For Quick Alerts
  ALLOW NOTIFICATIONS  
  For Daily Alerts

  'ದಂಡುಪಾಳ್ಯ'ದ ರಕ್ತಸಿಕ್ತ ಕತೆಗೆ ದಿ ಎಂಡ್..!

  |

  ಟೈಟಲ್ ನಿಂದಲೇ ಜನರನ್ನ ಬೆಚ್ಚಿ ಬೀಳಿಸಿದ ಚಿತ್ರ 'ದಂಡುಪಾಳ್ಯ'. ಮೊದಲ ಚಿತ್ರಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿದ ಹಿನ್ನಲೆಯಲ್ಲಿ ನಿರ್ದೇಶಕ ಶ್ರೀನಿವಾಸ್ ರಾಜು 'ದಂಡುಪಾಳ್ಯ-2' ಸಿನಿಮಾವನ್ನ ಮಾಡಲು ಮುಂದಾದರು. ಅದರ ಜೊತೆಯಲ್ಲೇ 3ನೇ ಭಾಗದ ಚಿತ್ರೀಕರಣ ಮಾಡಿದ್ದ ಶ್ರೀನಿವಾಸ್ ರಾಜು ಸದ್ಯ ಚಿತ್ರವನ್ನ ತೆರೆಗೆ ತರೋದಕ್ಕೆ ಸಿದ್ಧರಾಗಿದ್ದಾರೆ.

  ಇದೇ ತಿಂಗಳ ಅಂತ್ಯಕ್ಕೆ ಸಿನಿಮಾವನ್ನ ತೆರೆಗೆ ತರೋದಕ್ಕೆ ಸಿದ್ದತೆ ನಡೆಸಿರುವ ಶ್ರೀನಿವಾಸ್ ರಾಜು ಅಂಡ್ ಟೀಂ 'ದಂಡುಪಾಳ್ಯ' ಕತೆಗೆ ತಾವೇ 'ದಿ ಎಂಡ್' ಬರೆದಿದ್ದಾರೆ.

  ಎರಡನೇ ಪಾರ್ಟ್ ನಲ್ಲಿ 'ದಂಡುಪಾಳ್ಯ'ದ ಆರೋಪಿಗಳನ್ನ ಅಮಾಯಕರಂತೆ ಬಿಂಬಿಸಿದ ನಿರ್ದೇಶಕರು ಪಾರ್ಟ್ 3 ನಲ್ಲಿ ಮತ್ತಷ್ಟು ವಿಚಾರಗಳನ್ನ ರಿವೀಲ್ ಮಾಡಲಿದ್ದಾರೆ.

  ಆಗಲಿದ್ಯಾ ಮತ್ತಷ್ಟು ವಿಚಾರ ರಿವೀಲ್.?

  ಆಗಲಿದ್ಯಾ ಮತ್ತಷ್ಟು ವಿಚಾರ ರಿವೀಲ್.?

  ಪೋಸ್ಟರ್ ಜೊತೆಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ 'ದಂಡುಪಾಳ್ಯ' ಸಿನಿಮಾ ತಂಡ ಪಾರ್ಟ್ 3 ನಲ್ಲಿ ಇನ್ನಷ್ಟು ವಿಚಾರಗಳನ್ನ ರಿವೀಲ್ ಮಾಡಲಿದ್ಯಂತೆ. ಇನ್ನು ಕೋರ್ಟ್ ವಿಚಾರಕ್ಕೆ ಶ್ರೀನಿವಾಸ್ ರಾಜು ಅವ್ರೇ 'ದಿ ಎಂಡ್' ಎಂದು ಹಂತಕರ ಕತೆಯನ್ನ ತೆರೆ ಮೇಲೆ ಮುಗಿಸಿದ್ದಾರೆ.

  ಏನು ಹೇಳಲು ಹೊರಟಿದ್ದಾರೆ ನಿರ್ದೇಶಕರು.?

  ಏನು ಹೇಳಲು ಹೊರಟಿದ್ದಾರೆ ನಿರ್ದೇಶಕರು.?

