For Quick Alerts
  ALLOW NOTIFICATIONS  
  For Daily Alerts

  ಲಕ್ಕಿಮ್ಯಾನ್‌: ಅಪ್ಪು ಕೂತಿದ್ದ ಕುರ್ಚಿ ಕೇಳಿದ್ದ ರಾಘಣ್ಣ; ಎಲ್ಲಿದೆಯೋ ಹುಡುಕಬೇಕೆಂದ ಕೃಷ್ಣ!

  |

  ಲಕ್ಕಿಮ್ಯಾನ್ ಕಳೆದ ಶುಕ್ರವಾರವಷ್ಟೇ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ಬಿಡುಗಡೆಗೆ ಹಿಂದಿನ ದಿನವೇ ಪ್ರೀಮಿಯರ್ ಶೋಗಳ ಮೂಲಕ ತೆರೆಗೆ ಅಪ್ಪಳಿಸಿದ ಲಕ್ಕಿ ಮ್ಯಾನ್ ಮೊದಲ ಶೋನಿಂದಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇನ್ನು ಲಕ್ಕಿ ಮ್ಯಾನ್ ಚಿತ್ರ ಅಪ್ಪು ಅಭಿನಯದ ಕೊನೆತ ಕಮರ್ಷಿಯಲ್ ಸಿನಿಮಾ ಎಂದೇ ಹೇಳಬಹುದು. ಈ ಚಿತ್ರವನ್ನು ಬಿಟ್ಟರೆ ಪುನೀತ್ ಕುಣಿದಿರುವ ಬೇರೆ ಯಾವುದೇ ಹೊಸ ಚಿತ್ರವಿಲ್ಲ.

  ಹೀಗಾಗಿಯೇ ಕೊನೆಯದಾಗಿ ತೆರೆ ಮೇಲೆ ತಮ್ಮ ನೆಚ್ಚಿನ ನಟನ ಡಾನ್ಸ್ ನೋಡಲು ಅಪ್ಪು ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದಿದ್ದರು. ಇನ್ನು ಕಳೆದ ಹತ್ತಾರು ತಿಂಗಳುಗಳಿಂದ ಮುಚ್ಚಿದ್ದ ಬೆಂಗಳೂರಿನ ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರ ಇದೇ ಲಕ್ಕಿ ಮ್ಯಾನ್ ಸಿನಿಮಾ ಮೂಲಕ ಮರು ಆರಂಭಗೊಂಡಿದೆ. ಹೀಗೆ ತಿಂಗಳುಗಳ ಬಳಿಕ ತೆರೆದಿದ್ದ ನರ್ತಕಿ ಅಪ್ಪು ಅವರ ನೆಚ್ಚಿನ ಚಿತ್ರಮಂದಿರವೂ ಸಹ ಹೌದು. ಇನ್ನು ಈ ಅಪ್ಪು ಅವರ ನೆಚ್ಚಿನ ಸಿನಿಮಾದಲ್ಲಿ ಲಕ್ಕಿ ಮ್ಯಾನ್ ನೋಡಲು ಅಭಿಮಾನಿಗಳು ಜಮಾಯಿಸಿದ್ದರು.

  ಪುನೀತ್ ಅವರ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದೇ ನರ್ತಕಿಗೆ ಬಂದು ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿದ್ದರು. ಅಪ್ಪು ಎಂಟ್ರಿಗೆ ಎದ್ದು ನಿಂತು ಅಪ್ಪು ಎಂದು ಕೂಗಿ ಶಿಳ್ಳೆ, ಚಪ್ಪಾಳೆ ಹೊಡೆದಿದ್ದರು. ಹಾಗೂ ಚಿತ್ರ ಮುಗಿದ ನಂತರ ಮಾತನಾಡಿದ ಅವರು ಚಿತ್ರದಲ್ಲಿ ಅಪ್ಪು ಕುಳಿತಿದ್ದ ಕುರ್ಚಿಯನ್ನು ನನಗೆ ಕೊಟ್ಟುಬಿಡಿ, ಅದನ್ನು ಇಟ್ಟುಕೊಂಡು ನಾನು ಪೂಜೆ ಮಾಡುತ್ತೇನೆ ಎಂದು ಬೇಡಿಕೆ ಇಟ್ಟಿದ್ದರು.

