜಯಲಕ್ಷ್ಮಿ , ಅವಿನಾಶ್, ಆಶಾಲತಾ, ಸರಿಗಮ ವಿಜಿ, ಶೋಭರಾಜ್ ಮುಂತಾದವರು ಅಭಿನಯಿಸುತ್ತಿದ್ದಾರೆ.


Click it and Unblock the Notifications