'ಉಡುಂಬಾ' ಚಿತ್ರಕ್ಕೆ ಶುಭಕೋರಿ ಸಾಥ್ ನೀಡಿದ ಕುರುಕ್ಷೇತ್ರ 'ಭೀಮ' ಡ್ಯಾನಿಶ್

ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೋತ್ತಿಗಾಗಲೇ 'ಉಡುಂಬಾ' ಸಿನಿಮಾ ಚಿತ್ರಮಂದಿರಕ್ಕೆ ಬರಬೇಕಾಗಿತ್ತು. ಆದ್ರೆ, ಕಾರಣಾಂತರಗಳಿಂದ ಸೈಲೆಂಟ್ ಆಗಿತ್ತು. ಆದ್ರೀಗ ಮತ್ತೆ ಸದ್ದು ಮಾಡುತ್ತಿದೆ.

ಉಡುಂಬಾ ಆಗಮನಕ್ಕೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 23 ರಿಂದ ಥಿಯೇಟರ್ ಗಳಲ್ಲಿ ಅಬ್ಬರಿಸಲಿದ್ದಾನೆ. 'ಗೂಳಿಹಟ್ಟಿ' ಖ್ಯಾತಿಯ ಪವನ್ ಶೌರ್ಯ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಈಗ ಕುರುಕ್ಷೇತ್ರ ಸಿನಿಮಾದಲ್ಲಿ ಭೀಮನ ಪಾತ್ರ ಮಾಡಿ ಗಮನ ಸೆಳೆದಿದ್ದ ಡ್ಯಾನಿಶ್ ಅಖ್ತರ್ ಸೈಫಿ ಶುಭಕೋರಿ ಸಾಥ್ ನೀಡಿದ್ದಾರೆ.

''ಆಗಸ್ಟ್ 23 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಡುಂಬಾ ಸಿನಿಮಾ ಬರ್ತಿದೆ. ಪವನ್ ಶೌರ್ಯ ಮತ್ತು ನನ್ನ ಸ್ನೇಹಿತ ಸೈಯದ್ ಇರ್ಫಾನ್ ಆಕ್ಟ್ ಮಾಡಿದ್ದಾರೆ. ಆಲ್ ದಿ ಬೆಸ್ಟ್ ಈ ಚಿತ್ರಕ್ಕೆ. ಕರ್ನಾಟಕದ ಜನ ಎಲ್ಲರೂ ಈ ಚಿತ್ರವನ್ನ ನೋಡಿ ಹಾರೈಸಿ'' ಎಂದು ಡ್ಯಾನಿಶ್ ಮನವಿ ಮಾಡಿದ್ದಾರೆ.

Danish Akhtar Saifi Wish To Udumba Movie

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಜನರನ್ನ ಆಕರ್ಷಿಸಿರುವ ಉಡುಂಬಾ ಚಿತ್ರಕ್ಕೆ ಶಿವರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನೀತ್ ರಾಜ್ ಮೆನೆನ್ ಸಂಗೀತ ನೀಡಿದ್ದಾರೆ. ಹನುಮಂತ ರಾವ್, ವೆಂಕಟರೆಡ್ಡಿ ನಿರ್ಮಾಣ ಮಾಡಿದ್ದು ಮಾನಸ ಮಹೇಶ್ ಸಹ ನಿರ್ಮಾಪಕರಾಗಿದ್ದಾರೆ.

ಪಕ್ಕಾ ಆಕ್ಷನ್ ಕಥೆ ಹೊಂದಿರುವ ಈ ಚಿತ್ರದಲ್ಲಿ ಪವನ್ ಶೌರ್ಯ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರಂತೆ. ಪವನ್ ಗೆ ನಾಯಕಿಯಾಗಿ ಚಿರಾಶ್ರೀ ಅಂಚನ್ ನಟಿಸಿದ್ದಾರೆ. ಸ್ಪೆಷಲ್ ಹಾಡೊಂದರಲ್ಲಿ ಬಿಗ್ ಬಾಸ್ ಸಂಜನ ಹೆಜ್ಜೆ ಹಾಕಿದ್ದಾರೆ. ಶರತ್ ಲೋಹಿತಾಶ್ವ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

More from Filmibeat

English summary
Kurukshetra actor Danish Akhtar Saifi Wish To Udumba Movie. the movie starring pavan shourya and chirashree anchan and releasing on august 23rd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X