ಮೋದಿ ಅವರ ಸ್ವದೇಶಿ ಕರೆಗೆ ದಾನಿಶ್ ಸೇಠ್ ವ್ಯಂಗ್ಯದ ವಿಡಿಯೋ
ಕೊರೊನಾ ಲಾಕ್‌ಡೌನ್ ಭಾರತದ ಆರ್ಥಿಕತೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿಯೇ ಇತ್ತೀಚೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ 'ಸ್ವದೇಶಿ' ಉತ್ಪನ್ನಗಳನ್ನು ಬಳಸುವ ಬಗ್ಗೆ ಕರೆ ನೀಡಿದ್ದರು.
ಮೇ 12 ರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಸ್ವದೇಶಿ ಉತ್ಪನ್ನವನ್ನು ಬಳಸುವಂತೆ ಕರೆ ನೀಡಿದ್ದರು, ಸ್ವದೇಶಿ ಉತ್ಪನ್ನದ ಪ್ರಚಾರ ಮಾಡುವಂತೆಯೂ (ಓಕಲ್ ಫಾರ್ ಲೋಕಲ್) ಅವರು ಕರೆ ನೀಡಿದ್ದರು.
ಮೋದಿ ಅವರ ಕರೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದರು. ಕೆಲವರು ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಇಳಿದಿದ್ದರು. ಕೆಲವರು ಭಾರತದ ವಿದೇಶಿ ಆಮದು ಅಂಕಿ-ಅಂಶ ತೋರಿಸಿದರು. ಕೆಲವರು ಹಾಸ್ಯದ ಮೂಲಕ ಮೋದಿ ಅವರ ಕರೆಗೆ ಪ್ರತಿಕ್ರಿಯಿಸಿದರು. ಇದರಲ್ಲಿ ನಟ, ಹಾಸ್ಯಗಾರ ದಾನಿಶ್ ಸೇಠ್ ಸಹ ಒಬ್ಬರು.
ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ತಮಾಷೆ ವಿಡಿಯೋಗಳನ್ನು ಮಾಡುತ್ತಿರುವ ದಾನಿಶ್ ಸೇಠ್, ಈ ಬಾರಿ ಮೋದಿ ಅವರ ಸ್ವದೇಶಿ (ಓಕಲ್ ಫಾರ್ ಲೋಕಲ್) ಅನ್ನು ವ್ಯಂಗ್ಯ ಮಾಡಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.

ವೆಸ್ಟರ್ನ್ ಕಮೋಡ್‌ನಲ್ಲಿ ಇಂಡಿಯನ್ ಸ್ಟೈಲ್!
ಒಬ್ಬರೇ ವಿವಿಧ ವೇಶಗಳನ್ನು ತೊಟ್ಟು ಪರಸ್ಪರ ಫೋನ್ ಸಂಭಾಷಣೆಯಲ್ಲಿ ಸ್ವದೇಶಿ ಉತ್ಪನ್ನದ ಬಗ್ಗೆ ಮಾತನಾಡುವ ವಿಡಿಯೋ ಮಾಡಿರುವ ದಾನಿಶ್, 'ನೂಡಲ್ಸ್ ಸಹ ಕೈಯಲ್ಲೇ ತಿನ್ನುತ್ತಿದ್ದೀನಿ, ವೆಸ್ಟರ್ನ್ ಕಮೋಡ್‌ನಲ್ಲಿಯೂ ಭಾರತೀಯ ಶೈಲಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದೇನೆ' ಎಂದಿದ್ದಾರೆ.

