ತೆರೆಯಲ್ಲಿ ಪೂಜಾ ಗಾಂಧಿ ಬೆತ್ತಲೆ ಬೆನ್ನು ಪ್ರದರ್ಶನ

<ul id="pagination-digg"><li class="previous"><a href="/news/pooja-gandhi-dandupalya-movie-release-srinivas-raju-066223.html">« Previous</a>

ಹೀಗೆ ಪೂಜಾ ಗಾಂಧಿ ಆರಕ್ಕೇರದೆ ಮೂರಕ್ಕಿಳಿಯದೇ ನಿಂತಲ್ಲೇ ನಿಂತಿದ್ದಾಗ ಅವರಿಗೆ ಸಿಕ್ಕ ಅವಕಾಶವೇ ಈ ಚಿತ್ರ ಡಂಡುಪಾಳ್ಯ. "ಈ ಚಿತ್ರದಲ್ಲಿ ಹಿಂದೆಂದೂ ಸಿಕ್ಕಿರದ ಪಾತ್ರ ಸಿಕ್ಕಿದೆ. ಇದರಲ್ಲಿ ದಂಡುಪಾಳ್ಯ ಗ್ಯಾಂಗಿನ ಕರ್ಮಕಾಂಡಕ್ಕೆ ಸಾಕ್ಷಿಯಾದ ಹೆಂಗಸಿನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಖಂಡಿತ ಪ್ರೇಕ್ಷಕರು ಈ ನನ್ನ ಹೊಸ ಪ್ರಯೋಗವನ್ನು ಮೆಚ್ಚಿಕೊಳ್ಳುತ್ತಾರೆ" ಎಂದಿದ್ದಾರೆ ಪೂಜಾ ಗಾಂಧಿ.

ಕೇವಲ ತಮ್ಮ ಬೆತ್ತಲೆ ಬೆನ್ನನ್ನು ಪ್ರದರ್ಶನ ಮಾಡಿದ್ದಷ್ಟೇ ಅಲ್ಲ, ಘಾಟಿ ಹೆಂಗಸಿನ ಮ್ಯಾನರಿಸಂ, ಕುಡಿತ, ಕುಣಿತಗಳು, ಹಾವ-ಭಾವ ಇತ್ಯಾದಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಪೂಜಾ ಆ ಹೆಂಗಸಿನ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಲಾಗಿದೆ. ಅದು ನಿಜವೇ ಆಗಿದ್ದರೆ ಮತ್ತೆ ಸ್ಯಾಂಡಲ್ ವುಡ್ ನಲ್ಲಿ 'ಪೂಜಾ ಯುಗ' ಪ್ರಾರಂಭವಾಗುವುದು ಖಂಡಿತ ಎನ್ನಲಾಗುತ್ತಿದೆ.

ಈ ಚಿತ್ರದಲ್ಲಿ ಪೂಜಾ ಅಭಿನಯಿಸಿದ ನಂತರವೇ ಆವರಿಗೆ ಮಲಯಾಳಂನಲ್ಲಿ 'ಮ್ಯಾಡ್ ಡ್ಯಾಡ್' ಚಿತ್ರದಂತಹ ನಟನೆಗೆ ಸ್ಕೋಪ್ ಇರುವ ಪಾತ್ರ ಹುಡುಕಿಕೊಂಡು ಬಂದಿದೆ. ಇನ್ನು ಈ ಚಿತ್ರ ಯಶಸ್ವಿಯಾದರೆ ಮತ್ತೆ ಪೂಜಾಗೆ ಅವಕಾಶ ಸಿಗುವುದರಲ್ಲಿ ಯಾಕೆ ಯಾರಿಗೆ ಸಂಶಯ? ಸ್ವತಃ ಪೂಜಾ ಗಾಂಧಿಗೂ ಈ ಬಗ್ಗೆ ಆತ್ಮವಿಶ್ವಾಸವಿದೆ. ಅದು ಸಹಜವೂ ಆಗಿದೆ.

ಈ ಮೊದಲು ದಂಡುಪಾಳ್ಯ ಚಿತ್ರಕ್ಕಾಗಿ ಪೂಜಾ ಗಾಂಧಿ ಬೆತ್ತಲೆ ಬೆನ್ನು ತೋರಿಸಿದ್ದಕ್ಕೆ ಬಹಳಷ್ಟು ಗಲಾಟೆಯಾಗಿತ್ತು. ಹಲವು ಮಹಿಳಾ ಸಂಘಟನೆಗಳು ಪೂಜಾ ವಿರುದ್ಧ ಕೆಂಡಾಮಂಡಲವಾಗಿ ಪ್ರತಿಭಟನೆ ನಡೆಸಿದ್ದವು. ಪೂಜಾ ಹೋದಲ್ಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಹೋಗಿತ್ತು.

