ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್

By ಫಿಲ್ಮಿಬೀಟ್ ಡೆಸ್ಕ್

ನಟ ಡಾಲಿ ಧನಂಜಯ್ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ತಯಾರಾಗಿದ್ದಾರೆ. ಧನಂಜಯ್ ಪೋಷಕ ನಟರಾಗಿ ನಟಿಸಿರುವ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತಾದರೂ, ಈಗ ಪ್ರಥಮ ಬಾರಿಗೆ ನಾಯಕನಟನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಸಿನಿಮಾದ ಹೆಸರು ಇಂದು ರಿವೀಲ್ ಮಾಡಲಾಗಿದೆ. ಚಿತ್ರಕ್ಕೆ 'ಜೀಬ್ರಾ' ಎಂಬ ಹೆಸರನ್ನು ಇಡಲಾಗಿದೆ. ಡಾಲಿ ನಟಿಸಿದ್ದ 'ಹೆಡ್ ಬುಷ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿರಲಿದೆ ಎನ್ನಲಾಗಿತ್ತು. ಆದರೆ ಅದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿಲ್ಲ. ಹಾಗಾಗಿ ಇದು ಡಾಲಿ ನಾಯಕನಾಗಿ ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಳ್ಳಲಿದೆ.

ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವನ್ನು 'ಪೆಂಗ್ವಿನ್' ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

'ಜೀಬ್ರಾ' ಚಿತ್ರತಂಡಕ್ಕೆ ಇದೀಗ 'ಕೆಜಿಎಫ್ 1 ಮತ್ತು 2' ಮುಂತಾದ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ 'ಭೋಲಾ' ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು, ಇದೀಗ ಜೀಬ್ರಾ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿತ್ತಂಡಕ್ಕೆ ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, 'ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ' ಎಂದು ಹೇಳಿದ್ದಾರೆ.

Dali Dhananjays Pan India Movie Titled As Zebra

'ಜೀಬ್ರಾ' ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ ಜೊತೆಗೆ 'ಕಟ್ಟಪ್ಪ' ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ಡಾಲಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ನಟನೆಯ 'ಹೊಯ್ಸಳ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಅದರ ಬಳಿಕ 'ಉತ್ತರಕಾಂಡ' ಸಿನಿಮಾ ತೆರೆಗೆ ಬರಲಿದೆ. 'ಡಾಲಿ' ಹೆಸರಿನ ಸಿನಿಮಾವನ್ನು ಘೋಷಿಸಲಾಗಿದೆಯಾದರೂ ಅದಿನ್ನೂ ಸೆಟ್ಟೇರಿಲ್ಲ.

More from Filmibeat

English summary
Dali Dhananjay's pan India movie titled as Zebra. Telugu hero Sathyadev also acting along with Dhananjay in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X