For Quick Alerts
  ALLOW NOTIFICATIONS  
  For Daily Alerts

  ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ಕೃಷ್ಣ ಮತ್ತು ಮಿಲನಾ ನಾಗರಾಜ್

  |

  ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆಗೆ ಇನ್ನೊಂದೇ ದಿನ ಬಾಕಿ ಇದೆ. ಲವ್ ಮಾಕ್ ಟೇಲ್ ಜೋಡಿ ಹೊಸ ಜೀವನಕ್ಕೆ ಕಾಲಿಡಲು ಕ್ಷಣಗಣನೆ ಪ್ರಾರಂಭವಾಗಿದೆ. ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ದಿನ ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

  ಈಗಾಗಲೇ ಮಿಲನಾ ಮತ್ತು ಕೃಷ್ಣ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮದುವೆ ಶಾಸ್ತ್ರಗಳಲ್ಲಿ ಸುಂದರವಾಗಿ ಕಾಣಿಸುತ್ತಿದ್ದು, ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ ಸೇರಿದಂತೆ ಮದುವೆಯ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ಮುಂದೆ ಓದಿ..

  ಫೋಟೋಗಳು: ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣಫೋಟೋಗಳು: ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

  ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಡಾರ್ಲಿಂಗ್ ಜೋಡಿ

  ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಡಾರ್ಲಿಂಗ್ ಜೋಡಿ

  ಮಿಲನಾ ಮತ್ತು ಕೃಷ್ಣ ಅವರ ಹಳದಿ ಶಾಸ್ತ್ರ ಸಂಭ್ರಮ ಅದ್ದೂರಿಯಾಗಿ ನೆರವೇರಿದೆ. ಮೊನ್ನೆಯಷ್ಟೆ ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ್ದ ಡಾರ್ಲಿಂಗ್ ಜೋಡಿ ಇದೀಗ ಹಳದಿ ಶಾಸ್ತ್ರದಲ್ಲಿ ಮಿಂದೆದಿದ್ದಾರೆ. ಅರಿಶಿಣ ಶಾಸ್ತ್ರದ ಫೋಟೋವನ್ನು ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲವ್ ಮಾಕ್ ಟೇಲ್ ಜೋಡಿಯ ಸುಂದರ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

  ಮೆಹಂದಿ ಶಾಸ್ತ್ರ

  ಮೆಹಂದಿ ಶಾಸ್ತ್ರ

  ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮೆಹಂದಿ ಸಂಭ್ರಮ ರಂಗೇರಿತ್ತು. ಇಬ್ಬರು ಮೆಹಂದಿ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೃಷ್ಣ ಭಾವಿ ಪತ್ನಿ ಮಿಲನಾ ಕೈಗೆ ಮೆಹೆಂದಿ ಹಾಕುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

  ವಿಡಿಯೋ ವೈರಲ್; ಮದುವೆ ಶಾಸ್ತ್ರದ ಮೊದಲ ವಿಡಿಯೋ ಹಂಚಿಕೊಂಡ ನಟಿ ಮಿಲನಾ ನಾಗರಾಜ್ವಿಡಿಯೋ ವೈರಲ್; ಮದುವೆ ಶಾಸ್ತ್ರದ ಮೊದಲ ವಿಡಿಯೋ ಹಂಚಿಕೊಂಡ ನಟಿ ಮಿಲನಾ ನಾಗರಾಜ್

  ವಿಭಿನ್ನ ಉಡುಪಿನಲ್ಲಿ ಕೃಷ್ಣ-ಮಿಲನಾ ಮಿಂಚಿಂಗ್

  ವಿಭಿನ್ನ ಉಡುಪಿನಲ್ಲಿ ಕೃಷ್ಣ-ಮಿಲನಾ ಮಿಂಚಿಂಗ್

  ಮಿಲನಾ ನಾಗರಾಜ್ ಮತ್ತು ಕೃಷ್ಣ ಮದುವೆ ಶಾಸ್ತ್ರಗಳಲ್ಲಿ ವಿಭಿನ್ನ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ. ಮಿಲನಾ ನಾಗರಾಜ್ ಲೆಹೆಂಗಾ ಮತ್ತು ತರಹೇವಾರಿ ಸೀರೆಗಳಲ್ಲಿ ಮಿಂಚುತ್ತಿದ್ದಾರೆ. ಕೃಷ್ಣ ಸಹ ಶೇರ್ವಾನಿ ಹಾಗೂ ದೇಸಿ ಉಡುಪು ಪಂಚೆ ಶಲ್ಯದಲ್ಲಿ ಕಂಗೊಳಿಸುತ್ತಿದ್ದಾರೆ.

  ಟ್ರೈಲರ್ ಬಿಡುಗಡೆಯಲ್ಲೂ ಕುತೂಹಲ ಮೂಡಿಸಿದ ದರ್ಶನ್ | Filmibeat Kannada
  ಮದುವೆ ದಿನ ಲವ್ ಮಾಕ್ ಟೇಲ್-2 ಹಾಡು ರಿಲೀಸ್

  ಮದುವೆ ದಿನ ಲವ್ ಮಾಕ್ ಟೇಲ್-2 ಹಾಡು ರಿಲೀಸ್

  ಕೃಷ್ಣ ಮತ್ತು ಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಲವ್ ಮಾಕ್ ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದರು. ಇದೀಗ ಈ ಜೋಡಿ ಲವ್ ಮಾಕ್ ಟೇಲ್ -2 ನಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಅಂದರೆ ಫೆಬ್ರವರಿ 14ರಂದು ಲವ್ ಮಾಕ್ ಟೇಲ್-2 ಸಿನಿಮಾದ ಒಂದು ಹಾಡು ಕೂಡ ರಿಲೀಸ್ ಆಗುತ್ತಿದೆ.

  English summary
  Darling Krishna And Milana Nagaraj haldi Function. Darling Krishna ties the knot with Milana Nagaraj on February 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X