ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಬಗ್ಗೆ ಡಾಲಿ ಧನಂಜಯ್ ಮಾತು

ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ 'ಪುಷ್ಪ' ಸಿನಿಮಾದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದಾರೆ. 'ಪುಷ್ಪ' ಸಿನಿಮಾವು ಡಿಸೆಂಬರ್ 17 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು.

Recommended Video

ಸಿನಿಮಾ ಪೂರ್ತಿ ನಾನು ಅಲ್ಲು ಅರ್ಜುನ್ ಜೊತೆಗೆ ಇರ್ತೀನಿ

ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸಿನಿಮಾದ ವಿತರಕರು ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್ 'ಪುಷ್ಪ' ಸಿನಿಮಾದಲ್ಲಿ ನಟಿಸಿದ ತಮ್ಮ ಅನುಭವ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಅವರುಗಳ ಬಗ್ಗೆ ಮಾತನಾಡಿದರು.

''ನಿರ್ದೇಶಕ ಸುಕುಮಾರ್ ಅವರು ಕರೆದು ನೀನು 'ಪುಷ್ಪ' ಸಿನಿಮಾದ ಭಾಗವಾಗಬೇಕು ಎಂದು ಹೇಳಿದಾಗ ಬಹಳ ಖುಷಿಯಾಯಿತು. 'ಆರ್ಯ' ಸಿನಿಮಾದಿಂದಲೂ ನಾನು ಸಕುಮಾರ್ ಹಾಗೂ ಅಲ್ಲು ಅರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದೀನಿ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ನಾವು ಕಲಿಯುತ್ತಿರುತ್ತೇನೆ. ಹಾಗೆಯೇ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರೊಟ್ಟಿಗೆ ನಟಿಸಿ ನಾನು ಸಾಕಷ್ಟು ಕಲಿತೆ'' ಎಂದಿದ್ದಾರೆ ಡಾಲಿ ಧನಂಜಯ್.

Dali Dhananjay Talks About Allu Arjun and Rashmika Mandanna

''ಪುಷ್ಪ' ಸಿನಿಮಾದ ಸೆಟ್‌ಗೆ ಹೋದಾಗ ಅಲ್ಲಿ ಅಲ್ಲು ಅರ್ಜುನ್ ಅನ್ನು ನೋಡೇ ಇಲ್ಲ ನಾನು. ಅಲ್ಲಿ ನನಗೆ ಸದಾ ಪುಷ್ಪ ಆಗಿಯೇ ಅವರು ಕಾಣುತ್ತಿದ್ದರು. ರಶ್ಮಿಕಾ ಮಂದಣ್ಣ ಸಹ ಯಾವಾಗಲೂ ಶ್ರೀವಲ್ಲಿಯಾಗಿ ನಿಂತಿರುತ್ತಿದ್ದರು. ಅದೊಂದು ಅದ್ಭುತವಾದ ಜಗತ್ತು. 'ಪುಷ್ಪ'ನ ಜಗತ್ತನ್ನು ಸೃಷ್ಟಿಸಲು ಅವರೆಲ್ಲ ಪಡುತ್ತಿದ್ದ ಕಷ್ಟ ನನಗೆ ಬಹಳ ಖುಷಿ ಕೊಟ್ಟಿತು'' ಎಂದು ಸಿನಿಮಾದ ಅನುಭವ ಹಂಚಿಕೊಂಡರು ಧನಂಜಯ್.

''ಎಷ್ಟೋ ಬಾರಿ ನನಗೇ ಅನ್ನಿಸುತ್ತದೆ ಸಾಕು ಬಿಡಪ್ಪ ಎಷ್ಟು ಶಾಟ್ ಕೊಡುವುದು ಎಂದು. ಆದರೆ ಅಲ್ಲು ಅರ್ಜುನ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಪ್ರತಿಯೊಂದು ಶಾಟ್‌ಗೂ ತಮ್ಮ ಪೂರ್ಣ ಪ್ರಮಾಣದ ಶ್ರಮ ಹಾಕುತ್ತಿದ್ದುದು ಅದ್ಭುತ. ಅವರನ್ನು ಈಗಾಗಲೇ ಸ್ಟಾರ್ ನಟನಾಗಿ ಜನ ಸ್ವೀಕರಿಸಿ ಆಗಿದೆ. ಅವರು ಹೇಗೆ ಮಾಡಿದರೂ ಜನ ಒಪ್ಪುತ್ತಾರೆ. ಆದರೂ ಅವರು ತಮ್ಮ ಪೂರ್ಣ ಶ್ರಮವನ್ನು ಸಿನಿಮಾಕ್ಕಾಗಿ ಹಾಕುತ್ತಿದ್ದರು. ಅವರ ಎನರ್ಜಿ ಅದ್ಭುತ'' ಎಂದು ಅಲ್ಲು ಅರ್ಜುನ್ ಅನ್ನು ಹೊಗಳಿದರು ಡಾಲಿ ಧನಂಜಯ್.

''ಪುಷ್ಪ' ಸಿನಿಮಾದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಸಿನಿಮಾದಲ್ಲಿ ನಟಿಸಿದ್ದನ್ನು, ಸೆಟ್‌ನಲ್ಲಿ ಇದ್ದಷ್ಟು ದಿನ ಎಲ್ಲವನ್ನೂ ಬಹಳ ಚೆನ್ನಾಗಿ ಎಂಜಾಯ್ ಮಾಡಿದ್ದೇನೆ. ಎಲ್ಲರೂ ಸಿನಿಮಾ ನೋಡುತ್ತಾರೆ, ದೇಶದಲ್ಲಿಯೇ ಈ ಸಿನಿಮಾ ಒಳ್ಳೆಯ ಹಿಟ್ ಆಗುತ್ತದೆಂಬ ನಿರೀಕ್ಷೆ ಇದೆ ಎಂದ ಧನಂಜಯ್, ''ಅಲ್ಲು ಅರ್ಜುನ್‌ಗೆ ಐಕಾನ್ ಸ್ಟಾರ್ ಎಂದು ಬಿರುದು ಕೊಟ್ಟಿರುವುದು ಸರಿಯಾಗಿಯೇ ಇದೆ. ಅವರ ಶ್ರಮಕ್ಕೆ, ಅವರ ತೊಡಗಿಸಿಕೊಳ್ಳುವಿಕೆಗೆ, ಏಕಾಗ್ರತೆಗೆ ಅವರು ಎಲ್ಲರಿಗೂ ಐಕಾನ್ (ಮಾದರಿ)'' ಎಂದರು.

More from Filmibeat

English summary
Dali Dhananhay talks about Allu Arjun and Rashmika Mandanna and Sukumar. He said he enjoys acting in Pushpa movie very much.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X