twitter
    For Quick Alerts
    ALLOW NOTIFICATIONS  
    For Daily Alerts

    ಆದಿ-ನಿಧಿಮಾ 'ಮಿಲನ'ಕ್ಕೆ ಆರು ವರ್ಷ: ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

    |

    'ಲವ್ ಮಾಕ್‌ಟೇಲ್' ಚಿತ್ರದಲ್ಲಿ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ಕ್ಯೂಟ್ ಜೋಡಿಯಾಗಿ ಕಾಣಿಸಿಕೊಂಡವರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ನಿಜ ಜೀವನದ ಜೋಡಿಯಾದ ಇಬ್ಬರೂ ಈ ಚಿತ್ರದ ನಿರ್ದೇಶನ, ನಿರ್ಮಾಣ, ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ತೊಡಗಿಸಿಕೊಂಡಿದ್ದು. ಒಂದು ರೀತಿ 'ಲವ್ ಮಾಕ್‌ಟೇಲ್' ಈ ಜೋಡಿಯ ಮೊದಲ ಕೂಸು. ಎರಡನೆಯ ಕೂಸಿಗೂ ಇಬ್ಬರೂ ಈಗಾಗಲೇ ಸಿದ್ಧತೆ ನಡೆಸಿದ್ದಾರೆ!

    Recommended Video

    Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Get Adjusted with Corona

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಸಮಾಗಮ ನಡೆದು ಮೇ 18ಕ್ಕೆ ಆರು ವರ್ಷ. ಇಬ್ಬರೂ ಮೊದಲು 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲಿ ನಟಿಸಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಬಹುತಾರಾಗಣವಿತ್ತು. ನಂತರ 'ಚಾರ್ಲಿ' ಚಿತ್ರದಲ್ಲಿ ಕೂಡ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ನಟಿಸಿದ್ದರು. ಈ ವೇಳೆಗಾಗಲೇ ಅವರು ತಮ್ಮ ವೈಯಕ್ತಿಕ ಬದುಕಿನ ದಾರಿ ಕಂಡುಕೊಂಡಿದ್ದರು. ಮುಂದೆ ಓದಿ...

    ಆರು ವರ್ಷದ ಪಯಣ

    ಆರು ವರ್ಷದ ಪಯಣ

    ತಮ್ಮ ಗೆಳೆತನ, ಪ್ರೇಮ ಪಯಣಕ್ಕೆ ಆರು ವರ್ಷ ತುಂಬಿದ ಸಂತಸವನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಈ ಜತೆಗಿನ ಪಯಣದ ಏಳುಬೀಳುಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಅದು ಹೂವಿನ ಹಾದಿಯೇನೂ ಆಗಿರಲಿಲ್ಲ ಎಂಬ ಕಹಿಸತ್ಯವನ್ನೂ ಹಂಚಿಕೊಂಡಿದ್ದಾರೆ.

    ಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ 'ಲವ್ ಮಾಕ್‌ಟೇಲ್' ತಂಡಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ 'ಲವ್ ಮಾಕ್‌ಟೇಲ್' ತಂಡ

    ತುಂಬಾ ಕಲಿತಿದ್ದೇನೆ

    ತುಂಬಾ ಕಲಿತಿದ್ದೇನೆ

    ಮೊದಲ ಐದು ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಯಾವುದೂ ಚೆನ್ನಾಗಿ ನಡೆದಿರಲಿಲ್ಲ. ಆದರೆ ವೈಯಕ್ತಿಕವಾಗಿ ಅದು ಅತ್ಯುತ್ತಮ ದಿನಗಳು. ಈ ದಿನಗಳು ನನಗೆ ಬದುಕಿನ ಅದ್ಭುತ ಪಾಠಗಳನ್ನು ಕಲಿಸಿದವು ಎಂದು ಕೃಷ್ಣ ತಿಳಿಸಿದ್ದಾರೆ.

