ಪಾಕಿಸ್ತಾನಿ ಅಭಿಮಾನಿಯಿಂದ ಗಿಫ್ಟ್ ಪಡೆದ ಡ್ಯಾನಿಶ್ ಸೇಠ್
ನಟ, ನಿರೂಪಕ ಡ್ಯಾನಿಶ್ ಸೇಠ್ ಮಾತಿನ ಮಲ್ಲ. ತಮ್ಮ ಮಾತಿನ ಮೂಲಕವೇ ಎಲ್ಲರನ್ನು ಆಕರ್ಷಣೆ ಮಾಡುವ ಶಕ್ತಿ ಅವರಿಗೆ ಇದೆ. ಅದೇ ಕಾರಣಕ್ಕೆ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.
ಆರ್ ಸಿ ಬಿ ಹಾಗೂ ಭಾರತದ ಕ್ರಿಕೆಟ್ ತಂಡ ಜೊತೆಗೆ ಫನ್ನಿ ಸಂದರ್ಶನ ಮಾಡುವ ಡ್ಯಾನಿಶ್ ಸೇಠ್ ಸಿಕ್ಕಾಪಟ್ಟೆ ಮಜಾ ನೀಡುತ್ತಾರೆ. ದೇಶ ವಿದೇಶದ ಅಭಿಮಾನಿಗಳು ಅವರ ತುಂಟಾಟ ನೋಡಿ ಏಂಜಾಯ್ ಮಾಡುತ್ತಾರೆ.
ಆ ರೀತಿ ಡ್ಯಾನಿಶ್ ಸೇಠ್ ಕಾರ್ಯಕ್ರಮಗಳನ್ನು ಪಾಕಿಸ್ತಾನದ ಅಭಿಮಾನಿಯೊಬ್ಬರು ಇಷ್ಟ ಪಟ್ಟದ್ದರು. ಆ ಅಭಿಮಾನಿಗೆ ಡ್ಯಾನಿಶ್ ಸೇಠ್ ಭೇಟಿ ಮಾಡುವ ಅವಕಾಶವೂ ಸಿಕ್ಕಿದೆ. ಈ ವೇಳೆ ಡ್ಯಾನಿಶ್ ಗೆ ಅಭಿಮಾನಿ ಪಾಕಿಸ್ತಾನದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಭಿಮಾನಿಯ ಪ್ರೀತಿಯ ಉಡುಗೊರೆಯನ್ನು ಡ್ಯಾನಿಶ್ ಸೇಠ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡ್ಯಾನಿಶ್ ಸೇಠ್ ನೋಡಿ ಅಭಿಮಾನಿಯೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಸದ್ಯ, ಪುನೀತ್ ರಾಜ್ ಕುಮಾರ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಅಸ್ಗರ್ ಪಾತ್ರದಲ್ಲಿ ಡ್ಯಾನಿಶ್ ಸೇಠ್ ನಟಿಸುತ್ತಿದ್ದಾರೆ.


Click it and Unblock the Notifications











