For Quick Alerts
  ALLOW NOTIFICATIONS  
  For Daily Alerts

  'ಟಗರು' ವಿರುದ್ಧ ಪೈಪೋಟಿಗೆ ನಿಲ್ಲಲ್ಲಿದ್ದಾರೆ ದಂಡುಪಾಳ್ಯ ಹಂತಕರು

  By Naveen
  |

  ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ಬಿಡುಗಡೆಯ ದಿನಾಂಕ 2018ಕ್ಕೆ ಬಂತು. ಅಷ್ಟೇ ಅಲ್ಲದೆ ಜನವರಿಗೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಮತ್ತೆ ಫೆಬ್ರವರಿಗೆ ಪೋಸ್ಟ್ ಪೋನ್ ಆಯ್ತು. ಆದರೆ ಮುಂದಿನ ತಿಂಗಳು 'ಟಗರು' ಚಿತ್ರಕ್ಕೆ ಪೈಪೋಟಿ ನೀಡಲು ಕನ್ನಡದ ಮತ್ತೊಂದು ಸಿನಿಮಾ ಸಜ್ಜಾಗಿದೆ.

  ಟ್ರೈಲರ್: ಕ್ರೌರ್ಯದ ಪ್ರತಿರೂಪವಾಗಿ ಬರ್ತಿದೆ 'ದಂಡುಪಾಳ್ಯ-3'ಟ್ರೈಲರ್: ಕ್ರೌರ್ಯದ ಪ್ರತಿರೂಪವಾಗಿ ಬರ್ತಿದೆ 'ದಂಡುಪಾಳ್ಯ-3'

  '2' (ದಂಡುಪಾಳ್ಯ 2) ಚಿತ್ರದ ನಂತರ '3' (ದಂಡುಪಾಳ್ಯ 3) ಸಿನಿಮಾ ರಿಲೀಸ್ ಆಗಲು ರೆಡಿ ಇದೆ. ಈ ಸಿನಿಮಾದ ಬಿಡುಗಡೆಯ ಸುದ್ದಿ ಇದೀಗ ಹೊರಬಂದಿದ್ದು, ಫೆಬ್ರವರಿಗೆ '3' ಸಿನಿಮಾ ರಿಲೀಸ್ ಆಗುತ್ತಿದೆ. 'ಟಗರು' ಸಿನಿಮಾ ಕೂಡ ಅದೇ ತಿಂಗಳು ರಿಲೀಸ್ ಆಗಲಿದ್ದು, ಈ ಎರಡು ಚಿತ್ರಗಳ ನಡುವೆ ದೊಡ್ಡ ಪೈಪೋಟಿ ಶುರುವಾಗಿದೆ. 'ಟಗರು' ಸಿನಿಮಾ ಈಗಾಗಲೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಜೊತೆಗೆ '3' ಚಿತ್ರ ಕೂಡ ಹಿಂದಿನ 'ದಂಡುಪಾಳ್ಯ' ಚಿತ್ರಗಳು ರೀತಿ ವಿವಾದ ಹುಟ್ಟಿಸಬಹುದು.

  ಅಂದಹಾಗೆ, '3' ಚಿತ್ರವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಮಕರಂದ್ ದೇಶಪಾಂಡೆ ಸೇರಿದಂತೆ 'ದಂಡುಪಾಳ್ಯ'ದ ಹಳೆಯ ಸೀರಿಸ್ ನಲ್ಲಿ ನಟಿಸಿದ ಕಲಾವಿದರೆ ಇಲ್ಲಿಯೂ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಯೂಟ್ಯೂಬ್ ದೊಡ್ಡ ಮಟ್ಟದ ಸುದ್ದಿ ಮಾಡಿದೆ. ಇದರಿಂದ ಚಿತ್ರದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗಿದೆ.

  English summary
  Pooja Gandhi starrer Kannada Movie 'Dandupalya 3' will be releasing in February 2018. The plot is based on the real life exploits of a notorious gang named 'Dandupalya'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X