ಲವ್ ಮಾಕ್ಟೆಲ್ 2 ರಿಲೀಸ್ ಡೇಟ್ ಫಿಕ್ಸ್: ಡಾರ್ಲಿಂಗ್ ಕೃಷ್ಣ ಹಂಚಿಕೊಂಡ ಖುಷಿ ವಿಚಾರ!

ಸ್ಯಾಂಡಲ್‌ವುಡ್‌ನಲ್ಲಿ ಸೈಲೆಂಟ್ ಆಗಿ ತನ್ನ ಸಿನಿಮಾ ಮೂಲಕವೇ ಹೆಚ್ಚು ಕ್ರೇಝ್ ಹುಟ್ಟಿಸಿರುವ ನಟ ಅಂದ್ರೆ ಅದು ಡಾರ್ಲಿಂಗ್ ಕೃಷ್ಣ. 'ಮದರಂಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕೃಷ್ಣ ಅದಕ್ಕೂ ಮುನ್ನ ಧಾರವಾಹಿಗಳಲ್ಲಿ ವೀಕ್ಷಕರ ಮನಗೆದ್ದಿದ್ದರು. ನಂತರ ಬಿಗ್‌ಸ್ಕ್ರೀನ್ ಎಂಟ್ರಿ ಕೊಟ್ಟ ಡಾರ್ಲಿಂಗ್ ಕೃಷ್ಣ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೇ ಇವರಿಗೆ ಲವ್ ಮಾಕ್ಟೆಲ್ ತಂದು ಕೊಟ್ಟಷ್ಟು ಹೆಸರು ಬೇರೆ ಯಾವ ಸಿನಿಮಾವು ತಂದುಕೊಟ್ಟಿರಲಿಲ್ಲಾ.

Recommended Video

ಪಾರ್ಟ್ 2 ಇಷ್ಟ ಆದ್ರೆ ಪಾರ್ಟ್ 3 ನೂ ಮಾಡ್ತೀನಿ

ಡಾರ್ಲಿಂಗ್ ಕೃಷ್ಣ 'ಲವ್‌ ಮಾಕ್ಟೇಲ್‌' ಚಿತ್ರದ ಯಶಸ್ಸಿನ ನಂತರ ಮತ್ತೊಂದು ಭಾಗ 'ಲವ್ ಮಾಕ್ಟೇಲ್ 2' ಚಿತ್ರ ಮಾಡುವುದಾಗಿ ಘೋಷಣೆ ಮಾಡಿ, ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿತ್ತು. ಇದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದ್ದು, ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಕಾಯುತ್ತಿದ್ದರು. ಇದೀಗ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಿಲೀಸ್ ದಿನಾಂಕವನ್ನು ಡಾರ್ಲಿಂಗ್ ಕೃಷ್ಣ ಸೇರಿದಂತೆ ಮಿಲನಾ ನಾಗರಾಜ್ ಮತ್ತು ಚಿತ್ರತಂಡವೇ ಹಂಚಿಕೊಂಡಿದೆ.

Darling Krishna confirms Love Mocktail 2 release date

'ಲವ್ ಮಾಕ್ಟೇಲ್ 2' ಚಿತ್ರದ ಬಿಡುಗಡೆ ದಿನಾಂಕವನ್ನು ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ. ಡಾರ್ಲಿಂಗ್ ಕೃಷ್ಣ 'ನೀವೆಲ್ಲರೂ ಊಹಿಸಿರುವ ಪ್ರಕಾರ 'ಲವ್ ಮಾಕ್ಟೇಲ್ 2' ಚಿತ್ರವು ಇದೇ ತಿಂಗಳ ಫೆಬ್ರವರಿ 11ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕಾತರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಲವ್ ಮಾಕ್ಟೆಲ್ ಚಿತ್ರವು ಕೋರೊನಾ ಸಂದರ್ಭದಲ್ಲೆ ರಿಲೀಸ್ ಆಗಿ ಉತ್ತಮ ಪ್ರಸಂಶೆ ಪಡೆದುಕೊಂಡಿತ್ತು. ಇದೀಗ ಲವ್ ಮಾಕ್ಟೇಲ್ 2 ಚಿತ್ರವೂ ಕೋರೊನಾ ನಡುವೆಯೇ ರಿಲೀಸ್‌ ಆಗಲು ಸಿದ್ಧವಾಗಿದೆ. ಅಭಿಮಾನಿಗಳು ಕೂಡ ಸಿನಿಮಾವನ್ನು ನೋಡಲು ದಿನ ಲೆಕ್ಕಹಾಕುತ್ತಿದ್ದಾರೆ.

ಚಿತ್ರದ 'ಸಂಚಾರಿಯಾಗು ನೀ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿತ್ತು. ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. ರಾಘವೇಂದ್ರ ಕಾಮತ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. 'ದೂರ ಹೋದರೂ ನನ್ನೊಳವೇ, ನೂರು ಜನ್ಮಕೂ ಕಾಯುವೆ' ಎಂಬ ಹಾಡಿನ ಸಾಲಿಗೆ ರಕ್ಷಿತಾ ಸುರೇಶ್ ಹಾಗೂ ವಿಜಯ್ ಪ್ರಕಾಶ್ ದನಿ ನೀಡಿದ್ದಾರೆ.

ದುರಂತ ಅಂತ್ಯದ 'ಲವ್ ಮಾಕ್ಟೇಲ್' ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೇ ಇದ್ದರೂ, ಒಟಿಟಿಯಲ್ಲಿ ನೋಡಿ ಮೆಚ್ಚಿದ್ದರು. ಅದರಲ್ಲಿಯೂ ಕೊರೋನಾ ವೈರಸ್ ಹಾವಳಿಯಿಂದಾಗಿ ಲಾಕ್‌ಡೌನ್ ಆದ ಬಳಿಕವೂ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ 'ಲವ್‌ ಮಾಕ್ಟೇಲ್‌' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತರಾ ಎಂಬುದನ್ನು ನೋಡಬೇಕಿದೆ.

ಇನ್ನು ಲವ್ ಮಾಕ್ಟೇಲ್ 2' ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ ಮತ್ತು ರಾಚೆಲ್ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Much-awaited film, Love Mocktail 2 release date is finally confirmed. Writer, director and actor of the film, Darling Krishna announced on his Instagram earlier on Thursday that the movie will hit the screens on February 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X