ಅಪ್ಪು ಕಂಡು ಚಿತ್ರಮಂದಿರದಲ್ಲೇ ಗಳಗಳನೆ ಅತ್ತ ಫ್ಯಾನ್ಸ್; ಭಾವುಕ ವಿಡಿಯೋ ಹಂಚಿಕೊಂಡ ಲಕ್ಕಿಮ್ಯಾನ್ ಕೃಷ್ಣ

Darling Krishna shared an emotional video of Lucky Man movie audience reaction

ಲಕ್ಕಿ ಮ್ಯಾನ್ ಶುಕ್ರವಾರ ರಾಜ್ಯದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಬಿಡುಗಡೆಯ ಹಿಂದಿನ ದಿನದ ಸಂಜೆಯೇ ರಾಜ್ಯದ ಪ್ರಮುಖ ನಗರಗಳ ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್ ಚಿತ್ರದ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಪ್ರೀಮಿಯರ್ ಶೋ ಟಿಕೆಟ್‌ಗಳನ್ನು ಮುಗಿಬಿದ್ದು ಖರೀದಿಸಿದ್ದರು.

ಇನ್ನು ಪ್ರೀಮಿಯರ್ ಶೋಗಿಂತ ಹೆಚ್ಚಾಗಿ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯ ದಿನದ ಪ್ರಥಮ ಪ್ರದರ್ಶನ ವೀಕ್ಷಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಕೆಲಕಾಲ ಚಿತ್ರಮಂದಿರದ ಮುಂದೆ ನೂಕುನುಗ್ಗಲು ಉಂಟಾಗಿತ್ತು. ಅದೆಷ್ಟೋ ತಿಂಗಳುಗಳ ನಂತರ ಕೆ ಜಿ ರಸ್ತೆಯ ಚಿತ್ರಮಂದಿರವೊಂದರ ಮುಂದೆ ಈ ಮಟ್ಟಿಗಿನ ಜನಜಂಗುಳಿಯ ದೃಶ್ಯ ಕಂಡುಬಂದಿತ್ತು. ಹೌದು, ಹಲವಾರು ತಿಂಗಳುಗಳಿಂದ ಮುಚ್ಚಿದ್ದ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಪುನಃ ತೆರೆದಿವೆ.

ನರ್ತಕಿ ಚಿತ್ರಮಂದಿರ ಇದೇ ಲಕ್ಕಿ ಮ್ಯಾನ್ ಚಿತ್ರದ ಮೂಲಕ ಮತ್ತೆ ಆರಂಭಗೊಂಡಿತು. ಪುನೀತ್ ರಾಜ್ ಕುಮಾರ್ ಅವರಿಗೆ ವೈಯಕ್ತಿಕವಾಗಿ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿದ್ದ ನರ್ತಕಿಯಲ್ಲಿ ಲಕ್ಕಿ ಮ್ಯಾನ್ ಪ್ರಥಮ ಪ್ರದರ್ಶನ ನೋಡಿದವರೇ 'ಲಕ್ಕಿ ಮ್ಯಾನ್' ಎಂದು ಅಭಿಮಾನಿಗಳು ಚಿತ್ರ ಮುಗಿದ ನಂತರ ಹೇಳಿಕೊಳ್ಳತೊಡಗಿದರು. ಇದಕ್ಕೆ ಕಾರಣ ನರ್ತಕಿ ಚಿತ್ರಮಂದಿರದಲ್ಲಿ ಇದ್ದ ಸೆಲೆಬ್ರೇಷನ್ ಮತ್ತು ಎಮೋಷನ್. ಚಿತ್ರಮಂದಿರದೊಳಗೆ ಅಪ್ಪು ಎಂಟ್ರಿಗೆ ಹೂ ಕುಂಡ ಹಚ್ಚಿ, ಬ್ಲಾಸ್ಟರ್ಸ್ ಸಿಡಿಸಿ ಸಂಭ್ರಮಿಸಲಾಯಿತು.

ಈ ಸಂತಸದ ನಂತರ ಅಪ್ಪು ನಮ್ಮ ಜತೆ ಇಲ್ಲ ಎಂದು ಅಭಿಮಾನಿಗಳು ಚಿತ್ರಮಂದಿರದಲ್ಲಿಯೇ ಭಾವುಕರಾದರು. ಹೀಗೆ ಪುನೀತ್ ತೆರೆಮೇಲೆ ನಟಿಸುತ್ತಿದ್ದರೆ ಚಿತ್ರಮಂದಿರದಲ್ಲಿದ್ದ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಈ ದೃಶ್ಯಗಳನ್ನು ನಟ ಡಾರ್ಲಿಂಗ್ ಕೃಷ್ಣ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೊ ವೀಕ್ಷಿಸುವ ವೀಕ್ಷಕರಿಗೂ ಸಹ ಒಂದು ಕ್ಷಣ ಬೇಸರವಾಗದೇ ಇರದು.

ಚಿತ್ರ ಕೊನೆಗೊಳ್ಳುವ ಸಮಯದಲ್ಲಿ ಅಭಿಮಾನಿಗಳು ಅಪ್ಪುವನ್ನು ನೆನೆದು ಕಣ್ಣೀರು ಇಡುತ್ತಿರುವ ಹಲವು ದೃಶ್ಯಗಳು ಹಾಗೂ ನಟ ಡಾರ್ಲಿಂಗ್ ಕೃಷ್ಣ ಕೂಡ ಭಾವುಕರಾದ ದೃಶ್ಯ ಈ ವಿಡಿಯೋದಲ್ಲಿವೆ.

More from Filmibeat

English summary
Darling Krishna shared an emotional video of Lucky Man movie audience reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X