ದಂಡುಪಾಳ್ಯ ಗ್ರಾಮದವರೂ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕೆಲವರು ಸೆನ್ಸಾರ್ ಮಂಡಳಿ ಮೆಟ್ಟಿಲೇರಿದ್ದರು. ಚಿತ್ರವನ್ನು ನಿಷೇಧಿಸುವಂತೆ, ಪ್ರಮಾಣ ಪತ್ರ ನೀಡದಂತೆ ಒತ್ತಾಯ ತರಲಾಯಿತಾದರೂ ಅವೆಲ್ಲಾ ಗಾಳಿಪಟವಾಗಿ ಹಾರಿಹೋಯ್ತು. ಚಿತ್ರಕ್ಕೆ ಯಾರಿಂದಲೂ ಯಾವ ತೊಂದರೆಯನ್ನೂ ಮಾಡಲಾಗಲಿಲ್ಲ. ಬಿಡುಗಡೆಯವರೆಗೂ ಎಲ್ಲವೂ ಕ್ಷೇಮ.

ನೋಡಿದರೆ ಕಣ್ಣು ಮುಚ್ಚಿಕೊಳ್ಳುವಂತಹ ಕ್ರೂರ ದೃಶ್ಯಗಳನ್ನು ಹೊಂದಿರುವ ಚಿತ್ರದ ಟ್ರೈಲರ್ ಹಾಗೂ ಪತ್ರಿಕಾ ಜಾಹೀರಾತುಗಳ ವಿರುದ್ಧ ಕೂಡ ಬಹಳಷ್ಟು ಕೂಗು ಕೇಳಿಬಂತು. ಆದರೆ ಪ್ರತಿಭಟನಾಕಾರರಿಗೆ ಎಲ್ಲೂ ಜಯ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಕೂಡ ಬಂದು ಇದೀಗ ಬಿಡುಗಡೆ ಭಾಗ್ಯದ ಹತ್ತಿರಕ್ಕೂ ಬಂದು ನಿಂತಿದೆ.

ಪೂಜಾ ಗಾಂಧಿ ಮುಖ್ಯ ಪಾತ್ರದಲ್ಲಿರುವ ದಂಡುಪಾಳ್ಯದಲ್ಲಿ ಮರಾಠಿ, ರಂಗಭೂಮಿ ಹಾಗೂ ಬಾಲಿವುಡ್ಡಿನಲ್ಲೂ ಸಾಕಷ್ಟು ಹೆಸರು ಮಾಡಿರುವ ನಟ ಮಕರಂದ್ ದೇಶಪಾಂಡೆ ನಟಿಸಿದ್ದಾರೆ. ಗ್ಲಾಮರ್ ಡಾಲ್ ನಿಶಾ ಕೊಠಾರಿ, ರಘು ಮುಖರ್ಜಿ, ಸುಧಾರಾಣಿ, ಭವ್ಯಾ, ದೊಡ್ಡಣ್ಣ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಹರೀಶ್ ರೈ, ರವಿ ಕಾಳೆ, ಬುಲ್ಲೆಟ್ ಪ್ರಕಾಶ್ ಮುಂತಾದವರಿದ್ದಾರೆ.

ಅಂದಹಾಗೆ ಈ ಚಿತ್ರವನ್ನು ನಿರ್ಮಿಸಿದವರು ಗಿರೀಶ್ ಮತ್ತು ಪ್ರಶಾಂತ್. ಅರ್ಜುನ್ ಜನ್ಯಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಒಟ್ಟಿನಲ್ಲಿ, ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ, ಚಿತ್ರತಂಡದ ಎದೆಬಡಿತ ಜೋರಾಗಿದೆಯೆಂಬ ಸುದ್ದಿ ಬಂದಿದೆ. ಪೂಜಾ ಗಾಂಧಿಯ ಬೆತ್ತಲೆ ಬೆನ್ನಿನ ಪ್ರದರ್ಶನವನ್ನು ತೆರೆಯ ಮೇಲೆ ನೋಡಲು ಜನರು ಕಾತರಗೊಂಡಿದ್ದಾರೆ. ನೈಜ ಘಟನೆಯ ಚಿತ್ರವೊಂದು ತೆರೆಯಲ್ಲಿ ಮೂಡಿಬರಲಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/pooja-gandhi-dandupalya-movie-release-srinivas-raju-066223.html">« Previous</a>

More from Filmibeat

English summary
Most sensation created movie 'Dandupalya' releases on 29th June 2012. Srinivas Raju directed in this movie, actress Pooja Gandhi is in lead role. This movie created lots of expectations and curiosity in Sandalwood audience. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X