For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬ; ಪತಿಗೆ ವಿಶ್ ಮಾಡಿ ವಿಶೇಷ ಗಿಫ್ಟ್ ನೀಡಿದ ಮಿಲನಾ

  |

  ಸ್ಯಾಂಡಲ್ ವುಡ್ ನ ಡಾರ್ಲಿಂಗ್ ಕೃಷ್ಣ ಗೆ ಇಂದು ಹುಟ್ಟುಹಬ್ಬ ಸಂಭ್ರಮ. ಚಂದನವನದ ಬಹುಬೇಡಿಕೆಯ ನಟ ಕೃಷ್ಣಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಪ್ರೀತಿಯ ಶುಭಾಶಯ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ.

  ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೃಷ್ಣಗೆ ಮಡದಿ ಮಿಲನಾ ಕಡೆಯಿಂದ ಪ್ರೀತಿಯ ಶುಭಾಶಯ ಬಂದಿದೆ. ಮಿಲನಾ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುವ ಮೂಲಕ ಪತಿಯ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

  ಸಂತಸದ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ದಂಪತಿಸಂತಸದ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ದಂಪತಿ

  ಲವ್ ಮಾಕ್ಟೇಲ್ ಸಕ್ಸಸ್ ಬಳಿಕ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿರುವ ಕೃಷ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಲವ್ ಮಾಕ್ಟೇಲ್ ಸೂಪರ್ ಹಿಟ್ ಬಳಿಕ ಲವ್ ಮಾಕ್ಟೇಲ್-2 ಅನೌನ್ಸ್ ಮಾಡಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮಾಡಿ ಮುಗಿಸಿದ್ದಾರೆ. ಇಂದು ಕೃಷ್ಣ ಹುಟ್ಟುಹಬ್ಬದ ವಿಶೇಷವಾಗಿ ಲವ್ ಮಾಕ್ಟೇಲ್-2 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಕೃಷ್ಣ ಹುಟ್ಟುಹಬ್ಬಕ್ಕೆ ಗಿಫ್ಟ ಆಗಿ ನೀಡಿದ್ದಾರೆ ಮಿಲನಾ ನಾಗರಾಜ್.

  ಫೋಟೋ ಶೇರ್ ಮಾಡಿ ಮಿಲನಾ ಪತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಂದಹಾಗೆ ಲವ್ ಮಾಕ್ಟೇಲ್-2 ಸಿನಿಮಾದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷ್ಣ ಮತ್ತು ಮಿಲನಾ ಮದುವೆ ದಿನ, ಫೆಬ್ರವರಿ 14ರಂದು ಚಿತ್ರದ ಮೆಲೋಡಿ ಹಾಡು ಬಿಡುಗಡೆಯಾಗಿದೆ.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada

  ಇನ್ನು ವಿಶೇಷ ಎಂದರೆ ಹುಟ್ಟುಹಬ್ಬದ ದಿನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 'ನಾರಾಯಣ ಮಹದೇವ ಧೋನಿ' ಎನ್ನುವ ಹೆಸರಿನ ಪೋಸ್ಟರ್ ರಿಲೀಸ್ ಮಾಡಿ ಹೊಸಬರ ಬೆನ್ನು ತಟ್ಟಿದ್ದಾರೆ. ಕೃಷ್ಣ ಸದ್ಯ ಲವ್ ಮಾಕ್ಟೇಲ್-2 ಜೊತೆಗೆ ಶುಗರ್ ಫ್ಯಾಕ್ಟರಿ, ಮಿಸ್ಟರ್ ಬ್ಯಾಚುಲರ್, Srikrishna@gmail.com, ಲವ್ ಮಿ Or ಹೇಟ್ ಮಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Darling Krishna celebrating his birthday today. Milana Nagaraj birthday wishes to her husband Krishna And shares Love Mocktail-2 poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X