ಎಣ್ಣೆ ಬಾಟಲಿ ಹಿಡಿದು ಬಂದ ಡಾಲಿ: ಬಡವ ರಾಸ್ಕಲ್ ಟ್ರೇಲರ್ ಬಿಡುಗಡೆ

ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಲಾಂಗ್ ಹಾಗೂ ಎಣ್ಣೆ ಬಾಟಲಿ ಎರಡೂ ಹಿಡಿದು ಬಂದಿದ್ದಾರೆ ಡಾಲಿ ಧನಂಜಯ್.

'ಟಗರು', 'ಪಾಪ್‌ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ಡಾಲಿ ಎಣ್ಣೆ ಬಾಟಲಿ ಹಿಡಿದಿದ್ದರು. ಜೊತೆಗೆ ಮಚ್ಚು ಸಹ ಕೈಯಲ್ಲಿತ್ತು. 'ಬಡವ ರಾಸ್ಕಲ್' ಸಿನಿಮಾದಲ್ಲಿಯೂ ಮಚ್ಚು ಹಾಗೂ ಎಣ್ಣೆ ರಿಪೀಟ್ ಆಗಿದೆಯಾದರೂ ಇಲ್ಲಿ ಅವಕ್ಕೆ ಬೇರೆಯದ್ದೇ ರೀತಿಯ ಪ್ರಾಶಸ್ತ್ಯತೆ ಇದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. 'ಬಡವ ರಾಸ್ಕಲ್' ಸಿನಿಮಾದಲ್ಲಿ ಹಾಸ್ಯ, ಆಕ್ಷನ್, ಭಾವುಕತೆ, ಪ್ರೀತಿ, ಪ್ರೇಮಿಯ ವೇದನೆ ಎಲ್ಲವೂ ಇದೆ ಎಂಬುದನ್ನು ಸಹ ಟ್ರೇಲರ್ ಹೇಳುತ್ತಿದೆ.

ಬಿಡುಗಡೆ ಆಗಿರುವ ಟ್ರೇಲರ್‌, ಸಿನಿಮಾದ ಬಗ್ಗೆ ಸಾಕಷ್ಟು ಸುಳಿವುಗಳನ್ನೇ ಬಿಟ್ಟುಕೊಟ್ಟಿದೆ. ಅದರಲ್ಲಿಯೂ ಡಾಲಿಯ ಪಾತ್ರದ ಬಗ್ಗೆ ಸಾಕಷ್ಟು ಅಂಶಗಳು ಟ್ರೇಲರ್‌ನಲ್ಲಿ ಗೊತ್ತಾಗುತ್ತವೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಒಬ್ಬ ಅಬ್ಬೆ ಪಾರಿ ಯುವಕ. ಮಧ್ಯಮ ವರ್ಗದ ಕುಟುಂಬ, ಗೆಳೆಯರೆಂದರೆ ಪಂಚ ಪ್ರಾಣ ಜೊತೆಗೊಂದು ಪ್ರೇಮ ಕತೆ. ಜವಾಬ್ದಾರಿಯಿಂದ ದೂರ, ಜಗಳ, ಪಾರ್ಟಿಗೆ ಹತ್ತಿರ ಇದು 'ಬಡವ ರಾಸ್ಕಲ್‌'ನಲ್ಲಿ ಡಾಲಿ ಧನಂಜಯ್‌ನ ಪಾತ್ರ ಪರಿಚಯ.

 Dali Dhanajay Starrer Badava Rascal Movie Trailer Released

ಬಹುತೇಕ ಮಧ್ಯಮ ವರ್ಗದ ಯುವಕರ ಜೀವನದಲ್ಲಿ ಆಗುವಂತೆ ಪ್ರೇಮ ವೈಫಲ್ಯ, ಅದನ್ನು ಮರೆಯಲು ಮದ್ಯದ ದಾಸನಾಗುವುದು, ಇದರಿಂದಾಗಿ ಅಪ್ಪ-ಅಮ್ಮ ಚಿಂತೆಗೀಡಾಗುವುದು ಹೀಗೆ ಇನ್ನೂ ಕೆಲವು ಅಂಶಗಳು ಟ್ರೇಲರ್‌ನಲ್ಲಿ ಗೊತ್ತಾಗುತ್ತಿವೆ. ಜೊತೆಗೆ ಟ್ರೇಲರ್‌ನಲ್ಲಿ ಆಟೋ ಡ್ರೈವರ್‌ ಪೋಷಾಕಿನಲ್ಲೂ ಡಾಲಿ ಕಾಣಿಸುತ್ತಿದ್ದಾರೆ. ಅಲ್ಲಿಗೆ ಬೇಜವಾಬ್ದಾರಿಯ ಹುಡುಗ ಆಟೋ ಡ್ರೈವರ್ ಆಗಿ ಬದುಕು ಕಟ್ಟಿಕೊಳ್ಳುತ್ತಾನಾ, ಆ ನಿಟ್ಟಿನಲ್ಲಿ ವಿಲನ್‌ಗಳ ಎಂಟ್ರಿ ಆಗುತ್ತದೆಯಾ? ಇವೆಲ್ಲವನ್ನೂ ತಿಳಿಯಲು ಸಿನಿಮಾ ನೋಡಬೇಕು. ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆ ಆಗಲಿದೆ.

ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ, ಡಾಲಿಯ ಅಪ್ಪ ಅಮ್ಮನ ಪಾತ್ರದಲ್ಲಿ ಹಿರಿಯ ನಟರಾದ ರಂಗಾಯಣ ರಘು ಹಾಗೂ ತಾರಾ ಇದ್ದಾರೆ ಗೆಳೆಯನ ಪಾತ್ರದಲ್ಲಿ ನಾಗಭೂಷಣ್, ಮೈಸೂರು ಪೂರ್ಣ ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಗುರು ಶಂಕರ್. ಸಿನಿಮಾವನ್ನು ಡಾಲಿ ಧನಂಜಯ್ ಹಾಗೂ ಗುಜ್ಜಲ್ ಪುರುಷೋತ್ತಮ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಎರಡು ಹಾಡುಗಳನ್ನು ಸ್ವತಃ ಡಾಲಿ ಧನಂಜಯ್ ಬರೆದಿದ್ದಾರೆ. ಆ ಎರಡೂ ಹಾಡುಗಳು ಹಿಟ್ ಆಗಿವೆ.

ಧನಂಜಯ್ ನಟಿಸಿರುವ 'ರತ್ನನ್ ಪ್ರಪಂಚ' ಸಿನಿಮಾ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಈ ಕೌಟುಂಬಿಕ ಸಿನಿಮಾವನ್ನು ಜನ ಬಹುವಾಗಿ ಮೆಚ್ಚಿ ಹೊಗಳಿದ್ದಾರೆ. ಇದೀಗ 'ಬಡವ ರಾಸ್ಕಲ್' ಸಹ ಅದೇ ಮಾದರಿಯ ಮಧ್ಯಮ ವರ್ಗದ ಕೌಟುಂಬಿಕ ಕತೆಯನ್ನು ಹೊಂದಿದೆ. ಇದರ ಹೊರತಾಗಿ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧನಂಜಯ್ ನಟಿಸಿರುವ ತೆಲುಗಿನ ಬಿಗ್ ಬಜೆಟ್ ಸಿನಿಮಾ 'ಪುಷ್ಪ' ಇದೇ ಡಿಸೆಂಬರ್ 17 ಕ್ಕೆ ಬಿಡುಗಡೆ ಆಗಲಿದೆ. ಅದರ ಬಳಿಕ ಧನಂಜಯ್ ಅವರೇ ಬಂಡವಾಳ ಹೂಡಿರುವ 'ಹೆಡ್ಡು ಬುಶ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ರೌಡಿ ಜಯರಾಜ್ ಜೀವನ ಕತೆ ಆಧರಿಸಿದ ಈ ಸಿನಿಮಾ ಬಗ್ಗೆಯೂ ಧನಂಜಯ್‌ಗೆ ಸಾಕಷ್ಟು ನಿರೀಕ್ಷೆ ಇದೆ. ಜಗ್ಗೇಶ್ ಜೊತೆ ನಟಿಸಿರುವ 'ತೋತಾಪುರಿ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಅದರ ಬಳಿಕ ರಚಿತಾ ರಾಮ್ ಜೊತೆಯಾಗಿ ನಟಿಸಿರುವ 'ಮಾನ್ಸೂನ್ ರಾಗ' ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಶಿವರಾಜ್ ಕುಮಾರ್ ಜೊತೆ ನಟಿಸಿರುವ ವಿಜಯ್ ಮಿಲ್ಟನ್ ನಿರ್ದೇಶನದ 'ಬೈರಾಗಿ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ 'ಡಾಲಿ', 'ಮನು ಚರಿತ್ರ' ಸಿನಿಮಾಗಳು ಸಹ ಸೆಟ್ಟೇರಲಿವೆ.

More from Filmibeat

English summary
Dali Dhananjay starrer Badava Rascal movie trailer released. Movie directed by Guru Shankar. Movie is about a middle class young man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X