ಕೃಷ್ಣ-ನಿಶ್ವಿಕಾ ದಿಲ್‌ಪಸಂದ್ ರಿಲೀಸ್ ಡೇಟ್ ಘೋಷಣೆ; ತಿಂಗಳಿಗೊಂದು ಡಾರ್ಲಿಂಗ್ ಕೃಷ್ಣ ಸಿನಿಮಾ!

ಇತ್ತೀಚೆಗಷ್ಟೇ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ನಟಿಸಿ ಲಕ್ಕಿ ಮ್ಯಾನ್ ಎನಿಸಿಕೊಂಡಿದ್ದ ನಟ ಡಾರ್ಲಿಂಗ್ ಕೃಷ್ಣ ಅಭಿನಯದ ಸಾಲು ಸಾಲು ಚಿತ್ರಗಳು ಈ ವರ್ಷದ ಉಳಿದ ತಿಂಗಳುಗಳಲ್ಲಿ ತೆರೆಗಪ್ಪಳಿಸಲು ರೆಡಿಯಾಗಿವೆ. ಲಕ್ಕಿಮ್ಯಾನ್ ಸಕ್ಸಸ್ ಅಲೆಯಲ್ಲಿರುವ ಡಾರ್ಲಿಂಗ್ ಕೃಷ್ಣ ಹಾಗೂ ಗಾಳಿಪಟ 2 ಯಶಸ್ಸಿನಲ್ಲಿರುವ ನಿಶ್ವಿಕಾ ನಾಯ್ಡು ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿರುವ ದಿಲ್ ಪಸಂದ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ನಿರ್ದೇಶನ ಮಾಡಿದ್ದ ಶಿವ ತೇಜಸ್ ಈ ಚಿತ್ರವನ್ನು ನಿರ್ದೇಶಿಸಿದ್ದು, ರಶ್ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿದ್ದಾರೆ ಹಾಗೂ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.

ಈ ವಿಷಯದ ಕುರಿತಾಗಿ ನಟ ಡಾರ್ಲಿಂಗ್ ಕೃಷ್ಣ ಪೋಸ್ಟರ್ ಒಂದನ್ನು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಚಿತ್ರ ನವೆಂಬರ್ 11ಕ್ಕೆ ತೆರೆಗೆ ಬರಲಿದೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಕಳೆದ ಜೂನ್ ತಿಂಗಳಿನಲ್ಲಿ ದಿಲ್ ಪಸಂದ್ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿತ್ತು.

ಈ ವಿಡಿಯೋದಲ್ಲಿ ನಟಿ ನಿಶ್ವಿಕಾ ನಾಯ್ಡು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಮತ್ತೋರ್ವ ನಟಿ ಮೇಘಾ ಶೆಟ್ಟಿ ಪಕ್ಕಾ ಫ್ಯಾಮಿಲಿ ಹುಡುಗಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ನಟ ಡಾರ್ಲಿಂಗ್ ಕೃಷ್ಣ ಇಬ್ಬರ ನಡುವೆ ಸಿಕ್ಕು ಒದ್ದಾಡುವ ಲವರ್ ಬಾಯ್ ಆಗಿದ್ದರು.

Darling Krishna and Nishvika Naidu starrer Dilpasand to hit screen on November 11

ಈ ಟೀಸರ್ ನೋಡಿದ್ದ ಸಿನಿ ಪ್ರೇಕ್ಷಕನಿಗೆ ಇದೊಂದು ರೊಮ್-ಕಾಮ್ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಇದೀಗ ಈ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಈ ಮೂಲಕ ಈ ವರ್ಷ ಉಳಿದಿರುವ ಎಲ್ಲಾ ತಿಂಗಳುಗಳಲ್ಲಿಯೂ ಒಂದೊಂದು ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರ ಬಿಡುಗಡೆಯಾಗುವುದು ಖಚಿತವಾಗಿದೆ. ಹೌದು, ಸದ್ಯ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಲಕ್ಕಿಮ್ಯಾನ್ ಬಿಡುಗಡೆಯಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಕೃಷ್ಣ ಅಭಿನಯದ ಮಿಸ್ಟರ್ ಬ್ಯಾಚುಲರ್, ನವೆಂಬರ್ ತಿಂಗಳಿನಲ್ಲಿ ದಿಲ್ ಪಸಂದ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Darling Krishna and Nishvika Naidu starrer Dilpasand to hit screen on November 11. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X