For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!

  |

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಯನತಾರ ನಟಿಸಿರುವ ದರ್ಬಾರ್ ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 9 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

  ಕರ್ನಾಟಕದಲ್ಲೂ ದರ್ಬಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಆದರೆ, ಮೆಜೆಸ್ಟಿಕ್ ನಲ್ಲಿರುವ ಕನ್ನಡ ಸಿನಿಮಾದ ಮುಖ್ಯ ಚಿತ್ರಮಂದಿರಕ್ಕೆ ರಜನಿಕಾಂತ್ ಸಿನಿಮಾ ಎಂಟ್ರಿಯಾಗಿರುವುದು ನಿಜಕ್ಕೂ ಅಚ್ಚರಿ ತಂದಿದೆ.

  ತೆಲುಗು ಚಿತ್ರಕ್ಕೆ ಸಿದ್ದವಾದ ಕನ್ನಡದ ಮುಖ್ಯ ಚಿತ್ರಮಂದಿರ!ತೆಲುಗು ಚಿತ್ರಕ್ಕೆ ಸಿದ್ದವಾದ ಕನ್ನಡದ ಮುಖ್ಯ ಚಿತ್ರಮಂದಿರ!

  ಅಷ್ಟಕ್ಕೂ, ರಜನಿಕಾಂತ್ ಸಿನಿಮಾ ಮೆಜಿಸ್ಟಿಕ್ ನ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ? ಮುಂದೆ ಓದಿ....

  ನರ್ತಕಿಯಲ್ಲಿ 'ದರ್ಬಾರ್'

  ನರ್ತಕಿಯಲ್ಲಿ 'ದರ್ಬಾರ್'

  ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ದರ್ಬಾರ್ ಸಿನಿಮಾ ತೆರೆಕಾಣುತ್ತಿದೆ. ರಜನಿಕಾಂತ್ ನಟನೆಯ ದರ್ಬಾರ್ ಸಿನಿಮಾದ ತೆಲುಗು ವರ್ಷನ್ ಪ್ರದರ್ಶನವಾಗುತ್ತಿದೆ. ನರ್ತಕಿ ಚಿತ್ರಮಂದಿರಲ್ಲಿ ಪರಭಾಷೆ ಸಿನಿಮಾ ಬಿಡುಗಡೆಯಾಗುತ್ತಿರುವುದು ಬಹಳ ಅಪರೂಪವಾಗಿದ್ದು, ಇದು ಅಚ್ಚರಿಗೂ ಕಾರಣವಾಗಿದೆ.

  ಆಕಾಶ ಸ್ಪರ್ಶಿಸಿದ ತಲೈವಾ ಕ್ರೇಜ್: ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'ಆಕಾಶ ಸ್ಪರ್ಶಿಸಿದ ತಲೈವಾ ಕ್ರೇಜ್: ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'

  ಬೇರೆ ಭಾಷೆ ಚಿತ್ರ ಸ್ವಾಗತಿಸಿದ ಕನ್ನಡ ಚಿತ್ರಮಂದಿರ!

  ಬೇರೆ ಭಾಷೆ ಚಿತ್ರ ಸ್ವಾಗತಿಸಿದ ಕನ್ನಡ ಚಿತ್ರಮಂದಿರ!

  ನರ್ತಕಿ ಚಿತ್ರಮಂದಿರ ಕನ್ನಡ ಸಿನಿಮಾಗಳ ಪಾಲಿಗೆ ಪ್ರಮುಖ ಚಿತ್ರಮಂದಿರ. ಸ್ಟಾರ್ ನಟರಿಗಂತೂ ಇದು ಲಕ್ಕಿ. ದರ್ಶನ್, ಸುದೀಪ್, ಶಿವಣ್ಣ, ಪುನೀತ್, ಯಶ್ ಅವರಿಗೆ ನರ್ತಕಿ ಬೇಕೆ ಬೇಕು. ಇಲ್ಲಿ ಬೇರೆ ಭಾಷೆ ಸಿನಿಮಾ ರಿಲೀಸ್ ಆಗಿದ್ದು ಬಹಳ ಕಮ್ಮಿ. ಇದೀಗ, ಕನ್ನಡದ ಮುಖ್ಯ ಚಿತ್ರಮಂದಿರ ಎನಿಸಿಕೊಂಡಿದ್ದರೂ ತೆಲುಗು ಸಿನಿಮಾವನ್ನು ಸ್ವಾಗತಿಸುತ್ತಿರುವುದು ಗಮನಾರ್ಹ.

  ಒಡೆಯನಿಗೆ ಗೇಟ್ ಪಾಸ್?

  ಒಡೆಯನಿಗೆ ಗೇಟ್ ಪಾಸ್?

