For Quick Alerts
  ALLOW NOTIFICATIONS  
  For Daily Alerts

  'ಲವ್ ಮಿ or ಹೇಟ್ ಮಿ,,,' ಅಂತಿದೆ ರಚ್ಚು-ಡಾರ್ಲಿಂಗ್ ಕೃಷ್ಣ ಜೋಡಿ

  |

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಡಾರ್ಲಿಂಗ್ ಕೃಷ್ಣ ಮೊಟ್ಟ ಮೊದಲ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಲವ್ ಮಿ or ಹೇಟ್ ಮಿ' ಎಂದು ಟೈಟಲ್ ಇಡಲಾಗಿದೆ.

  ಡಾರ್ಲಿಂಗ್ ಕೃಷ್ಣ ಮತ್ತು ರಚ್ಚು ಸಿನಿಮಾದ ಶೀರ್ಷಿಕೆ ಪೋಸ್ಟರ್ ಇಂದು (ಮೇ 28) ಬಿಡುಗಡೆಯಾಗಿದ್ದು, ಅಣ್ಣಾವ್ರ ಸೂಪರ್ ಹಿಟ್ ಹಾಡಿನ ಸಾಲನ್ನೇ ಚಿತ್ರಕ್ಕೆ ಹೆಸರಾಗಿಸಿದೆ.

  ಡಾರ್ಲಿಂಗ್ ಕೃಷ್ಣಗೆ ಜೋಡಿಯಾದ ರಚಿತಾ ರಾಮ್; ಯಾವ ಸಿನಿಮಾ?ಡಾರ್ಲಿಂಗ್ ಕೃಷ್ಣಗೆ ಜೋಡಿಯಾದ ರಚಿತಾ ರಾಮ್; ಯಾವ ಸಿನಿಮಾ?

  ಈ ಚಿತ್ರ ನಿರ್ದೇಶನ ಮಾಡುತ್ತಿರುವುದು ದೀಪಕ್ ಗಂಗಾಧರ್. ದೀಪಕ್‌ಗೆ ಇದು ಮೊದಲ ಸಿನಿಮಾ. ಪಕ್ಕಾ ಲವ್ ಸ್ಟೋರಿ ಹೇಳಲು ಸಜ್ಜಾಗಿರುವ ನಿರ್ದೇಶಕ ಅದಕ್ಕೆ ತಕ್ಕಂತೆ ಶೀರ್ಷಿಕೆ ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ.

  ಶ್ರೀಧರ್ ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕೆಎಂ ಪ್ರಕಾಶ್ ಸಂಕಲನವಿದೆ. ಇನ್ನುಳಿದಂತೆ ಪೋಷಕ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  ಟೈಟಲ್ ವಿಚಾರಕ್ಕೆ ಬಂದ್ರೆ 1978ರಲ್ಲಿ ಡಾ ರಾಜ್ ಕುಮಾರ್ ನಟಿಸಿದ್ದ 'ಶಂಕರ್ ಗುರು' ಸಿನಿಮಾದ ಹಾಡಿನ ಸಾಲು. ಉಪೇಂದ್ರ ಕುಮಾರ್ ಸಂಗೀತ ಹಾಗು ಚಿ ಉದಯ್ ಶಂಕರ್ ಸಾಹಿತ್ಯ ರಚಿಸಿದ್ದರು. 'ಲವ್ ಮಿ or ಹೇಟ್ ಮಿ' ಹಾಡನ್ನು ಖುದ್ದು ರಾಜ್ ಕುಮಾರ್ ಈ ಹಾಡು ಹಾಡಿದ್ದರು. ಈಗ, ಈ ಹಾಡಿನ ಮೊದಲ ಸಾಲನ್ನೇ ದೀಪಕ್ ಗಂಗಾಧರ್ ತಮ್ಮ ಚಿತ್ರಕ್ಕೆ ಟೈಟಲ್ ಮಾಡಿದ್ದಾರೆ.

  ರಚಿತಾ ರಾಮ್ ಸಿನಿಮಾಗಳು

  ರಮೇಶ್ ಅರವಿಂದ್ ಜೊತೆ 100, ಪ್ರಜ್ವಲ್ ಜೊತೆ ವೀರಂ ಸತೀಶ್ ನೀನಾಸಂ ಜೊತೆ ಮ್ಯಾಟ್ನಿ, ಏಪ್ರಿಲ್, ಲಿಲ್ಲಿ, ಮಾನ್ಸೂನ್ ರಾಗಾ, ಲವ್ ಯೂ ರಚ್ಚು ಅಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಡಾರ್ಲಿಂಗ್ ಕೃಷ್ಣ ಸಿನಿಮಾಗಳು

  ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada

  'ಲವ್ ಮಾಕ್ಟೈಲ್' ಆದ್ಮೇಲೆ ಡಾರ್ಲಿಂಗ್ ಕೃಷ್ಣ ಸಹ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ@ಜಿಮೇಲ್.ಕಾಮ್, MR.ಬ್ಯಾಚುಲರ್, ಶುಗರ್ ಫ್ಯಾಕ್ಟರಿ ಮತ್ತು ಲವ್ ಮಾಕ್ ಟೇಲ್-2ನಲ್ಲಿ ತೊಡಗಿಕೊಂಡಿದ್ದಾರೆ.

  English summary
  Darling Krishna and Rachita Ram Starrer new movie titled as Love Me or Hate Me. title Poster released today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X