ಮದುವೆಯ ಆಮಂತ್ರಣ ನೀಡಲು ಶುರು ಮಾಡಿದ ಕೃಷ್ಣ-ಮಿಲನ ಜೋಡಿ
'ಲವ್ ಮಾಕ್ಟೈಲ್' ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಸಪ್ತಪದಿ ತುಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಫೆಬ್ರವರಿ 14 ರಂದು ಇವರಿಬ್ಬರು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಪ್ರೇಮಿಗಳ ದಿನದ ವಿಶೇಷವಾಗಿ ಮುಹೂರ್ತ ಕೂಡಿ ಬಂದಿದ್ದು, ನವಜೋಡಿಗಳು ತಯಾರಾಗುತ್ತಿದ್ದಾರೆ.
ಇತ್ತೀಚಿಗಷ್ಟೆ ಕೃಷ್ಣ ಮತ್ತು ಮಿಲನ ನಾಗರಾಜ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈಗ ಕಲಾವಿದರಿಗೆ ವಿವಾಹಕ್ಕೆ ಆಮಂತ್ರಣ ನೀಡಲು ಶುರು ಮಾಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಮಿಲನ ಹಾಗೂ ಕೃಷ್ಣ ಜೋಡಿ ಮದುವೆ ಕರೆಯೋಲೆ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಅವರಿಗೆ ಡಾರ್ಲಿಂಗ್ ಕೃಷ್ಣ ಬಹಳ ಆತ್ಮೀಯರು ಹೌದು. 'ಲವ್ ಮಾಕ್ಟೈಲ್' ಚಿತ್ರಕ್ಕೂ ಸುದೀಪ್ ಹೆಚ್ಚು ಪ್ರೋತ್ಸಾಹ ನೀಡಿದ್ದರು.

ನಟಿ ಅಮೂಲ್ಯ ದಂಪತಿ ಮನೆಗೆ ಕೃಷ್ಣ-ಮಿಲನ ಜೋಡಿ ಭೇಟಿ ನೀಡಿ ಮದುವೆಯ ಕರೆಯೋಲೆ ನೀಡಿದ್ದಾರೆ. ಈ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೂ ಮುಂಚೆ ದೀಪಿಕಾ ದಾಸ್ ಅವರ ಮನೆಗೆ ಕೃಷ್ಣ-ಮಿಲನ ನಾಗರಾಜ್ ಜೋಡಿ ಭೇಟಿ ನೀಡಿ ಮದುವೆಯ ಆಮಂತ್ರಣ ನೀಡಿದ್ದಾರೆ.
ಇತ್ತೀಚಿಗಷ್ಟೆ ಕೃಷ್ಣ ಮತ್ತು ಮಿಲನ ಜೋಡಿ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದರು. ಸ್ನೇಹಿತರು ಆಯೋಜಿಸಿದ್ದ ಪಾರ್ಟಿಯಲ್ಲಿ ಮಿಲನ ಮತ್ತು ಕೃಷ್ಣ ಮಿಂಚಿದ್ದರು. ಈ ಫೋಟೋಗಳು ಅಭಿಮಾನಿಗಳ ಕಣ್ಮನ ಸೆಳೆದಿತ್ತು.


Click it and Unblock the Notifications











