ನಟ ಡಾರ್ಲಿಂಗ್ ಕೃಷ್ಣ ಫೇಸ್ ಬುಕ್ ಪೇಜ್ ಹ್ಯಾಕ್
ಹ್ಯಾಕರ್ಸ್ ಗಳು ಹೆಚ್ಚಾಗಿ ಟಾರ್ಗೆಟ್ ಮಾಡುವುದೆ ಸೆಲೆಬ್ರಿಟಿಗಳನ್ನು. ಆಗಾಗ ಸೆಲೆಬ್ರಿಟಿಗಳ ಫೇಸ್ ಮತ್ತು ಟ್ವಿಟ್ಟರ್ ಪೇಜ್ ಹ್ಯಾಕ್ ಆಗುತ್ತಿರುತ್ತೆ. ಸದ್ಯ ಸ್ಯಾಂಡಲ್ ವುಡ್ ನಟ ಲವ್ ಮಾಕ್ ಟೇಲ್ ನ ನಾಯಕ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದೆ.
Recommended Video
ಈ ಬಗ್ಗೆ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹ್ಯಾಕ್ ಆಗಿದ್ದ ಫೇಸ್ ಬುಕ್ ಈಗ ಸರಿಯಾಗಿದೆ ಎಂದು ತಿಳಿಸಿದ್ದಾರೆ.
"ನನ್ನ ಫೇಸ್ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಲಾಗಿತ್ತು. ಹಾಗಾಗಿ ಯಾವುದೆ ಪೋಸ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸರಿಯಾಗಿದೆ. ಇನ್ಮುಂದೆ ನನ್ನ ಪೋಸ್ಟ್ ಗಳ ಮೂಲಕ ಸಂಪರ್ಕದಲ್ಲಿರುತ್ತಾನೆ" ಎಂದು ಬರೆದುಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಫೇಸ್ ಬುಕ್ ಬಳಸದೆ ತುಂಬ ಸಮಯವಾಗಿತ್ತು. ಸಿನಿಮಾ ಬಗ್ಗೆ ಅಥವಾ ಯಾವುದೆ ಮಾಹಿತಿಯನ್ನು ಟ್ವಿಟ್ಟರ್ ಮೂಲಕ ಮಾತ್ರ ಹಂಚಿಕೊಳ್ಳುತ್ತಿದ್ದರು. ಆದರೀಗ ಫೇಸ್ ಬುಕ್ ಸರಿ ಆಗಿದ್ದು, ಕೃಷ್ಣ ಅವರನ್ನು ಅಭಿಮಾನಿಗಳು ಫೇಸ್ ಬುಕ್ ನಲ್ಲಿಯೂ ಸಂಪರ್ಕಿಸಬಹುದು.
ಲವ್ ಮಾಕ್ ಟೇಲ್ ಸಕ್ಸಸ್ ನ ಖುಷಿಯಲ್ಲಿರುವ ಡಾರ್ಲಿಂಗ್ ಕೃಷ್ಣ ಸದ್ಯ ಪಾರ್ಟ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ ಟೇಲ್ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಾಣುತ್ತಿದ್ದಂತೆ ಪಾರ್ಟ್-2 ಮಾಡಲು ಮುಂದಾಗಿದ್ದು, ಲಾಕ್ ಡೌನ್ ನಲ್ಲಿ ಕೃಷ್ಣ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಪಾರ್ಟ್-2 ಚಿತ್ರೀಕರಣಕ್ಕೆ ಹೊರಡಲಿದ್ದಾರೆ.


Click it and Unblock the Notifications











