ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾಗೆ ಎಂಟ್ರಿ ಕೊಟ್ಟ ಮತ್ತೋರ್ವ ನಟ
'777 ಚಾರ್ಲಿ' ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆಯಹಂತದ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಚಿತ್ರಕ್ಕೆ ಮತ್ತೋರ್ವ ನಟ ಎಂಟ್ರಿ ಕೊಟ್ಟಿದ್ದಾರೆ. ಅದೂ ಮತ್ಯಾರು ಅಲ್ಲ ಹಂಬಲ್ ಪೋಲಿಟೀಶಿಯನ್ ಖ್ಯಾತಿಯ ನಟ ಡ್ಯಾನಿಶ್ ಸೇಠ್.
Recommended Video
ಹೌದು, ನಟ ಡ್ಯಾನಿಶ್ ಸೇಠ್ ಈಗ ರಕ್ಷಿತ್ ಅಭಿನಯದ 777 ಚಾರ್ಲಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಡ್ಯಾನಿಶ್ ಸೇಠ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಇಂದು ಡ್ಯಾನಿಶ್ ಸೇಠ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶೇಷವಾಗಿ 777 ಚಾರ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಡ್ಯಾನಿಶ್ ಅಭಿನಯದ ಬಗ್ಗೆ ಬಹಿರಂಗ ಪಡಿಸಿದೆ ಸಿನಿಮಾತಂಡ. ಮುಂದೆ ಓದಿ...

777 ಚಾರ್ಲಿಯಲ್ಲಿ ಡ್ಯಾನಿಶ್ ಸೇಠ್
ಡ್ಯಾನಿಶ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾತಂಡ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ರಕ್ಷಿತ್ ಶೆಟ್ಟಿ, ಡ್ಯಾನಿಶ್ ಸೇಠ್ ಜೊತೆಗೆ ಮುದ್ದಾದ ನಾಯಿ ಮೂವರು ಬೈಕ್ ನಲ್ಲಿ ಹೋಗುತ್ತಿರುವ ಪೋಸ್ಟರ್ ಇದಾಗಿದೆ. ಚಿತ್ರಕ್ಕೆ ಡ್ಯಾನಿಶ್ ಎಂಟ್ರಿ ಕೊಟ್ಟಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಿರ್ದೇಶಕರು ಹೇಳಿದ್ದನು?
ಡ್ಯಾನಿಶ್ ಎಂಟ್ರಿ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. "ಚಾರ್ಲಿ ಕುಟುಂಬಕ್ಕೆ ಆತ್ಮೀಯ ಸ್ವಾಗತ ಹಾಗೂ ಹುಟ್ಟುಹ್ಬಬ್ಬದ ಪ್ರೀತಿಯ ಶುಭಾಶಯಗಳು ಡ್ಯಾನಿಶ್ ಸೇಠ್ ಸರ್. 777 ಚಾರ್ಲಿ ಸಿನಿಮಾದ ಭಾಗವಾಗಿದ್ದಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ಡ್ಯಾನಿಶ್ ಪಾತ್ರವೇನು?
ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ಕರ್ಶನ್ ರಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಡ್ಯಾನಿಶ್ ಪಾತ್ರದ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಅಂದ್ಹಾಗೆ ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ.

ಫ್ರೆಂಚ್ ಬಿರಿಯಾನಿ ರಿಲೀಸ್ ಗೆ ರೆಡಿ ಇದೆ
ಡ್ಯಾನ್ ಸೇಠ್ ಅಭಿನಯದ ಮೂರನೆ ಸಿನಿಮಾ ಇದಾಗಿದೆ. ಹಂಬಲ್ ಪೊಲಿಟಿಶಿಯನ್ ಮೂಲಕ ಮೊದಲ ಬಾರಿಗೆ ನಾಯಕನಾಗಿ ಮಿಂಚಿದ ಡ್ಯಾನಿಶ್ ಆ ನಂತರ ಫ್ರೆಂಚ್ ಬಿರಿಯಾನಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.


Click it and Unblock the Notifications