ಈ ದುಬೈ ಲೋಕಲ್ಲೇ ತಾನೆ: ಕೇರಳಿಗನ ಪ್ರಶ್ನೆ
ವಿಡಿಯೋ ಮುಂದುವರೆದು, 'ಡಯಟ್ ಅಲ್ವಾ ಮೀಟ್ ಮಾಡೋಣ್ವಾ ಎಂದು ಕೇಳಿದರೆ ಮತ್ತೊಬ್ಬ ಬೇಡ ಐಶ್ವರ್ಯಾ ಪಾರ್ಕ್‌ನಲ್ಲಿ ಭೇಟಿ ಆಗೋಣ ಎನ್ನುತ್ತಾನೆ. ಕೇರಳಗಿನೊಬ್ಬ ಮತ್ತೊಬ್ಬ ಕೇರಳಿಗನಿಗೆ ಕರೆ ಮಾಡಿ, 'ಈ ದುಬೈ ಲೋಕಲ್ಲೇ ತಾನೆ?' ಎಂದು ಪ್ರಶ್ನೆ ಮಾಡುತ್ತಾನೆ.

'ನೆಟ್‌ಫ್ಲಿಕ್ಸ್ ಬಿಡು ದೂರದರ್ಶನ ಸಖತ್ತಾಗಿದೆ'
ನೆಟ್‌ಫ್ಲಿಕ್ಸ್ ಬಿಡು, ದೂರದರ್ಶನ ಸಖತ್ತಾಗಿದೆ ಎಂದು ಒಬ್ಬನೆಂದರೆ, ಟಿಂಡರ್ ಬಿಟ್ಟುಬಿಡು, ಶಾದಿಡಾಟ್‌ಕಾಮ್ ಶುರು ಮಾಡು ಎಂದು ಮತ್ತೊಬ್ಬನೆನ್ನುತ್ತಾನೆ. 'ನಾನು ಲಾಜಿರೇ ಹಾಕುವುದನ್ನು ಬಿಟ್ಟು ಈಗ ಲಿಂಗೇರಿ ಹಾಕಿಕೊಳ್ಳುತ್ತಿದ್ದೇನೆ ಎನ್ನುತ್ತಾಳೆ ಮಹಿಳೆ. ಕುಡುಕನೊಬ್ಬ ನೈಜೀರಿಯನ್ನರಾ ನಿಮಗೆ ನನ್ನ ಬ್ಯಾಂಕ್ ಖಾತೆ ಕೊಡಲ್ಲ, ಇನ್ನೇನಿದ್ದರೂ ಲೋಕಲ್ ಜಾಮ್ತಾಡಾ ದವರಿಗೆ ಮಾತ್ರವೇ ಕೊಡ್ತೀನಿ' ಎನ್ನುತ್ತಾನೆ.

ಫ್ರೆಂಚ್ ಬಿರಿಯಾನಿ ಸಿನಿಮಾ ಒಟಿಟಿಗೆ ಬಿಡುಗಡೆ
ಎಲ್ಲಾ ಪಾತ್ರಗಳನ್ನು ನಟ ದಾನಿಶ್ ಸೇಠ್ ಒಬ್ಬರೇ ನಿರ್ವಹಿಸಿದ್ದಾರೆ. ಇದು ಅವರಿಗೆ ಹೊಸದೇನೂ ಅಲ್ಲ. ಫ್ರಾಂಕ್ ಕಾಲ್‌ಗಳನ್ನು ಮಾಡುವುದರಲ್ಲಿ ಖ್ಯಾತರಾದ ಅವರು ಒಂದೇ ಬಾರಿಗೆ ಹಲವು ದ್ವನಿಗಳೊಂದಿಗೆ ಮಾತನಾಡಲ್ಲರು. ಅವರು ಅಭಿನಯಿಸಿರುವ 'ಫ್ರೆಂಚ್ ಬಿರಿಯಾನಿ' ಚಿತ್ರ ನೇರವಾಗಿ ಅಮೆಜಾನ್ ಪ್ರೈಂ ಗೆ ಬಿಡುಗಡೆ ಆಗಿದೆ. ಇದರ ನಿರ್ಮಾಪಕರು ಪುನೀತ್ ರಾಜ್‌ಕುಮಾರ್.


Click it and Unblock the Notifications











