For Quick Alerts
  ALLOW NOTIFICATIONS  
  For Daily Alerts

  ಇದೇ ವರ್ಷ ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ಮದುವೆ

  |
  ಇದೇ ವರ್ಷ ಡಾರ್ಲಿಂಗ್ ಲವ್ ಮೋಕ್ಟ್ರೈಲ್ ಜೋಡಿ ಮದುವೆ | Darling Krishna | Milana Nagraj

  ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ನಟನೆಯ 'ಲವ್ ಮಾಕ್ ಟೈಲ್' ಸಿನಿಮಾ ರಾಜ್ಯಾದಂತ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಸಕ್ಸಸ್ ಜೊತೆಗೆ ಒಂದು ಸಿಹಿ ಸುದ್ದಿಯನ್ನು ಈ ಜೋಡಿ ಹಂಚಿಕೊಂಡಿದೆ.

  'ಲವ್ ಮಾಕ್ ಟೈಲ್' ಜೋಡಿ ರಿಯಲ್ ಲೈಫ್ ನಲ್ಲಿಯೂ ಒಂದಾಗಿದೆ. ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿರುವ ಈ ಜೋಡಿ ಇದೇ ವರ್ಷ ಮದುವೆ ಆಗಲಿದ್ದಾರೆ. ಅಂದಹಾಗೆ, ಕೃಷ್ಣ - ಮಿಲನ ಪ್ರೀತಿ ಬಗ್ಗೆ ಜನವರಿ 30 ರಂದೇ 'ಫಿಲ್ಮಿಬೀಟ್ ಕನ್ನಡ' ಸುದ್ದಿ ಪ್ರಕಟ ಮಾಡಿತ್ತು.

  Exclusive: ಇದು ಡಾರ್ಲಿಂಗ್ ಕೃ‍ಷ್ಣ 'ರಿಯಲ್ ಲವ್' ಸ್ಟೋರಿExclusive: ಇದು ಡಾರ್ಲಿಂಗ್ ಕೃ‍ಷ್ಣ 'ರಿಯಲ್ ಲವ್' ಸ್ಟೋರಿ

  ನಿನ್ನೆ (ಫೆಬ್ರವರಿ 10) 'ಲವ್ ಮಾಕ್ ಟೈಲ್' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಸಿನಿಮಾದ ಯಶಸ್ವಿ ಪ್ರದರ್ಶನದ ಬಗ್ಗೆ ಸಂತಸ ಹಂಚಿಕೊಂಡ ಈ ಜೋಡಿ ತಮ್ಮ ಪ್ರೀತಿಯ ವಿಷಯವನ್ನು ತಿಳಿಸಿದರು.

  ಅಂದಹಾಗೆ, ಕೃಷ್ಣ ಹಾಗೂ ಮಿಲನ 2013 ರಲ್ಲಿ ಬಂದ 'ನಮ್ ದುನಿಯಾ ನಮ್ ಸ್ಟೈಲ್' ಸಿನಿಮಾದ ಮೂಲಕ ಪರಿಚಯ ಆದರು. ಅಲ್ಲಿಂದ 'ಚಾರ್ಲಿ', 'ಚಂದ್ರಲೇಖ ರಿಟರ್ನ್' ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಸದ್ಯ 'ಲವ್ ಮಾಕ್ ಟೈಲ್ 'ಸಿನಿಮಾಗೆ ಕೃಷ್ಣ ನಿರ್ದೇಶಕರಾಗಿದ್ದರೆ, ಮಿಲನ ನಿರ್ಮಾಪಕಿಯಾಗಿದ್ದಾರೆ.

  ಹೆಚ್ಚಾಯ್ತು 'ಲವ್ ಮಾಕ್ ಟೈಲ್' ಚಿತ್ರಮಂದಿರಗಳ ಸಂಖ್ಯೆ: ಒಳ್ಳೆಯ ಸಿನಿಮಾ ಕೈ ಹಿಡಿದ ಕನ್ನಡಿಗರುಹೆಚ್ಚಾಯ್ತು 'ಲವ್ ಮಾಕ್ ಟೈಲ್' ಚಿತ್ರಮಂದಿರಗಳ ಸಂಖ್ಯೆ: ಒಳ್ಳೆಯ ಸಿನಿಮಾ ಕೈ ಹಿಡಿದ ಕನ್ನಡಿಗರು

  'ಲವ್ ಮಾಕ್ ಟೈಲ್' ಈ ಜೋಡಿಯ ಕನಸಿನ ಸಿನಿಮಾ. ಚಿತ್ರಮಂದಿರಗಳ ಸಮಸ್ಯೆ ಎದುರಿಸಿದ ಸಿನಿಮಾಗೆ ಈಗ ಎಲ್ಲವೂ ಬಗೆ ಹರಿದಿದೆ. ಒಂದು ಒಳ್ಳೆಯ ಸಿನಿಮಾವನ್ನು ಜನ ಮೆಚ್ಚಿಕೊಂಡಿದ್ದಾರೆ.

  English summary
  Kannada actor Darling Krishna and actress Milana Nagaraj will be getting married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X