  ನರ್ತಕಿ ಚಿತ್ರಮಂದಿರದಲ್ಲಿ ಸದ್ಯ ದರ್ಶನ್ ನಟನೆಯ ಒಡೆಯ ಸಿನಿಮಾ ಪ್ರದರ್ಶನವಾಗುತ್ತಿದೆ. ಮುಂದಿನ ವಾರಕ್ಕೆ ದರ್ಬಾರ್ ಬರ್ತಿರುವುದರಿಂದ, ಒಡೆಯ ಚಿತ್ರ ಎತ್ತಂಗಡಿ ಆಗುತ್ತಿದೆ. ಇದು ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ನಿರಾಸೆ ತರಬಹುದು.

  ಸಂಕಷ್ಟದಲ್ಲಿ ಸೂಪರ್ ಸ್ಟಾರ್ 'ದರ್ಬಾರ್': ರಿಲೀಸ್ ಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿಸಂಕಷ್ಟದಲ್ಲಿ ಸೂಪರ್ ಸ್ಟಾರ್ 'ದರ್ಬಾರ್': ರಿಲೀಸ್ ಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿ

  ಸಂತೋಷ್ ಚಿತ್ರಮಂದಿರದಲ್ಲಿ ಬಾಲಯ್ಯನ ಚಿತ್ರ!

  ಸಂತೋಷ್ ಚಿತ್ರಮಂದಿರದಲ್ಲಿ ಬಾಲಯ್ಯನ ಚಿತ್ರ!

  ಕನ್ನಡ ಸಿನಿಮಾ ಇಂಡಸ್ಟ್ರಿಗೆ ನರ್ತಕಿ ಚಿತ್ರಮಂದಿರ ಹೇಗೋ ಸಂತೋಷ್ ಚಿತ್ರಮಂದಿರವೂ ಹಾಗೆ. ಈ ಎರಡು ಥಿಯೇಟರ್ ಎರಡು ಕಣ್ಣುಗಳು ಇದ್ದಂತೆ. ಈ ಹಿಂದೆ ತೆಲುಗು ನಟ ಬಾಲಕೃಷ್ಣ ನಟಿಸಿದ್ದ ಗೌತಮಪುತ್ರ ಶಾತಕರ್ಣಿ ಸಿನಿಮಾ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಆದರೆ, ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು ಎನ್ನುವುದು ವಿಶೇಷ.

  ನಯನತಾರಗೆ ರಜನಿಕಾಂತ್ ಕೊಟ್ಟ ಬಹುದೊಡ್ಡ ಮೆಚ್ಚುಗೆ ಇದುನಯನತಾರಗೆ ರಜನಿಕಾಂತ್ ಕೊಟ್ಟ ಬಹುದೊಡ್ಡ ಮೆಚ್ಚುಗೆ ಇದು

  ಭವಿಷ್ಯದ ಕಡೆ ಯೋಚಿಸಲಿ

  ಭವಿಷ್ಯದ ಕಡೆ ಯೋಚಿಸಲಿ

  ಮುಖ್ಯ ಚಿತ್ರಮಂದಿರದ ಕಾನ್ಸೆಪ್ಟ್ ನಲ್ಲಿರುವ ಕನ್ನಡ ಚಿತ್ರರಂಗಕ್ಕೆ ಕೆಜಿ ರಸ್ತೆಯ ಚಿತ್ರಮಂದಿರಗಳು ಪ್ರಮುಖವಾಗಿದೆ. ಈಗಾಗಲೇ ಭೂಮಿಕ ಥಿಯೇಟರ್ ತೆಲುಗು ಸೆಂಟರ್ ಎನಿಸಿಕೊಂಡಿದೆ. ಅಭಿನಯ ಹಿಂದಿ ಸೆಂಟರ್ ಆಗಿದೆ. ಮೂವಿಲ್ಯಾಂಡ್ ಎಲ್ಲ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತೆ. ಕೆಲವು ಚಿತ್ರಮಂದಿರ ಮುಚ್ಚಿದೆ. ಸದ್ಯಕ್ಕೆ ನರ್ತಕಿ, ಸಂತೋಷ್, ತ್ರಿವೇಣಿ, ಅನುಪಮಾ ಮಾತ್ರ ಕನ್ನಡ ಸಿನಿಮಾಗಳ ಪಾಲಿಗೆ ಉಳಿದುಕೊಂಡಿದೆ. ಈಗ ನರ್ತಕಿ ಹಾಗೂ ಸಂತೋಷ್ ಥಿಯೇಟರ್ ನಲ್ಲೂ ಪರಭಾಷೆ ಸಿನಿಮಾ ಪ್ರದರ್ಶಿಸಿದರೆ, ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಮುಖ್ಯ ಚಿತ್ರಮಂದಿರದ ಸಮಸ್ಯೆ ಹೆಚ್ಚಾಗಬಹುದು.

  English summary
  Superstar Rajinikanth and nayanthara starrer Darbar movie is set to release in Narthaki theater at Majestic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X