ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಕೊರೊನಾ

ಕನ್ನಡ ನಟ ಡಾರ್ಲಿಂಗ್ ಕೃಷ್ಣ ಮತ್ತು ಪತ್ನಿ ಮಿಲನ ನಾಗರಾಜ್ ದಂಪತಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಕುರಿತು ಡಾರ್ಲಿಂಗ್ ಕೃಷ್ಣ ಮಾಹಿತಿ ನೀಡಿದ್ದು, ''ನನಗೆ ಮತ್ತು ನನ್ನ ಪತ್ನಿಗೆ ಕೋವಿಡ್ ತಗುಲಿದೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Recommended Video

Love Mocktail ಜೋಡಿಯನ್ನ ಕಾಡ್ತಿದೆ ಕೊರೊನಾ‌ ವೈರಸ್ | Filmibeat Kannada

''ನಮ್ಮ ಸಂಪರ್ಕಕ್ಕೆ ಬಂದಿದ್ದವರು ದಯವಿಟ್ಟು ಪರೀಕ್ಷಿಸಿಕೊಳ್ಳಿ'' ಎಂದು ಸಂಪರ್ಕಿತರಿಗೆ ಮನವಿ ಮಾಡಿದ್ದಾರೆ. ಇಬ್ಬರಿಗೂ ಸೋಂಕು ತಗುಲಿದೆ ಎಂಬ ವಿಚಾರ ತಿಳಿದ ಅಭಿಮಾನಿಗಳು ''ಬೇಗ ಗುಣಮುಖರಾಗಿ'' ಎಂದು ಹಾರೈಸಿದ್ದಾರೆ.

ಒಂದು ವಾರದ ಹಿಂದೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ಗೋವಾದಲ್ಲಿದ್ದರು. ಗೋವಾದಲ್ಲಿ ಕೃಷ್ಣ ನಟನೆಯ 'ಶುಗರ್ ಫ್ಯಾಕ್ಟರಿ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಮಿಲನ ನಾಗರಾಜ್ ಸಹ ಗೋವಾಗೆ ಭೇಟಿ ನೀಡಿದ್ದರು. ಕೃಷ್ಣ ಮತ್ತು ಮಿಲನ ಗೋವಾದಲ್ಲಿದ್ದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

Darling Krishna and his wife Milana Nagaraj Tests Positive for Coronavirus

ಫೆಬ್ರವರಿ 14 ರಂದು ಪ್ರೇಮಿಗಳ ದಿನದ ವಿಶೇಷವಾಗಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ವಿವಾಹವಾಗಿದ್ದರು. ನಂತರ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೆ ತೆರೆಳಿದ್ದರು. ಅಲ್ಲಿಂದ ವಾಪಸ್ ಬಂದ ನಂತರ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು.

ಲವ್ ಮಾಕ್ಟೈಲ್ 2, ಶುಗರ್ ಫ್ಯಾಕ್ಟರಿ, Shrikrishnagmail.com ಸಿನಿಮಾಗಳಲ್ಲಿ ಕೃಷ್ಣ ನಟಿಸುತ್ತಿದ್ದಾರೆ. ಇನ್ನು ಪೃಥ್ವಿ ಅಂಬಾರ್ ನಟಿಸುತ್ತಿರುವ ಪಾರೀನ್ ಚಿತ್ರದಲ್ಲಿ ಮಿಲನ ಅಭಿನಯಿಸುತ್ತಿದ್ದಾರೆ.

More from Filmibeat

English summary
Darling Krishna and his wife Milana Nagaraj Tests Positive for Coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X