For Quick Alerts
  ALLOW NOTIFICATIONS  
  For Daily Alerts

  ಅಪ್ಪು ರೀತಿ ಡ್ಯಾನ್ಸ್ ಮಾಡಿದ್ರೆ ಬಂಪರ್ ಬಹುಮಾನ

  |

  ನಟಸಾರ್ವಭೌಮ ಸಿನಿಮಾ ಪ್ರತಿಯೊಂದು ಹಂತದಲ್ಲೂ ಸದ್ದು ಮಾಡುತ್ತಲೇ ಇದೆ. ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದಾಗ, ಅಪ್ಪು ರೀತಿ ಪೋಸ್ ನೀಡಿದ್ರೆ ಅವರು ಜೊತೆ ವೇದಿಕೆ ಹಂಚಿಕೊಳ್ಳಬಹುದು ಎಂಬ ಸ್ಪರ್ಧೆ ನಡೆಸಿದ್ದರು.

  ಇದೀಗ, ನಟಸಾರ್ವಭೌಮ ಚಿತ್ರತಂಡದಿಂದ ಇನ್ನೊಂದು ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಬಾರಿ ಅಪ್ಪು ರೀತಿ ಪೋಸ್ ನೀಡುವುದಲ್ಲ, ಅಪ್ಪು ರೀತಿ ಡ್ಯಾನ್ಸ್ ಮಾಡಬೇಕು.

  ಪುನೀತ್ ಜೊತೆಗೆ ಆಡಿಯೋ ಲಾಂಚ್ ಮಾಡುವ ಚಾನ್ಸ್ ನಿಮ್ಮದಾಗಬಹುದುಪುನೀತ್ ಜೊತೆಗೆ ಆಡಿಯೋ ಲಾಂಚ್ ಮಾಡುವ ಚಾನ್ಸ್ ನಿಮ್ಮದಾಗಬಹುದು

  ಹೌದು, ನಟಸಾರ್ವಭೌಮ ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದರಲ್ಲಿ ಒಂದು ಸ್ಟೆಪ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಅಪ್ಪು ಹಾಕಿರುವ ಆ ಸ್ಟೆಪ್ ರೀತಿ ನೀವು ಸ್ಟೆಪ್ ಹಾಕಬೇಕಿದೆ.

  ಅಪ್ಪು ಸ್ಟೈಲ್ ನಲ್ಲಿ ಸ್ಟೆಪ್ ಹಾಕಿ, #Dancewithappu ಎಂಬ ಹ್ಯಾಷ್ ಟ್ಯಾಗ್ ಹಾಕಿ ಯಾವುದೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಬಹುದು.

  ಅದರಲ್ಲಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿರುವ ಒಬ್ಬ ಅದೃಷ್ಟಶಾಲಿಗೆ ಪುನೀತ್ ರಾಜ್ ಕುಮಾರ್ ಗಿಫ್ಟ್ ನೀಡಲಿದ್ದಾರೆ. ಜನವರಿ 5 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಮತ್ತು ವಿಶೇಷವಾದ ಬಹುಮಾನ ಪಡೆಯಬಹುದು.

  English summary
  Nata saaravabhowma team throws up one more contest. emulate the dance machine puneeth rajkumar signature move & post with #dancewithappu. the luckiest will share the podium this 5th At hubbali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X