For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್‌ಟೇಲ್ 2' ಚಿತ್ರದ ಸ್ಕ್ರಿಪ್ಟ್‌ಗೆ ಪೂಜೆ ಸಲ್ಲಿಸಿದ 'ಆದಿ-ನಿಧಿಮಾ'

  |

  'ಲವ್ ಮಾಕ್‌ಟೇಲ್' ಚಿತ್ರದ ಜನಮನ ಗೆದ್ದಿದ್ದ ಚಿತ್ರತಂಡ, ಅದರ ಯಶಸ್ಸಿನ ಖುಷಿಯಲ್ಲಿಯೇ ಎರಡನೆಯ ಭಾಗಕ್ಕೆ ಕೈಹಾಕಿದೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರದ ಕಥೆ ಸಿದ್ಧಪಡಿಸಿರುವ ಡಾರ್ಲಿಂಗ್ ಕೃಷ್ಣ, ಚಿತ್ರೀಕರಣ ಆರಂಭಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

  Rashmika Mandanna writes a note about her dad | Rashmika Mandanna | Instagram Feed

  ಮೊದಲ ಭಾಗದಲ್ಲಿ 'ಆದಿ' ಮತ್ತು 'ನಿಧಿಮಾ' ಪಾತ್ರಗಳಿಂದಲೇ ಪ್ರಸಿದ್ಧರಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಈ ಚಿತ್ರದಲ್ಲಿಯೂ ಮೋಡಿ ಮಾಡಲು ಬಯಸಿದೆ. ಚಿತ್ರದ ಸ್ಕ್ರಿಪ್ಟ್‌ಗೆ ಇಬ್ಬರೂ ಬುಧವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

  ನಿಮ್ಮ ರೀತಿ ನನ್ನನ್ನು ಯಾರು ಪ್ರೀತ್ಸಲ್ಲ: ಭಾವಿ ಪತಿ ಕೃಷ್ಣ ಹುಟ್ಟುಹಬ್ಬಕ್ಕೆ 'ನಿಧಿಮಾ' ಪ್ರೀತಿಯ ವಿಶ್ನಿಮ್ಮ ರೀತಿ ನನ್ನನ್ನು ಯಾರು ಪ್ರೀತ್ಸಲ್ಲ: ಭಾವಿ ಪತಿ ಕೃಷ್ಣ ಹುಟ್ಟುಹಬ್ಬಕ್ಕೆ 'ನಿಧಿಮಾ' ಪ್ರೀತಿಯ ವಿಶ್

  ನಿಮ್ಮೆಲ್ಲ ಆಶೀರ್ವಾದದ ಅಗತ್ಯವಿದೆ. ಮ್ಯಾಜಿಕ್‌ಅನ್ನು ಮರುಸೃಷ್ಟಿಸಲು ಮತ್ತು ನಿಮ್ಮೆಲ್ಲರ ನಿರೀಕ್ಷೆಗಳನ್ನು ಮುಟ್ಟಲು ಕಠಿಣವಾಗಿ ಶ್ರಮಿಸುತ್ತಿದ್ದೇವೆ. ಲವ್ ಮಾಕ್‌ಟೇಲ್ ಚಿತ್ರದ ಮುಂದುವರಿದ ಕಥೆಯಾಗಿ ಲವ್ ಮಾಕ್‌ಟೇಲ್ 2 ಇರಲಿದೆ ಎಂದು ಕೃಷ್ಣ ತಿಳಿಸಿದ್ದಾರೆ.

  ಈ ಚಿತ್ರದಲ್ಲಿ ಮೊದಲ ಭಾಗದಲ್ಲಿ ಇದ್ದಂತೆಯೇ ಮನರಂಜನೆ ಸಿಗುವುದು ಗ್ಯಾರಂಟಿ ಎಂದು ನಟಿ ಮಿಲನಾ ನಾಗರಾಜ್ ಭರವಸೆ ನೀಡಿದ್ದಾರೆ.

  'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್

  ಮೊದಲ ಭಾಗದಲ್ಲಿ ಇದ್ದ ಕೆಲವು ಪಾತ್ರಗಳು ಇಲ್ಲಿಯೂ ಮುಂದುವರಿಯಲಿವೆ. ಹಾಗೆಯೇ ಹೊಸ ಪಾತ್ರಗಳೂ ಬರಲಿವೆ. ಆದರೆ ಫ್ಲೇವರ್ ಮೊದಲ ಚಿತ್ರದಲ್ಲಿದ್ದಂತೆಯೇ ಇರಲಿದೆ. ನಾಯಕನ ಬದುಕಿನಲ್ಲಿ ಮುಂದೆ ನಡೆಯುವ ಘಟನೆಗಳನ್ನು ಹೊಸ ಕಥೆ, ಹೊಸ ಸನ್ನಿವೇಶಗಳ ಮೂಲಕ ಬೇರೆ ಬೇರೆ ಆಯಾಮಗಳಲ್ಲಿ ಹೇಳಲು ಉದ್ದೇಶಿಸಲಾಗಿದೆ.

  English summary
  Darling Krishna and Milana Nagaraj kick start Love Mocktail 2 with a script pooja on Wednesday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X