For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ

  |

  ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರತಂಡಕ್ಕೆ ಮತ್ತೊಬ್ಬ ಕಲಾವಿದನ ಎಂಟ್ರಿಯಾಗಿದೆ. ದರ್ಶನ್ ಜೊತೆ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ಡ್ಯಾನಿಶ್ ಅಖ್ತರ್ ಸೈಫಿ ಈಗ ಕಬ್ಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಕಬ್ಜದಲ್ಲಿ ಇರಲಿದೆ ಕುರುಕ್ಷೇತ್ರದ ಭೀಮನ ದರ್ಬಾರ್ | Danish Saif Akhtar in Kabza

  ಆಜಾನುಬಾಹು ಡ್ಯಾನಿಶ್ ಕಬ್ಜ ಸಿನಿಮಾದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಕುರುಕ್ಷೇತ್ರ ಸಿನಿಮಾದಲ್ಲಿ ಭೀಮನಾಗಿ ಘರ್ಜಿಸಿದ್ದರು. ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಸಿನಿಮಾದಲ್ಲೂ ಒಂದು ಪಾತ್ರ ಮಾಡಿದ್ದಾರೆ ಎನ್ನಲಾಗಿದೆ.

  ತೆಲುಗಿನ 'ಗನಿ'ಯಿಂದ ಮತ್ತೆ 'ಕಬ್ಜ' ಸೆಟ್ ಗೆ ಮರಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರತೆಲುಗಿನ 'ಗನಿ'ಯಿಂದ ಮತ್ತೆ 'ಕಬ್ಜ' ಸೆಟ್ ಗೆ ಮರಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ

  ಕಬ್ಜ ಚಿತ್ರದಲ್ಲಿ ಸ್ಟಾರ್ ಕಲಾವಿದ ಸಂಖ್ಯೆ ಹೆಚ್ಚಾಗುತ್ತಿದೆ. ಭಾರ್ಗವ್ ಬಕ್ಷಿ ಪಾತ್ರದಲ್ಲಿ ಸುದೀಪ್ ಎಂಟ್ರಿಯಾಗಿದ್ದರು. ಕನ್ನಡದ ಯುವನಟ ಅನೂಪ್ ರೇವಣ್ಣ ಸಹ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಪರಭಾಷೆ ತಾರಯರು ಸಹ ಇರಲಿದ್ದಾರೆ.

  ಕಬ್ಜ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅರ್ಧದಷ್ಟು ಶೂಟಿಂಗ್ ಮುಗಿದಿದೆ. ಸದ್ಯ ಬೆಂಗಳೂರಿನ ಮಿನರ್ವ್ ಮಿಲ್‌ನಲ್ಲಿ ಸೆಟ್ ಹಾಕಲಾಗಿದ್ದು, 40 ದಿನ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಆಮೇಲೆ ಝಾರ್ಖಂಡ್, ಪಾಂಡಿಚೇರಿ, ಮುಂಬೈನಲ್ಲಿ ಶೂಟಿಂಗ್ ಆಗಲಿದೆ'' ಎಂದು ಚಂದ್ರು ಈ ಹಿಂದೆ ಮಾಹಿತಿ ನೀಡಿದ್ದರು.

  ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಸಿನಿಮಾದ ಕತೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಡೆವಲಪ್ ಮಾಡಿ ಕೊಟ್ಟಿದ್ದಾರೆ.

  ಸಿನಿಮಾಕ್ಕೆ ಸಂಗೀತ ನೀಡಿರುವುದು ರವಿ ಬಸ್ರೂರು. ಸಿನಿಮಾದ ಹಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ರೆಟ್ರೊ ಲುಕ್‌ನಲ್ಲಿ ಉಪೇಂದ್ರ ಮಿಂಚುತ್ತಿದ್ದಾರೆ. ಪಕ್ಕಾ ಅಂಡರ್ವಲ್ಡ್ ಸಿನಿಮಾ ಇದಾಗುವ ನಿರೀಕ್ಷೆಯನ್ನು ಚಿತ್ರತಂಡ ಇರಿಸಿಕೊಂಡಿದೆ.

  Read more about: upendra ಉಪೇಂದ್ರ
  English summary
  Danish saif akhtar the Bhima of Kurukshetra joins upendra's Kabzaa directed by R Chandru. Shooting to resume from. March 3 r chandru movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X