ಮಿಲನಾ ಮುಖ ನೆನಪಾಗಿ ಬದುಕುವ ನಿರ್ಧಾರ ಮಾಡಿದೆ: ಡಾರ್ಲಿಂಗ್ ಕೃಷ್ಣ ಭಾವುಕ

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪ್ರಸ್ತುತ ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಅಷ್ಟೇ ಅಲ್ಲ ಯಶಸ್ವಿ ಜೋಡಿ ಸಹ.

ಇಬ್ಬರೂ ಬಂಡವಾಳ ಹೂಡಿ, ನಟಿಸಿ, ನಿರ್ದೇಶಕನ ಮಾಡಿದ್ದ 'ಲವ್ ಮಾಕ್ಟೆಲ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ಅದೇ ಸಿನಿಮಾದ ಎರಡನೇ ಭಾಗ ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಗೆ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಳೆಯ ಸೋಲಿನ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯ ಮಾಡಿದ್ದು ಹಾಗೂ ಅದರಿಂದ ಹೊರಬಂದ ವಿಚಾರವನ್ನು ಹಂಚಿಕೊಂಡಿದ್ದಾರೆ.

Darling Krishna Emotional In Love Mocktail 2 Movie Pre Release Event
'ಲವ್ ಮಾಕ್ಟೆಲ್' ಸಿನಿಮಾ ಮಾಡುವಾಗ ನಮ್ಮ ಹತ್ತಿರ ಹಣ ಇರಲಿಲ್ಲ. ತಂದೆಯ ಬಳಿಕ 4 ಲಕ್ಷ ಸಾಲ ಪಡೆದಿದ್ದೆ. ಮಿಲನಾ ಕೆಲವು ಸಿನಿಮಾಗಳಲ್ಲಿ ನಟಿಸಿ ತುಸು ಹಣ ಸಂಪಾದನೆ ಮಾಡಿದ್ದಳು. ದೊಡ್ಡ ಮೊತ್ತದ ಸಾಲ ತೆಗೆದುಕೊಂಡು ಸಿನಿಮಾ ಶುರು ಮಾಡಿದೆವು. ಸಿನಿಮಾಕ್ಕೆ ಮೇಕಪ್ ಇಂದ ಹಿಡಿದು ಎಲ್ಲ ಕೆಲಸ ನಾವೇ ಮಾಡಿದೆವು. ಅಸಿಸ್ಟೆಂಟ್ ಡೈರೆಕ್ಟರ್‌ ಅನ್ನು ಸಹ ಇಟ್ಟುಕೊಂಡಿರಲಿಲ್ಲ. ದಿನಕ್ಕೆ 20-30 ಸಾವಿರ ಖರ್ಚಿನಲ್ಲಿ ಚಿತ್ರೀಕರಣ ಮುಗಿಸುತ್ತಿದ್ದೆವು'' ಎಂದರು ಡಾರ್ಲಿಂಗ್ ಕೃಷ್ಣ.

ಮಿಲನಾ ನಾನೂ ಏಳು ವರ್ಷ ಪ್ರೀತಿಸಿದೆವು, ಒಂದು ಬಾರಿ ಪ್ರೀತಿ ಮಾಡಿದರೆ ಆ ವ್ಯಕ್ತಿ ಸೋಲಲಿ ಗೆಲ್ಲಲಿ ಅವನ ಜೊತೆಯೇ ಜೀವನ ಎಂಬುದು ಮಿಲನಾ ಎಥಿಕ್ಸ್ ಆಗಿತ್ತು. ಹೀಗಿದ್ದಾಗ ನಾನು ಆಕೆಗಾಗಿಯಾದರೂ ಏನಾದರೂ ಮಾಡಲೇ ಬೇಕಿತ್ತು. ನನ್ನ ವೃತ್ತಿಯಲ್ಲಿ ನಾನು ಡೆಡ್ ಎಂಡ್‌ನಲ್ಲಿ ಇದ್ದೆ. ಹಾಗಾಗಿ 'ಲವ್ ಮಾಕ್ಟೆಲ್' ಸಿನಿಮಾ ಮಾಡಿದೆ. ಅದಕ್ಕೆ ಮುನ್ನ ಕೆಲವು ಸಿನಿಮಾಗಳನ್ನು ಬರೆದಿದ್ದೆ ಆದರೆ ಇಷ್ಟವಾಗದೆ ಅದನ್ನು ರಿಜೆಕ್ಟ್ ಮಾಡಿದೆ. 'ಹುಚ್ಚ 2' ಸಿನಿಮಾ ಬಗ್ಗೆಯೂ ನಿರೀಕ್ಷೆ ಇಟ್ಟಿದ್ದೆ ಆದರೆ ಆ ಸಿನಿಮಾ ಗೆಲ್ಲಲಿಲ್ಲ ಹಾಗಾಗಿ ನಾನು ತೀವ್ರ ಹಿಂಜರಿಕೆಯಲ್ಲಿದ್ದೆ'' ಎಂದರು ಡಾರ್ಲಿಂಗ್ ಕೃಷ್ಣ.

'ಲವ್ ಮಾಕ್ಟೆಲ್' ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ನನಗೆ ಇತ್ತು. ಆದರೆ ಸಿನಿಮಾ ಬಿಡುಗಡೆ ಆದ ಮೊದಲ ವಾರ ಒಳ್ಳೆಯ ಕಲೆಕ್ಷನ್ ಆಗಲಿಲ್ಲ. ತಲೆಯ ಮೇಲೆ 40 ಲಕ್ಷ ಸಾಲ ಇತ್ತು. ಒಳ್ಳೆಯ ಸಿನಿಮಾ ಮಾಡಿಯೂ ಹೀಗಾಯ್ತಲ್ಲ ಎಂದು ಬಹಳ ದುಃಖವಾಗಿತ್ತು. ಮಿಲನಾ ಹೊರಗೆ ಹೋದಾಗ ಕನ್ನಡಿ ಮುಂದೆ ನಿಂತು ಬಹಳ ಅಳುತ್ತಿದ್ದೆ. ಆತ್ಮಹತ್ಯೆಯ ಯೋಚನೆಯೂ ಬಂದಿತ್ತು. ಆದರೆ ಮಿಲನಾಳ ಮುಖ ನೆನಪಾಗಿ ಸುಮ್ಮನಾಗುತ್ತಿದ್ದೆ'' ಎಂದರು ಡಾರ್ಲಿಂಗ್ ಕೃಷ್ಣ.

ಡಾರ್ಲಿಂಗ್ ಕೃಷ್ಣ, ನಿರ್ದೇಶನ ಮಾಡಿರುವ 'ಲವ್ ಮಾಕ್ಟೆಲ್ 2' ಸಿನಿಮಾ ಫೆಬ್ರವರಿ 11 ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು ಮೆಚ್ಚುಗೆ ಗಳಿಸಿದೆ.

More from Filmibeat

English summary
Darling Krishna became emotional in Love Mocktail 2 movie pre release event. He said I decided to live just because of Milana Nagaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X