    ವೃತ್ತಿಯಲ್ಲಿ ಸೋತರೂ ಖುಷಿಯಾಗಿರಬಲ್ಲ

    ವೃತ್ತಿಯಲ್ಲಿ ಸೋತರೂ ಖುಷಿಯಾಗಿರಬಲ್ಲ

    ವ್ಯಕ್ತಿಯೊಬ್ಬ ತನ್ನ ಖಾಸಗಿ ಜೀವನದಲ್ಲಿ ಖುಷಿಯಾಗಿದ್ದರೆ ವೃತ್ತಿ ಬದುಕಿನಲ್ಲಿ ಏನೇ ಘಟಿಸಿದರೂ ಆತ ಸಂತಸದಿಂದ ಇರಬಲ್ಲ ಎಂಬುದನ್ನು ಇದು ನನಗೆ ತೋರಿಸಿದೆ. ನಾವು ಒಟ್ಟಾಗಿ ಹೋರಾಡಿದ್ದೇವೆ. ಒಟ್ಟಾಗಿ ಕೆಲಸ ಮಾಡಿದ್ದೇವೆ. ಹಾಗೆಯೇ ಜತೆಯಾಗಿ ಯಶಸ್ಸನ್ನು ಸಂಭ್ರಮಿಸಿದ್ದೇವೆ ಎಂದು ಮಿಲನಾ ಅವರೊಂದಿಗಿನ ಜರ್ನಿಯನ್ನು ಸುಂದರವಾಗಿ ಹೇಳಿದ್ದಾರೆ.

    ಇನ್ನೂ ಸುದೀರ್ಘ ಪಯಣವಿರಲಿ

    ಇನ್ನೂ ಸುದೀರ್ಘ ಪಯಣವಿರಲಿ

    ನಾನು ನಿನ್ನೊಂದಿಗೆ ಸಾಗಿರುವುದು ಸಣ್ಣ ಪ್ರಯಾಣದಲ್ಲಿ ಮಾತ್ರ. ಇನ್ನೂ ಸಾಕಷ್ಟು ಸುದೀರ್ಘ ಹಾದಿ ಕ್ರಮಿಸುವುದು ಇದೆ. ಈ ಪಯಣ ಬಹಳ ಸುದೀರ್ಘವಾಗಿರಬೇಕು ಎಂದು ಬಯಸುತ್ತೇನೆ. ಎಷ್ಟು ಸುದೀರ್ಘವೆಂದರೆ ಅದಕ್ಕೆ ಅಂತ್ಯವೇ ಇರಬಾರದು. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೃಷ್ಣ ಬರೆದಿದ್ದಾರೆ.

    ಮದರಂಗಿ ತಿರಸ್ಕರಿಸಿದ್ದ ಮಿಲನಾ

    ಮದರಂಗಿ ತಿರಸ್ಕರಿಸಿದ್ದ ಮಿಲನಾ

    ಒಂದು ವಾರದ ಹಿಂದೆ ಕೃಷ್ಣ, ತಮ್ಮ ಮೊದಲ ಚಿತ್ರ 'ಮದರಂಗಿ'ಗೆ ಏಳು ವರ್ಷ ತುಂಬಿದ ಖುಷಿಯನ್ನು ಹಂಚಿಕೊಂಡಿದ್ದರು. ಈ ಚಿತ್ರದ 'ಡಾರ್ಲಿಂಗ್ ಡಾರ್ಲಿಂಗ್ ಕಂ ಕಂ ಡಾರ್ಲಿಂಗ್' ಹಾಡು ಇಂದಿಗೂ ಅನೇಕರ ಫೇವರಿಟ್ ಆಗಿದೆ. ಈ ಪಾತ್ರ ನಟಿಸಲು ಮೊದಲು ಮಿಲನಾ ನಾಗರಾಜ್‌ಗೆ ಆಫರ್ ನೀಡಲಾಗಿತ್ತು. ಆದರೆ ಅವರನ್ನು ಅದನ್ನು ತಿರಸ್ಕರಿಸಿದ್ದರು ಎಂಬುದನ್ನು ತಿಳಿಸಿದ್ದರು. ಬಹುಶಃ ಮಿಲನಾ ಆ ಚಿತ್ರದಲ್ಲಿ ನಟಿಸಿದ್ದರೆ ಆಗಲೇ ಯಶಸ್ವಿ ಜೋಡಿಯಾಗಿ ಗುರುತಿಸಿಕೊಳ್ಳುವ ಅವಕಾಶವಿತ್ತು.

    English summary
    Love Mocktail fame Darling Krishna has shared his happiness of the journey with Milana Nagaraj.
    Tuesday, May 19, 2020, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X