  ಕುರ್ಚಿ ಹುಡುಕಬೇಕೆಂದ ಕೃಷ್ಣ

  ಕುರ್ಚಿ ಹುಡುಕಬೇಕೆಂದ ಕೃಷ್ಣ

  ಈ ಕುರಿತಾಗಿ ಇತ್ತೀಚಿಗಷ್ಟೆ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ್ದ ನಟ ಡಾರ್ಲಿಂಗ್ ಕೃಷ್ಣಗೆ ಪ್ರಶ್ನೆ ಎದುರಾಗಿತ್ತು. ರಾಘವೇಂದ್ರ ರಾಜ್‌ಕುಮಾರ್ ಅಪ್ಪು ಕುಳಿತಿದ್ದ ಕುರ್ಚಿ ಕೇಳಿದ್ರು, ಅದನ್ನು ಕಳುಹಿಸಿಕೊಟ್ರಾ ಎಂಬ ಪ್ರಶ್ನೆಯೊಂದನ್ನು ಪತ್ರಕರ್ತರೋರ್ವರು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಡಾರ್ಲಿಂಗ್ ಕೃಷ್ಣ ಅದು ಖರೀದಿಸಿದ ಖುರ್ಚಿಯಲ್ಲ, ಅದನ್ನು ನಮ್ಮ ಕಲಾ ತಂಡದವರು ಮಾಡಿದ್ದರು, ಚಿತ್ರ ಮುಗಿದು ಹಲವಾರು ತಿಂಗಳು ಕಳೆದಿರುವುದರಿಂದ ಅದನ್ನು ಹುಡುಕಿ ಕೊಡಲು ಕಲಾ ತಂಡಕ್ಕೆ ಹೇಳಿದ್ದೇನೆ, ರಾಘಣ್ಣನವರ ವಿಡಿಯೋ ನೋಡಿದ ತಕ್ಷಣ ಈ ಕೆಲಸ ಮಾಡಿದೆ ಎಂದಿದ್ದಾರೆ. ಈ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಅವರ ಆಸೆಯನ್ನು ಈಡೇರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ನಟ ಡಾರ್ಲಿಂಗ್ ಕೃಷ್ಣ.

  ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ಒಳ್ಳೆಯ ಕಲೆಕ್ಷನ್

  ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ಒಳ್ಳೆಯ ಕಲೆಕ್ಷನ್

  ಇನ್ನೂ ಮುಂದುವರೆದು ಮಾತನಾಡಿದ ಡಾರ್ಲಿಂಗ್ ಕೃಷ್ಣ ಶುಕ್ರವಾರಕ್ಕಿಂತ ಶನಿವಾರ ಹಾಗೂ ಶನಿವಾರಕ್ಕಿಂತ ಭಾನುವಾರದ ಕಲೆಕ್ಷನ್ ಭರ್ಜರಿಯಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಚಿತ್ರತಂಡ ಒಟ್ಟಾರೆ ಕಲೆಕ್ಷನ್ ಎಷ್ಟಾಗಿದೆ ಹಾಗೂ ಮೊದಲ ದಿನದ ನಿಖರವಾದ ಕಲೆಕ್ಷನ್ ಎಷ್ಟು ಎಂಬುದನ್ನು ರಿವೀಲ್ ಮಾಡಲಿಲ್ಲ.

   ಐವತ್ತು ದಿನದ ನಂತರವಷ್ಟೇ ಒಟಿಟಿ

  ಐವತ್ತು ದಿನದ ನಂತರವಷ್ಟೇ ಒಟಿಟಿ

  ಇನ್ನು ಲಕ್ಕಿಮ್ಯಾನ್ ಇದೇ ತಿಂಗಳ 23ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತಾಗಿ ಮಾತನಾಡಿದ ಕೃಷ್ಣ ಯಾವುದೇ ಕಾರಣಕ್ಕೂ ಇಷ್ಟು ಬೇಗ ಒಟಿಟಿಯಲ್ಲಿ ಲಕ್ಕಿಮ್ಯಾನ್ ಬಿಡುಗಡೆಯಾಗುವುದಿಲ್ಲ, ಇದೆಲ್ಲಾ ಸುಳ್ಳು ಎಂದಿದ್ದಾರೆ. ಹಾಗೂ ಸಿನಿಮಾ ಕನಿಷ್ಟವೆಂದರೂ ಐವತ್ತು ದಿನ ಚಿತ್ರಮಂದಿರದಲ್ಲಿ ರನ್ ಆಗಲಿದೆ ಹಾಗೂ ದೇವರ ದರ್ಶನವನ್ನು ದೇವಸ್ಥಾನ ಮಾಡಿದರೆ ಚಂದ, ಮನೆಯಲ್ಲಲ್ಲ ಎಂದು ಕೃಷ್ಣ ಇದೇ ವೇಳೆ ಮಾತನಾಡಿದರು.

  English summary
  Darling Krishna responds to Raghavendra Rajkumar's request about chair which was used by Appu
  Wednesday, September 14, 2022, 13:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X