'ಸ್ಟಾರ್' ನಿರ್ದೇಶಕನ ಚಿತ್ರಕ್ಕೆ ಆಯ್ಕೆಯಾದ 'ಕುರುಕ್ಷೇತ್ರ'ದ ಭೀಮ.!

Recommended Video

ಕುರುಕ್ಷೇತ್ರ ಸಿನಿಮಾದ ನಂತರ 2ನೇ ಕನ್ನಡ ಸಿನಿಮಾಗೆ ಆಯ್ಕೆಯಾದ ಡ್ಯಾನಿಶ್ ಅಖ್ತರ್ ಸೈಫ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಪೌರಾಣಿಕ ಚಿತ್ರ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಸೈಫ್ ನಟಿಸಿದ್ದಾರೆ. ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ರೆ, 'ಡಿ-ಬಾಸ್' ಗೆ ಪ್ರತಿಸ್ಪರ್ಧಿಯಾಗಿ ಅಂದ್ರೆ, ಭೀಮನ ಪಾತ್ರದಲ್ಲಿ ಡ್ಯಾನಿಶ್ ಘರ್ಜಿಸಿದ್ದಾರೆ.

ಇದು ಡ್ಯಾನಿಶ್ ಗೆ ಮೊದಲ ಕನ್ನಡ ಸಿನಿಮಾ. ಈಗಾಗಲೇ ಕುರುಕ್ಷೇತ್ರ ಚಿತ್ರವನ್ನ ಸಂಪೂರ್ಣವಾಗಿ ಮುಗಿಸಿ, ಬಿಡುಗಡೆಗಾಗಿ ಕಾಯ್ತಿದ್ದಾರೆ. ಈ ನಡುವೆ ಡ್ಯಾನಿಶ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

ಇದು ಚಿಕ್ಕ ಸಿನಿಮಾ ಅಲ್ಲ, ಇದು ಬಹುಭಾಷೆಯಲ್ಲಿ ತಯಾರಾಗ್ತಿರುವ ಮೆಗಾ ಸಿನಿಮಾ. ಈ ಚಿತ್ರಕ್ಕೆ ಕನ್ನಡದ ಹೆಸರಾಂತ ನಿರ್ದೇಶಕ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಷ್ಟಕ್ಕೂ, ಡ್ಯಾನಿಶ್ ಅವರ ಎರಡನೇ ಕನ್ನಡ ಸಿನಿಮಾ ಯಾವುದು? ಯಾರು ಈ ಚಿತ್ರದ ನಿರ್ದೇಶಕ.? ಮುಂದೆ ಓದಿ.....

ದೇಸಾಯಿ ನಿರ್ದೇಶನದಲ್ಲಿ 'ಭೀಮ'

ದೇಸಾಯಿ ನಿರ್ದೇಶನದಲ್ಲಿ 'ಭೀಮ'

ಪೌರಾಣಿಕ ಚಿತ್ರದಲ್ಲಿ ಭೀಮನಾಗಿದ್ದ ಡ್ಯಾನಿಶ್ ಅಖ್ತರ್ ಸೈಫ್ ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾ ಬಿಡುಗಡೆಯಾಗದಿರುವಾಗಲೇ ಇನ್ನೊಂದು ದೊಡ್ಡ ಸಿನಿಮಾಗೆ ಡ್ಯಾನಿಶ್ ಆಯ್ಕೆಯಾಗಿದ್ದಾರೆ. ಈಗಾಗಲೇ ದೇಸಾಯಿ ಚಿತ್ರದಲ್ಲಿ ಸೈಫ್ ನಟಿಸಿದ್ದಾರೆ.

'ಉದ್ಘರ್ಷ' ಸೇರಿದ ಡ್ಯಾನಿಶ್

'ಉದ್ಘರ್ಷ' ಸೇರಿದ ಡ್ಯಾನಿಶ್

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡ್ತಿರುವ ಸಸ್ಪೆನ್ಸ್ ಥ್ರಿಲ್ಲರ್ 'ಉದ್ಘರ್ಷ' ಚಿತ್ರದಲ್ಲಿ ಡ್ಯಾನಿಶ್ ಅಭಿನಯಿಸಿದ್ದಾರೆ. ಪಾತ್ರದ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಉದ್ಘರ್ಷಕ್ಕೆ ಮತ್ತೊಬ್ಬ ಅಜಾನುಬಾಹು ಸೇರಿಕೊಂಡಿರುವುದು ತೀರಾ ಕುತೂಹಲ ಕೆರಳಿಸಿದೆ. ಈ ವಿಷ್ಯವನ್ನ ಖುದ್ದು ನಿರ್ದೇಶಕರೇ ಖಚಿತಪಡಿಸಿದ್ದು, ಶೂಟಿಂಗ್ ಸೆಟ್ ನಲ್ಲಿದ್ದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

ಸೌತ್ ಸ್ಟಾರ್ ನಟರು

ಸೌತ್ ಸ್ಟಾರ್ ನಟರು

ಅಂದ್ಹಾಗೆ, ಉದ್ಘರ್ಷ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗ್ತಿದೆ. ರಜನಿಕಾಂತ್ 'ಕಬಾಲಿ' ಚಿತ್ರದಲ್ಲಿ ಅಭಿನಯಿಸಿದ್ದ ಸಾಯಿ ಧನ್ಸಿಕಾ ಮತ್ತು ಬಹುಭಾಷಾ ನಟ ಠಾಕೂರ್ ಅನೂಪ್ ಸಿಂಗ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಕಬೀರ್ ದುಹಾನ್ ಸಿಂಗ್, ಹರ್ಷಿಕಾ ಪೂಣಚ್ಚ ಮತ್ತು ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕುತೂಹಲ ಮೂಡಿಸಿರುವ ಉದ್ಘರ್ಷ

ಕುತೂಹಲ ಮೂಡಿಸಿರುವ ಉದ್ಘರ್ಷ

ಮೇಕಿಂಗ್ ನಿಂದಲೇ ಹೆಚ್ಚು ಕುತೂಹಲ ಮೂಡಿಸಿರುವ ದೇಸಾಯಿ ಅವರ ಈ ಸಿನಿಮಾ ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದ್ರೆಮ ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. ಚಿತ್ರದ ಕಥಾವಸ್ತು ವಿಭಿನ್ನವಾಗಿದ್ದು ಅದಕ್ಕೆ M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

More from Filmibeat

English summary
Sunil Kumar Desai’s upcoming suspense thriller film Udhgharsha which is in the post-production, is expected to release in December or the first week of January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X