  'ದಂಡುಪಾಳ್ಯ' ಪಾರ್ಟ್ 2 ನಲ್ಲಿದ್ದ ಕಲಾವಿದರೇ ಪಾರ್ಟ್ 3 ನಲ್ಲೂ ಮುಂದುವರೆಯುತ್ತಿದ್ದಾರೆ. ವಿಶೇಷ ಅಂದ್ರೆ ಇಲ್ಲಿ ಹೊಸ ಕತೆಯನ್ನೇ ಹೇಳಲಿದ್ದಾರೆ ನಿರ್ದೇಶಕರು. ಚಿತ್ರಕ್ಕಾಗಿ ಮಾಡಿದ್ದ ರಿಸರ್ಚ್ ಎಲ್ಲವೂ ಈಗ ರಿವೀಲ್ ಆಗಲಿದೆ.

  ಇದು ಬ್ಲಾಕ್ ಅಂಡ್ ವೈಟ್ ಸ್ಟೋರಿ

  ಇದು ಬ್ಲಾಕ್ ಅಂಡ್ ವೈಟ್ ಸ್ಟೋರಿ

  ದಂಡುಪಾಳ್ಯ ಪಾರ್ಟ್ 3 ಸಿನಿಮಾದ ಮೋಷನ್ ಪೋಸ್ಟರ್ ಪ್ರಕಾರ ಹೇಳೋದಾದ್ರೆ ಈ ಬಾರಿ ನಿರ್ದೇಶಕ ಶ್ರೀನಿವಾಸ್ ರಾಜು ಪ್ರೇಕ್ಷಕರೆಲ್ಲರನ್ನೂ ಫ್ಲಾಶ್ ಬ್ಯಾಕ್ ಗೆ ಕರೆದೊಯ್ಯಲಿದ್ದಾರೆ. ದಂಡುಪಾಳ್ಯದ ಹಂತಕರ ಬಾಲ್ಯದ ಜೀವನ ಹಾಗೂ ಅವ್ರ ಚಿತ್ರವನ್ನ ವೀಕ್ಷಕರ ಮುಂದಿಡಲಿದ್ದಾರೆ..

  ಪ್ರಮೋಷನ್ ಇಲ್ಲದೆ ರಿಲೀಸ್ ಆಗುತ್ತಾ ಚಿತ್ರ.?

  ಪ್ರಮೋಷನ್ ಇಲ್ಲದೆ ರಿಲೀಸ್ ಆಗುತ್ತಾ ಚಿತ್ರ.?

  ದಂಡುಪಾಳ್ಯ ಸಿನಿಮಾ ಪ್ರಮೋಷನ್ ಪ್ರಾರಂಭ ಮಾಡುತ್ತಿದ್ದ ಹಾಗೆ ಚಿತ್ರಕ್ಕೆ ಕಂಟಕ ಶುರುವಾಗುತ್ತೆ. ಅದೇ ಕಾರಣದಿಂದ ಸಿನಿಮಾ ತಂಡ ಇನ್ನೂ ಪ್ರಮೋಷನ್ ಸ್ಟಾರ್ಟ್ ಮಾಡಿಲ್ಲ. ಇದೇ ವಾರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡೋದಕ್ಕೆ ಸಿದ್ದತೆ ನಡೆಸಲಾಗಿದೆ. ಇನ್ನು ದಂಡುಪಾಳ್ಯ ಪಾರ್ಟ್ 3 ಚಿತ್ರದ ಸೆನ್ಸಾರ್ ಮುಗಿದಿದ್ದು ಚಿತ್ರಕ್ಕೆ ಎ ಸರ್ಟಿಫಿಕೆಟ್ ಕೂಡ ಸಿಕ್ಕಿದೆ. ಇದೇ ತಿಂಗಳ ಅಂತ್ಯ ಅಂದ್ರೆ ನವೆಂಬರ್ 24 ರಂದು ಕನ್ನಡ ಮತ್ತು ತೆಲುಗಿನಲ್ಲಿ ದಂಡುಪಾಳ್ಯ3 ಚಿತ್ರ ತೆರೆಮೇಲೆ ಬರಲಿದೆ.

  English summary
  Dandupalya-3 movie to release by November end

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X