For Quick Alerts
  ALLOW NOTIFICATIONS  
  For Daily Alerts

  'ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ

  By Bharath Kumar
  |

  'ದಂಡುಪಾಳ್ಯ-2' ಚಿತ್ರದ ಶೂಟಿಂಗ್ ಶುರುವಾಗಿ ವರ್ಷಗಳು ಕಳೆಯುತ್ತಾ ಬಂದಿದೆ. ಆದ್ರೆ, ಚಿತ್ರದ ಬಿಡುಗಡೆ ಬಗ್ಗೆ ಯಾವ ಸುದ್ದಿಗಳು ಹೊರಬಿದ್ದಿಲ್ಲ. 'ದಂಡುಪಾಳ್ಯ' ನಿಂತು ಹೋಗಿದೆ. ಚಿತ್ರೀಕರಣ ನಡೆಯುತ್ತಿಲ್ಲ ಎಂಬ ಊಹಾಪೋಹಗಳು ಕೇಳಿ ಬಂತಾದರೂ, ಅದೆಕ್ಕೆಲ್ಲ ತಲೆಕಡೆಸಿಕೊಳ್ಳದ ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ ಮುಗಿಸಿತ್ತು.

  ಇದೀಗ, 'ದಂಡುಪಾಳ್ಯ' ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಹೌದು, ಬಹುತೇಕ ಚಿತ್ರೀಕರಣ ಮುಗಿಸಿರುವ 'ದಂಡುಪಾಳ್ಯ-2' ಈಗ ಮೂರನೇ ಭಾಗವನ್ನ ತೆರೆಗೆ ತರಲಿದೆಯಂತೆ. ಮುಂದೆ ಓದಿ.....

  'ದಂಡುಪಾಳ್ಯ-3' ಬರುತ್ತೆ!

  'ದಂಡುಪಾಳ್ಯ-3' ಬರುತ್ತೆ!

  ಸದ್ಯ, 'ದಂಡುಪಾಳ್ಯ-2' ಚಿತ್ರವನ್ನ ತೆರೆಗೆ ತರಲು ಸಿದ್ದ ಮಾಡುತ್ತಿರುವ ಚಿತ್ರತಂಡ, ಈ ಮಧ್ಯೆ 'ದಂಡುಪಾಳ್ಯ-3' ಚಿತ್ರವನ್ನ ತಯಾರಿಸಲು ನಿರ್ಧರಿಸಿದೆಯಂತೆ. ಅದಕ್ಕೆ ಸಂಬಂಧಪಟ್ಟಂತೆ ಪ್ರಿ-ಪ್ರೊಡಕ್ಷನ್ ಮುಗಿಸಿದ್ದು, ಸಿದ್ದತೆ ನಡೆದಿದೆಯಂತೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]

  ಚಿತ್ರೀಕರಣ ಶುರು!

  ಚಿತ್ರೀಕರಣ ಶುರು!

  'ದಂಡುಪಾಳ್ಯ-2' ಚಿತ್ರೀಕರಣ ಮುಗಿಸಿರುವ ನಿರ್ದೇಶಕರು, ಏಪ್ರಿಲ್ ತಿಂಗಳಿನಿಂದ 'ದಂಡುಪಾಳ್ಯ-3' ಶುರು ಮಾಡಲಿದ್ದಾರಂತೆ. 'ದಂಡುಪಾಳ್ಯ-2' ಬಿಡುಗಡೆ ಮಾಡಿದ ಒಂದು ತಿಂಗಳ ಅಂತರದಲ್ಲಿ 'ದಂಡುಪಾಳ್ಯ-3' ಚಿತ್ರವನ್ನ ರಿಲೀಸ್ ಮಾಡುವ ಯೋಚನೆ ಮಾಡಿದ್ದಾರಂತೆ.['ದಂಡುಪಾಳ್ಯ-2' ಚಿತ್ರೀಕರಣ ನಿಂತಿಲ್ಲ, ಮುಗಿಯಿತು!]

  'ದಂಡುಪಾಳ್ಯ-3' ರಲ್ಲಿ ಏನಿರುತ್ತೆ?

  'ದಂಡುಪಾಳ್ಯ-3' ರಲ್ಲಿ ಏನಿರುತ್ತೆ?

  'ದಂಡುಪಾಳ್ಯ' ಹಂತಕರ ಕಥೆಯನ್ನಿಟ್ಟುಕೊಂಡೇ ಮೂರನೇ ಭಾಗವನ್ನ ಮುಂದುವರೆಸುತ್ತಿರುವ ಚಿತ್ರಕ್ಕೆ, ಮತ್ತಿಬ್ಬರು ಹೊಸದಾಗಿ ಸೇರಿಕೊಳ್ಳಲಿದ್ದಾರಂತೆ. ಉಳಿದಂತೆ ಅದೇ ಕ್ರೌರ್ಯ ಘಟನೆಗಳನ್ನ ಈ ಚಿತ್ರದಲ್ಲೂ ತೋರಿಸಲಿದ್ದಾರಂತೆ.[ಏನು 'ದಂಡುಪಾಳ್ಯ 2' ನಲ್ಲಿ ಬಿಗ್ ಬಾಸ್ ಶ್ರುತಿನಾ?]

  ಭಯಾನಕ ಪೋಸ್ಟರ್ ಗಳು!

  ಭಯಾನಕ ಪೋಸ್ಟರ್ ಗಳು!

  'ದಂಡುಪಾಳ್ಯ-2' ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಕುತೂಹಲ, ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಒಂದೊಂದು ಫೋಸ್ಟರ್ ನಲ್ಲೂ ಕ್ರೌರ್ಯ, ಭಯ, ಅಟ್ಟಹಾಸ ಎದ್ದುಕಾಣುತ್ತಿದೆ.

  ಶ್ರೀನಿವಾಸ ರಾಜು ನಿರ್ದೇಶನದ ಚಿತ್ರ

  ಶ್ರೀನಿವಾಸ ರಾಜು ನಿರ್ದೇಶನದ ಚಿತ್ರ

  2012 ರಲ್ಲಿ ಬಿಡುಗಡೆಯಾಗಿದ್ದ 'ದಂಡುಪಾಳ್ಯ' ಚಿತ್ರದಲ್ಲಿ ಪೂಜಾ ಗಾಂಧಿ, ಮಕರಂದ್ ದೇಶಪಾಂಡೆ, ರವಿ ಕಾಳೆ, ಸೇರಿದಂತೆ ಹಲವರು ಅಭಿನಯಿಸಿದ್ದರು. ಈಗ 'ದಂಡುಪಾಳ್ಯ-2' ಚಿತ್ರದಲ್ಲೂ ಅದೇ ತಂಡ ಮುಂದುವರೆದಿದ್ದು, ಸಂಜನಾ, ಕರಿ ಸುಬ್ಬು, ಯತಿರಾಜು, ಡಾನ್ನಿ, ಜಯದೇವ, ಮುನಿ, ಪೆಟ್ರೋಲ್ ಪ್ರಸನ್ನ ಮತ್ತು ರವಿಶಂಕರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಶ್ರೀನಿವಾಸ ರಾಜು ಆಕ್ಷನ್ ಕಟ್ ಹೇಳಿದ್ದು, ವೆಂಕಟ್ ನಿರ್ಮಾಣ ಮಾಡಿದ್ದಾರೆ.

  English summary
  Dandupalya Director Srinivas Raju is Completed 'Dandupalya-2' Shooting. Now Preparing for Part 3 of the film Titled 'Dandupalya-3'. According to Soruce The Shooting for 'Dandupalya-3' will begin in April.
  Monday, March 27, 2017, 14:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X