ಮಹಾಶಿವರಾತ್ರಿಯಂದು ಗುಡ್ ನ್ಯೂಸ್ ಕೊಟ್ಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್...!

ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಕನ್ನಡಿಗರ ಹೃದಯ ಗೆದ್ದವರು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್. ತಮ್ಮಿಬ್ಬರ 08 ವರ್ಷದ ಸುಂದರವಾದ ಪ್ರೀತಿಗೆ 2021ರಲ್ಲಿ ಅಧಿಕೃತ ಮದುವೆ ಮುದ್ರೆಯನ್ನ ಒತ್ತಿದ್ದ ಇವರಿಬ್ಬರು ಈಗ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಮಹಾ ಶಿವರಾತ್ರಿ ಪ್ರಯುಕ್ತ ತಮ್ಮ ಅಭಿಮಾನಿಗಳಿಗಾಗಿ.. ಹಿತೈಷಿಗಳಿಗಾಗಿ.. ಈ ಶುಭ ಸುದ್ದಿಯನ್ನ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.

ಮಗುವಿನ ಶರ್ಟ್​ ಫೋಟೋನ ಹಂಚಿಕೊಂಡಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ 'KrissMi' ಎಂದು ಪ್ರೀತಿಯ ಸಂಕೇತವನ್ನ ಹಾಕಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ವಿನಂತಿಯನ್ನ ಮಾಡಿಕೊಂಡಿದ್ದಾರೆ.

Darling Krishna Milana Nagaraj Announce Pregnancy

ಈ ವರ್ಷದ ಸೆಪ್ಟೆಂಬರ್ ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮನೆ 'ಕ್ರಿಸ್ಮಿ ನೆಸ್ಟ್' ಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಮುಗ್ಧ ಮಗುವಿನ ನಗುವಿನ ಕಲರವ ಕೇಳಿ ಬರಲಿದೆ. ಇನ್ನೂ ಈ ಸಿಹಿ ಸುದ್ದಿಯನ್ನ ಇಬ್ಬರು ನೀಡಿದ ಬೆನ್ನಲ್ಲಿಯೇ, ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಈ ಕ್ಯೂಟ್ ಜೋಡಿಗೆ ಶುಭಾಶಯವನ್ನ ಕೋರುತ್ತಿದ್ದಾರೆ

2021 ಫೆಬ್ರವರಿ 14ರಂದು ಮದುವೆ

2021 ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಪ್ತಪದಿ ತುಳಿದಿದ್ದರು. ಹೊಸ ಬದುಕನ್ನ ಆರಂಭ ಮಾಡಿದ್ದರು. ಕನ್ನಡ ಚಿತ್ರರಂಗದ ಅನೇಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಇಬ್ಬರಿಗೂ ಶುಭಾಶಯವನ್ನೂ ಕೋರಿದ್ದರು. ಈಗ ಮೂರು ವರ್ಷದ ನಂತರ ಇಬ್ಬರು ಬದುಕಿನ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ

Darling Krishna Milana Nagaraj Announce Pregnancy

07 ಬಾರಿ ತೆರೆ ಹಂಚಿಕೊಂಡಿರುವ ಸ್ಟಾರ್ ಜೋಡಿ

ಸಾಮಾನ್ಯವಾಗಿ ಒಂದು ಜೋಡಿ ಪ್ರೇಕ್ಷಕರ ಹೃದಯ ಗೆದ್ದರೆ, ಆ ಜೋಡಿಯನ್ನೇ ರಿಪೀಟ್ ಮಾಡುವುದು ಚಿತ್ರರಂಗದ ಸಂಪ್ರದಾಯ. ಇದಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅತ್ಯುತ್ತಮ ಉದಾಹರಣೆ . ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಮೊದಲ ಬಾರಿ ಮುಖಾಮುಖಿಯಾದ ಇಬ್ಬರು ಆ ನಂತರ ಚಾರ್ಲಿ ಸಿನಿಮಾದಲ್ಲಿ ಮತ್ತೆ ಜೊತೆಯಾದರು.

