ಹಿಟ್ ಹಾದಿಯಲ್ಲಿರುವ 'ದಂಡುಪಾಳ್ಯ' ಚಿತ್ರದ ಗಳಿಕೆ

ಇದೀಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ದಂಡುಪಾಳ್ಯ' ಚಿತ್ರದ ಬಾಕ್ಸ್ ಆಫಿಸ್ ಗಳಿಕೆ ರು. ನಾಲ್ಕು ಕೋಟಿಯನ್ನು ಮೀರಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದಂಡುಪಾಳ್ಯ ಚಿತ್ರ, ಯಾವುದೇ ದೊಡ್ಡ ಸ್ಟಾರ್ ನಟರಿರುವ ಚಿತ್ರವಲ್ಲ. ಅಥವಾ ದೊಡ್ಡಮಟ್ಟದ ಬಜೆಟ್ ಈ ಚಿತ್ರಕ್ಕಿಲ್ಲ. ಸ್ಟಾರ್ ನಟರನ್ನೇ ನಂಬಿ ಬರುವ ಪ್ರೇಕ್ಷಕರೂ ಕೂಡ ಸಿಗದಿರುವ ಚಿತ್ರವೊಂದು ಇಷ್ಟು ಗಳಿಕೆ ದಾಖಲಿಸಿರುವುದು ನಿಜವಾಗಿಯೂ ಅಚ್ಚರಿಯೇ.

ಸಿನಿಮಾ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಮುಖ್ಯವೇ ಹೊರತೂ ಅದರಲ್ಲಿರುವ ಸ್ಟಾರ್ ಗಳಾಗಲೀ ಅಥವಾ ಬಜೆಟ್ ಆಗಲೀ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಡಿಮೆ ಬಜೆಟ್ ಹಾಗೂ ಪೋಷಕನಟರೊಂದಿಗೆ ಪೂಜಾ ಗಾಂಧಿ ನಾಯಕಿಯಾಗಿ ನಟಿಸಿರುವ ದಂಡುಪಾಳ್ಯ ಚಿತ್ರದ ಯಶಸ್ಸು ಕನ್ನಡ ಚಿತ್ರೋದ್ಯಮಕ್ಕೆ ಹೊಸ ದಾರಿ ತೋರಿಸಿದೆ ಎನ್ನಬಹುದು.

ದಂಡುಪಾಳ್ಯ ಚಿತ್ರ ಎಲ್ಲಾ ಕಡೆ ಯಶಸ್ವಿಯಾಗಿದ್ದರೂ ಮುಖ್ಯವಾಗಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಈ ಚಿತ್ರದ ಗಳಿಕೆ ಹೆಚ್ಚು ದಾಖಲಾಗಿದೆ. ಈ ಭಾಗದಲ್ಲಿ ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳೆ ಹೆಚ್ಚಾಗಿ ಯಶಸ್ವಿಯಾಗುವುದು. ಆದರೆ ಅಚ್ಚರಿಯೆಂಬಂತೆ, ಈ ಚಿತ್ರ ಪೂಜಾ ಗಾಂಧಿಯೆಂಬ ನಾಯಕಿಯನ್ನು ಹೊಂದಿಯೂ ಹಿಟ್ ದಾಖಲಿಸಿದೆ. ಜನ ಈ ಚಿತ್ರವನ್ನು ಮೆಚ್ಚಿ ಸಾಕಷ್ಟು ಮಾತನಾಡತೊಡಗಿದ್ದಾರೆ.

ಹೈದ್ರಾಬಾದ್ ಕರ್ನಾಟಕದಲ್ಲಿ ದಾಖಲಾದ ಈ ಚಿತ್ರದ ಯಶಸ್ಸಿನ ನಂತರವಾದರೂ ಕನ್ನಡ ಚಿತ್ರರಂಗ ಕಡಿಮೆ ಬಜೆಟ್ಟಿನಲ್ಲಿ ಉತ್ತಮ ಚಿತ್ರ ಕೊಡುವ ಮನಸ್ಸು ಮಾಡಲಿ. ಈಗ ಕನ್ನಡದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಯಾವ ಚಿತ್ರವೂ (ಅದ್ದೂರಿ, ದಂಡುಪಾಳ್ಯ) ಕೂಡ ಬಿಗ್ ಬಜೆಟ್ ಅಥವಾ ದೊಡ್ಡ ಸ್ಟಾರ್ ಗಳ ಚಿತ್ರವಲ್ಲ ಎಂಬುದೂ ಗಮನಿಸಬೇಕಾದ ಅಂಶಗಳಲ್ಲೊಂದು.

ಏನೇ ಆಗಲಿ, ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ಈ ಚಿತ್ರದ ಮೂಲಕ ತಾವೊಬ್ಬ ಸಮರ್ಥ ನಿರ್ದೇಶಕ ಎಂಬುದನ್ನು ತೋರಿಸಿದ್ದಾರೆ. ಜೊತೆಗೆ ನೈಜ ಕಥೆಯೊಂದನ್ನು ಜನರಿಗೆ ಇಷ್ಟವಾಗುವಂತೆ ನಿರೂಪಿಸಿ ತಕ್ಕಮಟ್ಟಿಗೆ ಯಶಸ್ಸನ್ನೂ ಗಳಿಸಿದ್ದಾರೆ. ಇನ್ನೂ ಈ ಚಿತ್ರ ಮೂರ್ನಾಲ್ಕು ಕೋಟಿ ರು ಸಂಗ್ರಹಿಸಬಹುದೆಂದು ಅಂದಾಜಿಸಲಾಗಿದೆ. ಹಾಗಾದರೆ, ದಂಡಪಾಳ್ಯ ಚಿತ್ರವು ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆಯುವುದು ಖಚಿತ. (ಒನ್ ಇಂಡಿಯಾ ಕನ್ನಡ)

More from Filmibeat

English summary
Srinivas Raju directed movie Dandupalya collected more than Rs. 4 crore in the Box Office. Actress Pooja Gandhi acted in lead role with many popular artists. This movie created lots of expectations and curiosity in Sandalwood audience before the release itself. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X