ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?
Recommended Video

ನಟಿ ರಾಧಿಕಾ ಕುಮಾರಸ್ವಾಮಿ ಈಗ ಬದಲಾಗಿದ್ದಾರೆ. ಅವರು ಬದಲಾಗಿರುವುದು ತಮ್ಮ ಹೊಸ ಸಿನಿಮಾಗಾಗಿ. ಹೌದು, ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಒಂದು ವಿಭಿನ್ನ ಲುಕ್ ನೊಂದಿಗೆ ನಟಿ ರಾಧಿಕಾ ಕುಮಾರ ಸ್ವಾಮಿ ಈಗ ಎಂಟ್ರಿ ಕೊಟ್ಟಿದ್ದಾರೆ.
ನಟಿಯರಿಗೆ ಒಂದು ಒಳ್ಳೆಯ ಪಾತ್ರ ಸಿಗುವುದು ಅಪರೂಪ. ಅನೇಕ ನಟಿಯರಿಗೆ ಹೀರೋಗಳ ಜೊತೆಗೆ ರೊಮ್ಯಾನ್ಸ್ ಮಾಡುವ ಪಾತ್ರಗಳೆ ಹುಡುಕಿಕೊಂಡು ಬರುತ್ತವೆ. ಆದರೆ, ಈಗ ರಾಧಿಕಾ ಕುಮಾರಸ್ವಾಮಿಗೆ ಒಂದು ಸುಂದರ ಪಾತ್ರ ಸಿಕ್ಕಿದೆ. ಈ ಸಿನಿಮಾದ ತುಂಬ ಅವರೇ ತುಂಬಿಕೊಂಡಿರಲಿದ್ದಾರೆ.
ಅಂದಹಾಗೆ, ರಾಧಿಕಾ ಸದ್ಯ ಮೂರ್ನಾಕು ಸಿನಿಮಾದಲ್ಲಿ ನಟಿಸುತ್ತಿದ್ದು, ಯಾವ ಸಿನಿಮಾಗಾಗಿ ಅವರು ಈ ರೀತಿ ಬದಲಾಗಿದ್ದಾರೆ ಎಂಬ ವಿವರ ಮುಂದಿದೆ ಓದಿ...

'ದಮಯಂತಿ'ಯಾದ ರಾಧಿಕಾ
ಕೆಲ ತಿಂಗಳುಗಳ ಹಿಂದೆಯಷ್ಟೇ ನಟಿ ರಾಧಿಕಾ ಕುಮಾರಸ್ವಾಮಿ 'ದಮಯಂತಿ' ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ಸಿನಿಮಾದ ಅವರ ಲುಕ್ ಇದೀಗ ಬಿಡುಗಡೆಯಾಗಿದೆ. ಒಂದು ಕ್ಷಣ ಈ ಫೋಟೋ ನೋಡಿದವರು ಅಚ್ಚರಿ ಪಡುತ್ತಾರೆ. ಇದೊಂದು ಹಾರರ್ ಸಿನಿಮಾ ಇರಬಹುದು ಎಂಬ ಊಹೆ ಬರುತ್ತದೆ.

ತೆಲುಗು ತಮಿಳಿನಲ್ಲಿಯೂ ನಿರ್ಮಾಣ?
ತೆಲುಗಿನಲ್ಲಿ ತೆರೆ ಕಂಡಿರುವ ನಟಿ ಅನುಷ್ಕಾ ಶೆಟ್ಟಿ ಅವರ 'ಭಾಗಮತಿ' ಹಾಗೂ 'ಅರುಂಧತಿ' ಸಿನಿಮಾ ಶೈಲಿಯಲ್ಲಿ 'ದಮಯಂತಿ' ಸಿನಿಮಾ ಇರಲಿದೆಯಂತೆ. ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಣ ಮಾಡಿ ನಂತರ ತೆಲುಗು ತಮಿಳಿನಲ್ಲಿಯೂ ಇದೇ ಚಿತ್ರವನ್ನು ಮಾಡುವ ಆಲೋಚನೆ ಇದ್ಯಂತೆ.

ನವರಸನ್ ನಿರ್ದೇಶನ, ನಿರ್ಮಾಣ
ಸ್ಯಾಂಡಲ್ ವುಡ್ ಗೆ ನಾಯಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ನವರಸನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 'ದಮಯಂತಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು ಕನ್ನಡ ಸಿನಿಮಾರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳೇ ಕಡಿಮೆ ಇಂತಹ ಸಂದರ್ಭದಲ್ಲಿ ನವರಸನ್ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ರಾಧಿಕಾ ಮುಂದಿನ ಸಿನಿಮಾಗಳು
'ದಮಯಂತಿ' ಜೊತೆಗೆ ಸದ್ಯ, ರಾಧಿಕಾ ಕುಮಾರಸ್ವಾಮಿ ಅರ್ಜುನ್ ಸರ್ಜಾ ಜೊತೆಯಲ್ಲಿ 'ಕಾಂಟ್ರಾಕ್ಟ್'. ರಮೇಶ್ ಅರವಿಂದ್ ಜೊತೆಯಲ್ಲಿ 'ಭೈರಾ ದೇವಿ' ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