ಇಬ್ಬರ ನಡುವೆ ಪ್ರೀತಿ ಅರಳಿದ್ದು ಇದೇ ಸಮಯದಲ್ಲಿ. ಆ ನಂತರ ಲವ್ ಮಾಕ್ಟೇಲ್ ಚಿತ್ರದ ಮೂಲಕ ಇತಿಹಾಸ ಬರೆದ ಇಬ್ಬರು, ಲವ್ ಮಾಕ್ಟೇಲ್ 2ದಲ್ಲಿ ಮತ್ತೆ ತೆರೆ ಹಂಚಿಕೊಂಡರು. ಲವ ಬರ್ಡ್ಸ್, ಮಿಸ್ಟರ್ ಬ್ಯಾಚುಲರ್, ಕೌಸಲ್ಯ ಸುಪ್ರಜಾ ರಾಮದಲ್ಲಿ ಕೂಡ ಒಟ್ಟಿಗೆ ಅಭಿನಯಿಸಿ ಅಭಿಮಾನಿಗಳ ಹೃದಯವನ್ನ ಗೆದ್ದರು

ಬದುಕು ಬದಲಿಸಿದ ಲವ್ ಮಾಕ್ಟೇಲ್

ಲವ್ ಮಾಕ್ಟೇಲ್ ಸಿನಿಮಾ ಬರೋಕೆ ಮುಂಚೆ ಡಾರ್ಲಿಂಗ್ ಕೃಷ್ಣ ಅವರ ಬೆಲೆ ಪಾತಾಳಕ್ಕೆ ಜಾರಿತ್ತು. ಕೃಷ್ಣ ನಟನೆಯ ಕೆಲವು ಸಿನಿಮಾಗಳು ಚೆನ್ನಾಗಿದ್ದರೂ ಕೂಡ, ಅಂದುಕೊಂಡತೆ ಪ್ರೇಕ್ಷಕರಿಗೆ ತಲುಪಿರಲಿಲ್ಲ. ಗೆಲ್ಲಲಿಲ್ಲ. ಇನ್ನೇನು ಡಾರ್ಲಿಂಗ್ ಕೃಷ್ಣ ಅವರ ಸಿನಿ ಬದುಕು ಮುಕ್ತಯವಾಯಿತು ಎಂದು ಎಲ್ಲ ಮಾತನಾಡಿಕೊಳ್ಳುವಷ್ಟರಲ್ಲಿ ದಿಗ್ಗನೆ ಎದ್ದು ಕುಂತ ಕೃಷ್ಣ ತಮ್ಮ ಪ್ರಿಯತಮೆ ಹಾಗೂ ಮಡದಿ ಮಿಲನಾ ನಾಗರಾಜ್ ಜೊತೆ ಸೇರಿ ಲವ್ ಮಾಕ್ಟೇಲ್ ಎನ್ನುವ ಕ್ಯೂಟ್ ಸಿನಿಮಾವನ್ನು ತೆರೆದಿಟ್ಟಿದ್ದರು. ಇದೊಂದು ಸಿನಿಮಾ ಕೃಷ್ಣ ಬಗೆಗಿದ್ದ ಇಮೇಜನ್ನೇ ಬದಲಿಸಿಬಿಟ್ಟಿತು. ಅಲ್ಲಿಂದಾಚೆ ಹಿಂದೆ ತಿರುಗಿ ನೋಡದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕನ್ನಡ ಚಿತ್ರರಂಗದ ಬಹುಬೇಡಿಕೆ ಜೋಡಿಯಾಗಿ ಬೆಳೆದಿದ್ದು ಈಗ ಇತಿಹಾಸ.

More from Filmibeat

English summary
Sandalwood Star Couple Darling Krishna And Milana Nagaraj Are Expecting Their First Child.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X