For Quick Alerts
  ALLOW NOTIFICATIONS  
  For Daily Alerts

  'ದಂಡುಪಾಳ್ಯ' ನಿರ್ದೇಶಕನ ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ

  |

  'ಮುಂಗಾರು ಮಳೆ' ಸಿನಿಮಾದಿಂದ ಕನ್ನಡಕ್ಕೆ ಪರಿಚಯವಾದ ಪೂಜಾ ಗಾಂಧಿ ಒಂದುವರೆ ದಶಕದಿಂದಲೂ ಹೆಚ್ಚು ಕಾಲದಿಂದ ಕನ್ನಡ ಸಿನಿಮಾರಂಗದ ಭಾಗವೇ ಆಗಿದ್ದಾರೆ.

  ರಾಜಕೀಯದಲ್ಲಿಯೂ ಒಂದು ಕೈ ನೋಡಿ ಬಂದ ಪೂಜಾ ಗಾಂಧಿ 2018 ರ ಬಳಿಕ ಮೂರು ವರ್ಷ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ವರ್ಷಾರಂಭದಲ್ಲಿ ಕೆ.ಎಸ್.ಜವಾಹರ್ ನಿರ್ದೇಶನದ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದ ಪೂಜಾ ಈಗ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

  ಪೂಜಾ ಗಾಂಧಿಗೆ ಭಿನ್ನ ಲುಕ್ ತಂದುಕೊಟ್ಟ 'ದಂಡುಪಾಳ್ಯ' ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಗಾಂಧಿ ಅವರದ್ದು ಮುಖ್ಯ ಪಾತ್ರ.

  ಪೂಜಾ ಗಾಂಧಿ-ಶ್ರೀನಿವಾಸ ರಾಜು ಕಾಂಬಿನೇಷನ್‌ನ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿ ಚಿತ್ರೀಕರಣ 50% ಮುಗಿದಿದೆಯಂತೆ. ಈ ಸಿನಿಮಾವು ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.

  2012 ರಲ್ಲಿ ಮೊದಲ ಬಾರಿಗೆ ಶ್ರೀನಿವಾಸ ರಾಜು 'ದಂಡುಪಾಳ್ಯ' ಸಿನಿಮಾ ನಿರ್ದೇಶಿಸಿದ್ದರು ಆ ಬಳಿಕ 2017 ಹಾಗೂ 2018 ರಲ್ಲಿ ದಂಡುಪಾಳ್ಯ 2 ಹಾಗೂ ದಂಡುಪಾಳ್ಯ 3 ಸಿನಿಮಾಗಳನ್ನು ನಿರ್ದೇಶಿಸಿದರು.

  Recommended Video

  ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್

  ದಂಡುಪಾಳ್ಯ 3 ಬಳಿಕ ಇನ್ನಾವ ಸಿನಿಮಾದಲ್ಲಿಯೂ ನಟಿಸದಿದ್ದ ಪೂಜಾ ಗಾಂಧಿ ಈಗ 'ಸಂಹಾರಿಣಿ' ಹೆಸರಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಜೊತೆಗೆ ಈಗ ಶ್ರೀನಿವಾಸ ರಾಜು ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Dandupalya Director Srinivas Raju, Pooja Gandhi team up for a new mystery thriller. Movie shooting started already.
  Thursday, April 22, 2021, 21:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X